Belagavi News In Kannada | News Belgaum

ವಿದ್ಯುತ್ ತಂತಿ ತಗುಲಿ ಲಾರಿಯಲ್ಲಿದ್ದ ಭತ್ತದ ಮೇವು ಭಸ್ಮ

ಬಳ್ಳಾರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​​ ಆಗಿ ಮೇವಿನ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿರೋ ಘಟನೆ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದ ಬಳಿ ಸಂಭವಿಸಿದೆ.
ಲಾರಿಯಲ್ಲಿ ಭತ್ತದ ಮೇವು ತುಂಬಿಕೊಂಡು ಗುತ್ತಿಗೆನೂರು ಗ್ರಾಮದಿಂದ ಬಾಗಲಕೋಟೆ ಜಿಲ್ಲೆಗೆ ತೆರಳುತ್ತಿತ್ತು. ಇದೇ ವೇಳೆ ಭತ್ತದ ಹುಲ್ಲಿಗೆ ವಿದ್ಯುತ್ ತಂತಿ ತಗುಲಿದ ಕೆಲ ಸಮಯದಲ್ಲೇ‌ ಮೇವಿಗೆ ಬೆಂಕಿ ಹೊತ್ತಿಕೊಂಡಿದೆ. ಇನ್ನು, ವಿದ್ಯುತ್ ತಂತಿ ತಗುಲಿದ ಕೂಡಲೇ ಚಾಲಕ ಲಾರಿಯನ್ನು ಊರಿನ ಹೊರಗಡೆವರೆಗೆ ಚಲಾಯಿಸಿಕೊಂಡು ಹೋಗಿದ್ದಾನೆ.
ಸದ್ಯ ಲಾರಿ ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಲ್ಲ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕುರುಗೋಡು ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ./////