Belagavi News In Kannada | News Belgaum

ಕೋಟಿ ಕೋಟಿ ಲೂಟಿ ಮಾಡಿ ಮುನ್ನುಗ್ಗುತ್ತಿದೆ ‘ಸಲಾರ್’ ಚಿತ್ರ

ಮುಂಬೈ: ಸಲಾರ್​ ಪ್ರಭಾಸ್​ ನಟನೆಯ ಪ್ರಶಾಂತ್​ ನೀಲ್​ ನಿರ್ದೇಶನದ ಸಿನಿಮಾ. ವಿಶ್ವದಾದ್ಯಂತ ಬಿಡುಗಡೆಗೊಂಡು ಈ ಸಿನಿಮಾದ ದೊಡ್ಡ ಸಂಚಲನ ಸೃಷ್ಟಿಸಿದೆ. ಬಹುಜನರ ಮನ ಗೆದ್ದಿರುವ ಈ ಸಿನಿಮಾ ಒಟ್ಟು ಎಷ್ಟು ಕಲೆಕ್ಷನ್​ ಮಾಡಿದೆ ಗೊತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಪ್ರಭಾಸ್​ ‘ಸಲಾರ್​’ ಸಿನಿಮಾದ 5 ದಿನದಲ್ಲಿ ಎಷ್ಟು ಕಲೆ ಮಾಡಿದೆ ಎಂಬ ಬಗ್ಗೆ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮನೋಬಾಲ ವಿಜಯಬಾಲ ಎಂಬ ಟ್ವಿಟ್ಟಿಗ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕೋಟಿ ಕೋಟಿ ಬಾಚಿದ ಈ ಸಿನಿಮಾ ಒಟ್ಟಾರೆ 500 ಕೋಟಿ ದಾಟಿಯಂತು ಮುನ್ನುಗ್ಗಿದೆ.
ಮೊದಲ ದಿನ- 176.52 ಕೋಟಿ
ಎರಡನೇ ದಿನ- 101.39 ಕೋಟಿ
ಮೂರನೇ ದಿನ- 95.24 ಕೋಟಿ
ನಾಲ್ಕನೇ ದಿನ- 76.91 ಕೋಟಿ
ಐದನೇ ದಿನ- 40.17 ಕೋಟಿ
ಒಟ್ಟು-490.23 ಕೋಟಿ ದಾಟಿದೆ
ಸದ್ಯ ಪ್ರಭಾಸ್​ ನಟನೆಯ ಸಲಾರ್​ ಸಿನಿಮಾಗೆ ಬಾಲಿವುಡ್​ ನಟ ಶಾರುಖ್​ ಖಾನ್​ ನಟನೆಯ ಡಂಕಿ ಸಿನಿಮಾ ಪೈಪೋಟಿ ನೀಡುತ್ತಿದೆ. ಡಂಕಿ ಕೂಡ ತನ್ನ ಗಳಿಕೆಯನ್ನು ಮುಂದುವರಿಸಿದೆ. ಈ ಸಿನಿಮಾ ಕೂಡ ಅನೇಕ ಪ್ರೇಕ್ಷಕರ ಮನಗೆದ್ದಿದೆ./////