Belagavi News In Kannada | News Belgaum

ಹುಕ್ಕೇರಿ ಅರ್ಬನ್ ಬ್ಯಾಂಕಿಗೆ ಅತ್ಯುತ್ತಮ ಪ್ರಶಸ್ತಿ ಗರಿ

ಹುಕ್ಕೇರಿ: ನಗರದ ಅರ್ಬನ್ ಬ್ಯಾಂಕಿಗೆ ಜಿಲ್ಲಾ ಅತ್ಯುತ್ತಮ ಸಹಕಾರಿ ಬ್ಯಾಂಕ ಪ್ರಶಸ್ತಿಗೆ ಭಾಜನವಾಗಿದೆ.
ಪ್ರತಿ ವರ್ಷ ಬೆಳಗಾವಿ ಜಿಲ್ಲಾ ಪಟ್ಟಣ ಸಹಕಾರಿ ಬ್ಯಾಂಕ ಒಕ್ಕೂಟ ಕೊಡಮಾಡುವ ಪ್ರಶಸ್ತಿಯನ್ನು ಈ ಬಾರಿ ಹುಕ್ಕೇರಿ ಅರ್ಬನ್ ಬ್ಯಾಂಕಿಗೆ ನೀಡಿ ಗೌರವಿಸಲಾಗಿದೆ.
ಬೆಳಗಾವಿ ನಗರದಲ್ಲಿ ಜರುಗಿದ ಸಮಾರಂಭದಲ್ಲಿ ಒಕ್ಕೂಟ ಅದ್ಯಕ್ಷ ಬಾಳಪ್ಪಾ ಖಗ್ಗಣಗಿ ಮತ್ತು ಎಂ ಡಿ ಚುನಮರಿ ಯವರು ಬ್ಯಾಂಕ ಅದ್ಯಕ್ಷ ಜಯಗೌಡಾ ಪಾಟೀಲ ಇವರಿಗೆ ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ಅರ್ಭನ್ ಬ್ಯಾಂಕ ನಿರ್ದೆಶಕರಾದ ಜಿ ಆಯ್ ಗಂಧ, ವ್ಯವಸ್ಥಾಪಕ ಕೆ ಬಿ ಬಂದಾಯಿ, ಮಾಜಿ ವ್ಯವಸ್ಥಾಪಕ ಆರ್ ಸಿ ಪಟ್ಟಣಶೆಟ್ಟಿ ಮತ್ತು ಬೆಳಗಾವಿ ಪಟ್ಟಣ ಸಹಕಾರಿ ಬ್ಯಾಂಕ ಒಕ್ಕೂಟದ ಪದಾಧಿಕಾರಿಗಳು, ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪ್ರಶಸ್ತಿ ಪಡೆದು ಮಾತನಾಡಿದ ಜಯಗೌಡಾ ಪಾಟೀಲ ಬ್ಯಾಂಕಿನ ಪ್ರಗತಿಗೆ ಸಹಕರಿಸಿದ ಹಿಂದಿನ ಮತ್ತು ಪ್ರಸ್ತುತ ಆಡಳಿತ ಮಂಡಳಿ ಸದಸ್ಯರ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಗ್ರಾಹಕರ ಸಹಕಾರದಿಂದ ಈ ಪ್ರಶಸ್ತಿ ಲಭಿಸಿದೆ ಎಂದರು.  ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಪಟ್ಟಣ ಸಹಕಾರಿ ಬ್ಯಾಂಕಿನ ಒಕ್ಕೂಟದ ಸದಸ್ಯರು ಮತ್ತು ವಿವಿಧ ಸಹಕಾರಿ ಬ್ಯಾಂಕಗಳ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.//////