Belagavi News In Kannada | News Belgaum

ಜಾತಿಗಣತಿ ವರದಿ ಮಂಡಿಸಲು ಜಾಗತಿಕ ಲಿಂಗಾಯತ ಮಹಾಸಭಾ ಒತ್ತಾಯ

ಬೆಳಗಾವಿ: ಜಾತಿಯ ಗಣತಿ ವರದಿಯನ್ನು ಸ್ವೀಕಾರ ಮಾಡಬೇಕು ಹಾಗೂ ಎರಡು ಸದನಗಳಲ್ಲಿ ಮಂಡಿಸಿ ಚರ್ಚೆ ಮಾಡಬೇಕು ಎಂದ ನಿವೃತ್ತ ಐಎಎಸ್ ಅಧಿಕಾರಿ ಜಾಗತಿಕ ಲಿಂಗಾಯತ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ್ ಜಮಾದಾರ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, 2014ರಲ್ಲಿ ಕರ್ನಾಟಕ ಸರ್ಕಾರ ರಾಜ್ಯದ ಬಜೆಟ್ ದಿಂದ 160 ಕೋಟಿಗಳನ್ನು ಮೀಸಲಿಟ್ಟು ಈ ವರದಿಯನ್ನು ಸಿದ್ಧಪಡಿಸಿತ್ತು. ಆದರೆ 8 ವರ್ಷಗಳ ಕಾಲ ಈ ವರದಿ ಸರ್ಕಾರ ಸ್ವೀಕರಿಸದೆ ಇರಲು ಕಾರಣವೇನು ಇದನ್ನು ಕೂಡಲೇ ಸ್ವೀಕರಿಸಬೇಕು ಹಾಗೂ ಸದನಗಳಲ್ಲಿ ಚರ್ಚೆ ಆಗಬೇಕೆಂದು ಎಂದು ಒತ್ತಯಿಸಿದರು.

ಇಲ್ಲಿವರೆಗೆ ಸ್ವೀಕರಿಸದೆ ಇರುವ ಕಾರಣ ಇದರ ಹಿಂದೆ ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಖಿಲ ಭಾರತ ವೀರಶೈವ ಮಹಾಸಭೆಯ 24ನೇ ಅಧಿವೇಶನದಲ್ಲಿ 8 ನಿರ್ಣಯಗಳನ್ನ ಸ್ವೀಕರಿಸಿದೆ ಅವುಗಳಲ್ಲಿ 7 ಪ್ರಮುಖ ನಿರ್ಣಯಗಳನ್ನು‌ ಜಾಗತಿಕ ಲಿಂಗಾಯತ ಮಹಾಸಭೆ ಬೆಂಬಲಿಸುತ್ತದೆ ಎಂದರು.

7 ನಿರ್ಣಯಗಳಲ್ಲಿ ಲಿಂಗಾಯತರು ಹಿಂದುಗಳಲ್ಲ ಆದ್ದರಿಂದ ಮುಂಬರುವ ಜನಗಣತಿಯಲ್ಲಿ ಲಿಂಗಾಯತರು ತಮ್ಮ ಧರ್ಮವನ್ನು ಹಿಂದು ಎಂಬ ಭರಿಸಬಾರದು ಅದಕ್ಕೆ ಬದಲಾಗಿ ಲಿಂಗಾಯತ ವೀರಶೈವ ಎಂದು ಭರಿಸಬೇಕು. ಬಿ.ಎಸ್. ಯಡಿಯೂರಪ್ಪನವರು ಲಿಂಗಾಯಿತರು ಹಿಂದುಗಳಲ್ಲ ಎಂಬುವುದು ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ನಿರ್ಣಯಕ್ಕೆ ಬದ್ಧರಾಗಿದ್ದಾರೆ ? ಅಥವಾ ಇಲ್ಲ ಎಂಬುದು ತಮ್ಮ ನಿಲುವುವನ್ನು ಸ್ಪಷ್ಟಪಡಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭೆ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಈ ವಿಷಯದಲಿ ಅವರನ್ನು ಅಗ್ರಹಿಸುತದೆ ಮತ್ತು ತಮ್ಮ ನಿಲುವು ಬಹಿರಂಗಪಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಸವರಾಜ್ ರೊಟ್ಟಿ,  ಜಾಗತಿಕ ಲಿಂಗಾಯತ ಮಹಾ ಸಭೆಯ ಬೆಳಗಾವಿ ಜಿಲ್ಲಾಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.//////