Belagavi News In Kannada | News Belgaum

ಭಾರತ ಚುನಾವಣಾ ಆಯೋಗ: ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ಪರಿಷ್ಕೃತ ವೇಳಾ ಪಟ್ಟಿ ಪ್ರಕಟ

ಬೆಳಗಾವಿ, ಡಿ.28:  ಭಾರತ ಚುನಾವಣಾ ಆಯೋಗ  ಡಿ.26 ರಂದು ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ಪರಿಷ್ಕೃತ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.
ಮತದಾರ ಪಟ್ಟಿಯ ಕುರಿತು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಡಿ.26 ರಂದು ನಿಗದಿಪಡಿಸಿದ್ದು,  ದಿನಾಂಕವನ್ನು ಪರಿಷ್ಕರಿಸಿ ಜನೆವರಿ 12, 2024 ರಂದು ನಿಗದಿಪಡಿಸಲಾಗಿದೆ.
ಅದೇ ರೀತಿಯಲ್ಲಿ ಆರೋಗ್ಯ ನಿಯತಾಂಕಗಳನ್ನು ಪರಿಶೀಲಿಸುವುದು ಮತ್ತು ಅಂತಿಮ ಪ್ರಕಟಣೆಗೆ ಆಯೋಗಗಳ ಅನುಮತಿಯನ್ನು ಪಡೆಯುವುದು.
ಡೇಟಾಬೇಸ್ ಅನ್ನು ನವೀಕರಿಸುವುದು ಮತ್ತು ಪೂರಕಗಳ ಮುದ್ರಣಕ್ಕೆ  ಜನವರಿ 1, 2024 ರಂದು ದಿನಾಂಕ ನಿಗದಿಪದಡಿಸಿದ್ದು, ಅದನ್ನು ಜನವರಿ 17, 2024 ದಿನಾಂಕ ಎಂದು  ಪರಿಷ್ಕರಿಸಲಾಗಿದೆ.
ಮತದಾರ ಪಟ್ಟಿಯ ಅಂತಿಮ ಪ್ರಕಟಣೆ ಜನವರಿ 5, 2024 ರಂದು ನಿಗದಿಪಡಿಸಿದ ದಿನಾಂಕವನ್ನು ಜನವರಿ 22, 2024 ಪರಿಷ್ಕರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.