Belagavi News In Kannada | News Belgaum

ಮಹಿಳೆಯರು ಅಭಿವೃದ್ಧಿ ಹೊಂದಲು ಧರ್ಮಸ್ಥಳ ಯೋಜನೆ ಸಹಕಾರಿ: ಸತೀಶ್ ನಾಯ್ಕ್

ಬೆಳಗಾವಿ:  ” ಧರ್ಮಸ್ಥಳ ಯೋಜನೆಗಳಿಂದ ಸಮಾಜದ ಮಹಿಳೆಯರು  ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತಿದ್ದು,  ಮಹಿಳೆಯರ ಪ್ರಗತಿಗೆ ಸ್ವ -ಸಹಾಯ ಸಂಘಗಳು ಶಕ್ತಿಯಾಗಿ ನಿಂತಿವೆ”  ಎಂದು  ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ್ ಹೇಳಿದರು.

ಇಲ್ಲಿನ ವಡಗಾಂವ್ ವಲಯದ ಶ್ರೀ ಜಿವ್ಹೇಶ್ವರ ಸಭಾಭವನದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಲಾದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು,

ಸಮಾಜ ಮತ್ತು ಕುಟುಂಬ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವೆಂದು ನಂಬಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬೆನ್ನೆಲುಬಾಗಿ ನಿಂತಿದೆ. ಸಾಕಷ್ಟು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಬೇಕು ಎಂದು ಹೇಳಿದರು.

ದಿವ್ಯ ಸಾನಿಧ್ಯ ವಹಿಸಿ  ಹುಂಚಾನಟ್ಟಿ ರುದ್ರಸ್ವಾಮಿ ಮಠದ  ಶ್ರೀ ಚನ್ನಬಸವ ದೇವರು ಸ್ವಾಮಿಜೀ ಮಾತನಾಡಿ,   ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ   ನೆಮ್ಮದಿ ಅಡಗಿದೆ,ಧರ್ಮ ದಾರಿಯಲ್ಲಿ ಸಾಗಿದಾಗ ಮಾತ್ರ ಇಂತಹ ಸಭೆಗಳಿಗೆ ಶೋಭೆ ಎಂದರು.

ಗ್ರಾಮೀಣ ಭಾರತದ ಮಹಿಳೆಯರು ಮತ್ತು ಮಕ್ಕಳಿಗೆ ತುರ್ತು ಸಹಾಯದ ಅಗತ್ಯವಿದೆ ಎಂಬುದನ್ನು ಮನಗಂಡ ಡಾ.ಹೆಗ್ಗಡೆಯವರು ಜ್ಞಾನ ವಿಕಾಸ ಮತ್ತು ಸಿರಿಯಂತಹ ವಿಶೇಷ ಸ್ವ-ಸಹಾಯ ಕಾರ್ಯಕ್ರಮಗಳನ್ನು ಪರಿಚಯಿಸಿದರು. ಇದಲ್ಲದೆ, ಅಂತಹ ಉದ್ಯಮದ ಮೊದಲು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ  ಕೆಲಸಗಳನ್ನು ಮಾಡಿದ್ದಾರೆ.  ಅವರ ಕೃಪೆಯಿಂದ ಮಹಿಳೆಯರು ಬದುಕುಕಟ್ಟಿಕೊಂಡಿದ್ದಾರೆ.
ಡಾ.  ಡಿ.ವೀರೇಂದ್ರ ಹೆಗ್ಗಡೆಯವರು ತಮ್ಮ ಸಂಸ್ಥೆಯ ಮೂಲಕ ಜನರಲ್ಲಿ ಸಂಸ್ಕಾರ, ಶಿಸ್ತು, ಭಕ್ತಿ,  ಭಾವನೆ ಬೆಳೆಸಿದ್ದಾರೆ  ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಬಾಲಚಂದ್ರ ಚೌಧರಿ , ಯೋಜನಾಧಿಕಾರಿ ಮಂಜುನಾಥ ಎನ್.ಆರ್,  ನಗರ ಸೇವಕರಾದ  ಉದಯ ವಿಠ್ಠಲ್ ಉಪರಿ,  ದೀಪಾಲಿ ಎಸ್ ಟೋಪಗಿ, ವಲಯ ಮೇಲ್ವಿಚಾರಕರಾದ ಉಮೇಶ್ ಗೌಡ ರವರು ರವರು ಸ್ವಾಗತಿಸಿದರು, ಮೇಲ್ವಿಚಾರಕ ಪರಮೇಶ್ವರ್ ಗೊಂಡ  ನಿರೂಪಿಸಿ, ವಂದಿಸಿದರು. ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಗ್ರಾಮದ ಗಣ್ಯರು ಹಾಗೂ ಇತತರು ಇದ್ದರು.