Belagavi News In Kannada | News Belgaum

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಾಲಯಕ್ಕೆ ಅನಿಲ ಬೆನಕೆ ಭೇಟಿ

ಬೆಳಗಾವಿ,ದಿನಾಂಕ 29-12-2023 ರಂದು ನೂತನವಾಗಿ ರಾಜ್ಯ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರಾಗಿ ನೇಮಕಾಗೊಂಡ ಮೇಲೆ ಕರ್ನಾಟಕ ಉತ್ತರ ಪ್ರಾಂತದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹುಬ್ಬಳ್ಳಿಯ ಪ್ರಾಂತ ಕಾರ್ಯಾಲಯಕ್ಕೆ ಮಾಜಿ ಶಾಸಕ ಅನಿಲ ಬೆನಕೆ ಭೇಟಿ ನೀಡಿದರು. ಸಂಘದ ಸಂಸ್ಥಾಪಕರಾದ ಪರಮ ಪೂಜ್ಯನೀಯ ಡಾ. ಕೇಶವ ಬಲಿರಾಮ ಹೆಡ್ಗೆವಾರರವರ ಪ್ರತಿಮೆಗೆ ಮಾಲಾರ್ಷಣೆ ಮಾಡಿ ಆಶೀರ್ವಾದ ಪಡೆದರು.
ಅದರಂತೆಯೆ ಸಂಘದ ಹಿರಿಯ ಪ್ರಚಾರಕರೊಂದಿಗೆ ಹಾಗೂ ಸ್ವಯಂ ಸೇವಕರೊಂದಿಗೆ ಚರ್ಚಿಸಿ ಮಾರ್ಗದರ್ಶನವನ್ನು ಪಡೆದರು.