Belagavi News In Kannada | News Belgaum

ವಕೀಲ ವೃತ್ತಿಗೆ ಪವಿತ್ರ ಸ್ಥಾನ: ರಮೇಶ್ ಕತ್ತಿ

ಹುಕ್ಕೇರಿ: ಸಮಾಜದಲ್ಲಿ ವಕೀಲರಿಗೆ ವಿಶೇಷವಾದ ಗೌರವವಿದ್ದು ವೃತ್ತಿಗೆ ಚ್ಯುತಿ ಬರದಂತೆ ಸೇವೆ ಸಲ್ಲಿಸುವ ಮೂಲಕ ಮಾದರಿ ನ್ಯಾಯವಾದಿಗಳಾಗಿ ಹೊರಹೊಮ್ಮಬೇಕು ಎಂದು ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಕಿವಿಮಾತು ಹೇಳಿದರು.

ತಾಲೂಕಿನ ಬೆಲ್ಲದ ಬಾಗೇವಾಡಿಯ ತಮ್ಮ ಗ್ರಹ ಕಚೇರಿಯಲ್ಲಿ ಶನಿವಾರ ಹುಕ್ಕೇರಿ ನ್ಯಾಯವಾದಿಗಳ ಸಂಘದ ನೂತನ ಪದಾಧಿಕಾರಿಗಳು ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬದ್ಧತೆ ಹಾಗೂ ಸೇವಾ ಮನೋಭಾವದೊಂದಿಗೆ ಕಕ್ಷಿದಾರರ ಹಿತ ಕಾಪಾಡುವಲ್ಲಿ ನ್ಯಾಯವಾದಿಗಳು ಮುತುವರ್ಜಿ ವಹಿಸಬೇಕು ಎಂದು ಸಲಹೆ ಮಾಡಿದರು.

ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಎರಡನ್ನೂ ಸಮಾನವಾಗಿ ಸ್ವೀಕರಿಸಿ ಮುಂಬರುವ ದಿನಗಳಲ್ಲಿ ನ್ಯಾಯವಾದಿಗಳ ಸಂಘವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡಬೇಕು. ಇದಕ್ಕೆ ಬೇಕಾದ ಅಗತ್ಯ ಸಹಾಯ, ಸಹಕಾರ, ನೆರವು ನೀಡಲು ಕತ್ತಿ ಕುಟುಂಬ ಸದಾಕಾಲ ಬದ್ಧವಿದೆ ಎಂದು ಅವರು ಹೇಳಿದರು.

ಸಂಘದ ಕಾರ್ಯದರ್ಶಿ ಎಸ್‌.ಜಿ.ನದಾಫ್, ಮಹಿಳಾ ಪ್ರತಿನಿಧಿ ಅನಿತಾ ಕುಲಕರ್ಣಿ, ಹಿರಿಯ ನ್ಯಾಯವಾದಿಗಳಾದ ಕೆ. ಬಿ. ಕುರಬೇಟ, ಎಸ್.ಆರ್.ಶೆಟ್ಟಿ, ಸಿ.ಎಂ.ಸಂಸುದ್ದಿ, ಬಿ.ಆರ್.ಚಂದರಗಿ, ಭೀಮಸೇನ ಬಾಗಿ, ಬಿ.ವಿ.ಹುಂಡೆಕಾರ ಆರ್.ಬಿ.ಪಾಟೀಲ, ಸಂಜು ನಾಗನೂರಿ, ವೀರುಪಾಕ್ಷಿ ಹಳಿಜೋಳ, ವಿ.ಎ ಪಲ್ಲೆದ, ಎಚ್.ಎಲ್.ಪಾಟೀಲ, ಎಸ್.ಎಸ್.ಮರಿನಾಯಿಕ, ರಾಜೇಂದ್ರ ಮೋಶಿ, ಬಿ.ಎಸ್.ಕರಡಿ. ಆಶಾ ಸಿಂಗಾಡಿ, ರೂಪಾ ಬಡಗಾಂವಿ ಮತ್ತಿತರರು ಉಪಸ್ಥಿತರಿದ್ದರು.