Belagavi News In Kannada | News Belgaum

ಹೊಸ ವರ್ಷದ ಹೊಸ್ತಿಲಲ್ಲೇ ಎಣ್ಣೆ ಪ್ರಿಯರಿಗೆ ಶಾಕ್​

ಬೆಂಗಳೂರು: ಹೊಸ ವರ್ಷದ ಆಗಮನಕ್ಕೆ ಒಂದೇ ದಿನ ಬಾಕಿ. ಹೀಗಿರುವಾಗ ಕೆಲ ಮದ್ಯದ ದರ ಏರಿಕೆಗೆ ಕಂಪನಿಗಳು ನಿರ್ಧಾರ ಮಾಡಿವೆ. ಈ ಕುರಿತಾಗಿ ಅಬಕಾರಿ ಇಲಾಖೆಗೆ ಪತ್ರ ಬರೆದಿದೆ.
ಅಬಕಾರಿ ಇಲಾಖೆಗೆ ಬರೆದ ಪತ್ರದ ಮುಖಾಂತರ ಕಂಪನಿಗಳು ದರ ಏರಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

 

ಮದ್ಯ ತಯಾರಿಕೆ ಕಂಪನಿಗಳು ಓಟಿ, ಬಿಪಿ, 8 ಪಿಎಂ ದರ ಹೆಚ್ಚಳ ಮಾಡ್ತೇವೆ ಅಂತ ಅಬಕಾರಿ ಇಲಾಖೆಗೆ ಪತ್ರದಲ್ಲಿ ಹೇಳಿದೆ. ಮದ್ಯ ತಯಾರಿಕ ಕಂಪನಿಗಳು ಈಗಾಗಲೇ ಬಾರ್ ಮಾಲೀಕರಿಗೂ ಸಂದೇಶ ಕಳುಹಿಸಿದ್ದು, ದರ ಹೆಚ್ಚಳ ಮಾಡುವ ಬಗ್ಗೆ ಹೇಳಿದೆ. ಇನ್ನು ಪ್ರತಿ ಕ್ವಾಟರ್ ಮೇಲೆ 20-30 ರೂಪಾಯಿ ಹೆಚ್ಚಳ ಮಾಡುವುದಾಗಿ ಪತ್ರದಲ್ಲಿ ತಿಳಿಸಿದೆ.
ಮದ್ಯದ ದರ ಏರಿಕೆ
1. ಓಟಿ 180 ಎಂಎಲ್
ಸದ್ಯದ ದರ 100 ರೂಪಾಯಿ
ಜನವರಿ 1ರಿಂದ 123 ರೂಪಾಯಿ
2. ಬಿಪಿ 180 ಎಂಎಲ್
ಸದ್ಯದ ದರ 123 ರೂಪಾಯಿ
ಜನವರಿಯಿಂದ 159 ರೂಪಾಯಿ
3. 8PM (180 ಎಂಎಲ್)
ಸದ್ಯದ ದರ 100 ರೂಪಾಯಿ
ಜನವರಿಯಿಂದ 123 ರೂಪಾಯಿ