Belagavi News In Kannada | News Belgaum

ಸಚಿವರಿಂದ ಪ್ಲಾಸ್ಟಿಕ್ ರಸ್ತೆ ಕಾಮಗಾರಿಗೆ ಚಾಲನೆ

ಬೆಳಗಾವಿ: ರಾಜ್ಯದಲ್ಲಿ ಪ್ರಥಮ ಬಾರಿಗೆ ಪ್ಲಾಸ್ಟಿಕ್‌ ರಸ್ತೆ ಕಾಮಗಾರಿಗೆ ಪೌರಾಡಳಿತ ಸಚಿವ ರಹೀಂಖಾನ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಬೆಳಗಾವಿ ಮಹಾನಗರ ಪಾಲಿಕೆಯಿಂದ ರಾಜ್ಯದಲ್ಲಿ ಪ್ರಥಮ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮರು ಬಳಕೆ ಮಾಡಿ ನಗರದ ಪರಿಸರವನ್ನೂ ರಕ್ಷಿಸುವ ಉದ್ದೇಶದಿಂದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಪೌಡರ್‌ ಆಗಿ ಪರಿವರ್ತಿಸಿ ಪ್ಲಾಸ್ಟಿಕ್‌ ರಸ್ತೆಯಾಗಿ ಡಾಂಬರೀಕರಣ ಕಾಮಗಾರಿಗೆ ಸಚಿವ ರಹೀಂ ಖಾನ್ ,ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು. ಪ್ರಾಯೋಗಿಕವಾಗಿ ಪಾಲಿಕೆಯ ಮುಂಭಾಗ ರಸ್ತೆ ಕಾಮಗಾರಿ ನಡೆಯಲ್ಲಿದೆ.

ಇದೇ ವೇಳೆ ಪ್ಲಾಸ್ಟಿಕ್‌ ರಸ್ತೆ ಕಾಮಗಾರಿಗೆ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು, ವಿದೇಶದಲ್ಲಿ ಈಗಾಗಲೇ ಪ್ಲಾಸ್ಟಿಕ್ ರಸ್ತೆ ಪ್ರಯೋಗ ಯಶ್ವಸಿಯಾಗಿದೆ. ಪ್ರಾಯೋಗಿಕವಾಗಿ ರಸ್ತೆ ಡಾಂಬಲೀಕರಣಕ್ಕೆ ಇಂದು  ಚಾಲನೆ ನೀಡಲಾಗಿದೆ, ಮುಂದೆ ಲೋಕೋಪಯೋಗಿ ಇಲಾಖೆಯಿಂದ ಕೂಡ ಪ್ಲಾಸ್ಟಿಕ್ ರಸ್ತೆ ಮಾಡುವ ಆಲೋಚನೆ ಇದೆ ಎಂದು ತಿಳಿಸಿದರು. 

ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ತುರ್ತು ಅನುದಾನ ದುರ್ಬಳಕೆ ಮಾಹಿತಿ ಬಂದಿದೆ. ಈ ಬಗ್ಗೆ ಚರ್ಚೆಸುತ್ತೇನೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ್‌, ಪಾಲಿಕೆ ಆಯುಕ್ತ ಅಶೋಕ್ ದುಡಗುಂಟಿ ,ಮೇಯರ್ ಶೋಭಾ ಸೋಮನಾಚೆ ,ಉಪ ಮೇಯರ್ ರೇಷ್ಮಾ ಪಾಟೀಲ್, ಎಸ್ಪಿ ಭೀಮಾ ಶಂಕರ್ ಗುಳೇದ ಸೇರಿದಂತೆ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.