Belagavi News In Kannada | News Belgaum

ಪರಿಚಯಾತ್ಮಕ ಲೇಖನಗಳಿಗೆ ಆಹ್ವಾನ

ಬೆಳಗಾವಿ ಜ.,3-ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಬಂದು ಐವತ್ತು ವರ್ಷಗಳು ಸಂದಿವೆ. ಈ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ದುಡಿದವರು ಮತ್ತು ಸಂಘ ಸಂಸ್ಥೆಗಳ ಸೇವೆಯನ್ನು ಪರಿಚಯಿಸುವ ಕೃತಿಯನ್ನು ಹೊರ ತರಲು ಯೋಜನೆ ಹಾಕಿಕೊಳ್ಳಲಾಗಿದೆ. ನಾಡಿನ ಹಿರಿಯ- ಕಿರಿಯ ಲೇಖಕರು ತಮ್ಮ ಪ್ರದೇಶದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ದುಡಿದವರ ಮತ್ತು ಸಂಘ ಸಂಸ್ಥೆಗಳ ಪರಿಚಯಾತ್ಮ ಲೇಖನಗಳನ್ನು ರಚಿಸಿ ದಿ. 25-1-2024 ರೊಳಗಾಗಿ ಸ.ರಾ. ಸುಳಕೂಡೆ ನಿವೇಶನ ಸಂಖ್ಯೆ 1319 ಶ್ರೀ ಶಿವಪ್ರಸಾದ ರಾಮತೀರ್ಥ ನಗರ- 590015, ಮೊ. 9844453343 ಕಳುಹಿಸಲು ವಿನಂತಿಸಲಾಗಿದೆ.