Belagavi News In Kannada | News Belgaum

ಅಕ್ಷರ ಮಾತೆ ಸಾವಿತ್ರಿಭಾಯಿ ಫುಲೆ ಆದರ್ಶ ಎಲ್ಲರಿಗೂ ಮಾದರಿ- ಶಿಕ್ಷಕ ಕಬ್ಬೂರ

 

ಸವದತ್ತಿ- ಅಕ್ಷರ ಮಾತೆ ಸಾವಿತ್ರಿಭಾಯಿ ಫುಲೆ ರವÀರು ಮಾಡಿದ ಶೈಕ್ಷಣಿಕ ಮತ್ತು ಸಾಮಾಜಿಕ ಸುಧಾರಣೆಗಳು ಉತ್ತಮವಾದ ಕಾರ್ಯಗಳಾಗಿದ್ದು, ಅವರ ಜೀವನದ ಆದರ್ಶ ಇಂದಿನ ಸಮಾಜದಲ್ಲಿ ಎಲ್ಲರಿಗೂ ಮಾದರಿಯಾಗಿವೆ ಎಂದು ಶಿಕ್ಷಕ ಎನ್ ಎನ್ ಕಬ್ಬೂರ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಪಟ್ಟಣದÀ ಸ.ಕಿ.ಪ್ರಾ ಕನ್ನಡ ಶಾಲೆ ನಂ-6 ರಲ್ಲಿ ಸಾವಿತ್ರಿಭಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಾವಿತ್ರಿಭಾಯಿ ಪುಲೆಯವರ ಶೈಕ್ಷಣಿಕ ಕಳಕಳಿ ಮತ್ತು ಕಾಳಜಿಯನ್ನು ಇಂದು ನಾವೆಲ್ಲರು ಅಳವಡಿಸಿಕೊಳ್ಳಬೇಕಾಗಿದೆ ಎಂದರು. ಫುಲೆಯವರ ಜೀವನ ಶೈಲಿ, ವಿದ್ಯಾಭ್ಯಾಸ, ಶಿಕ್ಷಕಿಯಾಗಿ ಮಾಡಿದ ಕಾರ್ಯ, ಲೇಖಕಿಯಾಗಿ ಅವರ ಸಾಧನೆ, ಅವರ ಕೃತಿಗಳು ಹೀಗೆ ಅವರ ಜೀವನ ಶೈಲಿಯ ವಿವಿಧ ಮಜಲುಗಳನ್ನು ಮಕ್ಕಳಿಗೆ ತಿಳಿಸಿದರು.
ನಂತರ ಫುಲೆಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು, ಕಾರ್ಯಕ್ರಮದಲ್ಲಿ ಶಿಕ್ಷಕಿ ಎಮ್.ಆರ್.ಪಂಡಿ ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿಯವರು, ಪಾಲಕ ಪೋಷಕರು ಮತ್ತು ಮಕ್ಕಳು ಇದ್ದರು.