Belagavi News In Kannada | News Belgaum

ರೈತರೇ ಬೆಳೆಸಿದ ಮಾದರಿ ರೈತ ನಾಯಕ ಬಾಬಾಗೌಡ್ರು ಪಾಟೀಲ

ಸಂತೋಷ ಸಂಬಣ್ಣವರ ಎಂಕೆ ಹುಬ್ಬಳ್ಳಿ

ರೈತರೇ ಬೆಳೆಸಿದ ಮಾದರಿ ರೈತ ನಾಯಕ ಬಾಬಾಗೌಡ್ರು ಪಾಟೀಲ

ರೈತರಿಗೆ ಸ್ವಾಭಿಮಾನ ತುಂಬಿದ ಬಾಬಾಗೌಡ್ರು, ಹಸಿರು ಟವಲ್ ಶಕ್ತಿ ತುಂಬಿದ ಗೌಡರು…
ನಮ್ಮ ಈ ಭರತ ಭೂಮಿ ಸ್ವಾಭಿಮಾನಕ್ಕೆ ಹೆಸರಾಗಿದ್ದು ಈ ನೆಲ, ಶತಮಾನಗಳ ಇತಿಹಾಸ ಹೊಂದಿದೆ. ಉಳುವ ಯೋಗಿಯ ನೋಡಲ್ಲಿ… ಅನ್ನೋ ಕುವೆಂಪು ಅವರ ಸಾಲಿನಂತೆ ನಿಕೃಷ್ಟವಾಗಿ ಕಾಣುತ್ತಿರುವ ಸಮಾಜದಲ್ಲಿ ರೈತನಿಗೂ ಒಂದು ಗೌರವ ಇದೆ ಆ ರೈತರು ಮನಸು ಮಾಡಿದರೆ ವಿಧಾನಸೌಧವೂ ನಡುಗುತ್ತದೆ ಅನ್ನೋದನ್ನು ಸಾಬೀತು ಮಾಡಿದ ರೈತ ನಾಯಕ ಬಾಬಾಗೌಡ್ರು ಪಾಟೀಲರು. ಈ ನೆಲದ ದುಡಿಮೆಗಾರರ ಬೆವರಿಗೆ ಸೂಕ್ತ ಮನ್ನಣೆ ಸಿಗಬೇಕು ಕೃಷಿಕರು ಎಲ್ಲರಂತೆ ಸ್ವಾಭಿಮಾನದ ಬದುಕು ಕಂಡುಕೊಳ್ಳಬೇಕು ಎಂದು ಹಗಲಿರುಳು ಚಿಂತೆನೆ ಹೋರಾಟ ,ಮಾಡಿದ ಜೀವ ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಹೋರಾಟಗಾರ ಇವರು.

ಸ್ವಾತಂತ್ರ ಹೊಂದಿದ ನಂತರ ತಮ್ಮ ಹಕ್ಕುಗಳಿಗೆ ದೀನದಲಿತರು ಕಾರ್ಮಿಕರು ಹೋರಾಟ ಮಾಡತೊಡಗಿದರು. ಭ್ರಷ್ಟ ಅಧಿಕಾರಿಗಳ ಬಟ್ಟೆ ಬಿಚ್ಚಿ, ರಾಜಕಾರಣಿಗಳನ್ನು ಕಂಬಕ್ಕೆ ಕಟ್ಟಿ ಹಾಕಿ, ರೈತರ ಅಪ್ಪಣೆಯಿಲ್ಲದೆ ಯಾವುದೇ ಸರಕಾರಿ ನೌಕರರು ಗ್ರಾಮ ಪ್ರವೇಶ ಮಾಡೋ ಹಾಗಿಲ್ಲ
ರೈತನಲ್ಲ ಸಾಲಗಾರ ಸರಕಾರವೇ ಬಾಕಿದಾರ ಸರ್ಕಾರವೇ ಬಾಕಿದಾರ
ನೇರವಾಗಿ ಚಳುವಳಿ ಮಾಡಲು ಸಾಧ್ಯ ಅಂದ್ರೆ ಅಂದಿನ ರೈತ ಸಂಘ.
ಇದರಲ್ಲಿಯ ರೈತರನ್ನು ಒಡಗೂಡಿಸಿ ಅವರ ಬೆವರ ಹನಿಗೆ ಫಲ ನೀಡದವರು ಕರ್ನಾಟಕದ ರೈತನಾಯಕರಾದ ನಂಜುಂಡಸ್ವಾಮಿ, ಬಾಬಾಗೌಡ ಪಾಟೀಲ,ಸುಂದರೇಶ, ಪುಟ್ಟಣ್ಣಯ್ಯ, ರುದ್ರಪ್ಪನವರು .
ಅಂತಹ ನಾಯಕರಲ್ಲಿ ಒಬ್ಬರಾದ ಬಾಬಾಗೌಡ ಪಾಟೀಲರಿಗೆ ಇಂದು ಜನ್ಮದಿನದ ಸಂಭ್ರಮ . ಆ ನಿಮಿತ್ಯಕ್ಕಾಗಿ ಅವರ ಹೋರಾಟದ ಕೆಲವು ತುಣುಕುಗಳ ನೆನೆಯುವ ಪ್ರಯತ್ನ ಇದು.

ದೇಶದ ಬೆನ್ನಲುಬಿಗೆ ಆಸರೆಯಾಗಿ ನಿಂತ ನಾಯಕ ಬಾಬಾಗೌಡರು ಸಾಮನ್ಯ ಕೃಷಿಕುಟುಂಬದಲ್ಲಿ ಹುಟ್ಟಿದ ಇವರು ದಿಲ್ಲಿಯ ಸಂಸದ ಭವನ ಪ್ರವೇಶಿಸಿ ಕೇಂದ್ರ ಮಂತ್ರಿಗಳಾದರು. ಪ್ರಬಲ ವಾಗ್ಮಿಗಳಾದ ಶ್ರೀ ಬಾಬಾಗೌಡ ಪಾಟೀಲರು ಇಂದು ಅವರು ನಮ್ಮನ್ನು ಅಗಲಿ ಮೂರು ವರ್ಷವಾಯಿತು ಆದರೆ ಅವರು ಬಿತ್ತಿದ ಬೀಜಗಳು ಹೆಮ್ಮರವಾಗಿ ರೈತಪರ ಕೂಗಿಗೆ ಶಕ್ತಿಯಾಗಿವೆ.
ರೈತ ಹಾಗೂ ಅವನ ಅವಲಂಬಿತನ ಕುಟುಂಬ ನೆಮ್ಮದಿಯಾಗಿ ಬದುಕಬೇಕೆಂದರೆ ಆತ ಬಿತ್ತಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕು. ರೈತವಿರೋಧಿ ಕಾನೂನುಗಳಿಗೆ ಮನ್ನಣೆ ಸಿಗಬಾರದು.ಆತನು ಈ ದೇಶದಲ್ಲಿ ಗೌರವಯುತ ಜೀವನ ನಡಸೇಕು ಎಂದು ಬೀದಿಗಿಳಿದು ಚಳುವಳಿ ಮಾಡಿದರು. ಜನ ಬುತ್ತಿಗಂಟು ಸಮೇತ ಬಾಬಾಗೌಡರ ಜೊತೆಯಾದರು.ರೈತನ ಕಷ್ಟಗಳಿಗೆ ಕೇಂದ್ರದಲ್ಲಿ ಮಂತ್ರಿಯಾದ ಸಂದರ್ಭದಲ್ಲಿ ಗ್ರಾಮ ಸಡಕ್ ಯೋಜನೆಯನ್ನು ಜಾರಿಗೆ ತಂದರು. ಮರಣಹೊಂದುವ ಮುನ್ನಾ ವರ್ಷಗಳಲ್ಲಂತೂ ರೈತಸಂಘದ ಹಿಂದಿನ ಹೋರಾಟಗಳನ್ನು ನೆನಪಿಸುವಂತಹ ಪ್ರತಿಭಟನೆ ಹಾಗೂ ಭಾಷಣಗಳನ್ನು ಮಾಡುವ ಮೂಲಕ ರೈತನ ಕೂಗಿಗೆ ಧ್ವನಿಯಾಗಿದ್ದರು.ಕೇಂದ್ರದಲ್ಲಿ ದಿವಗಂತ ಪ್ರಧಾನ ಮಂತ್ರಿ ವಾಜಪೇಯಿಯವರ ಸಂಪುಟದಲ್ಲಿ ಅಷ್ಟು ದೊಡ್ಡ ಹುದ್ದೆಯಲ್ಲಿದ್ದು ಬಂದಿದ್ದರೂ ಹಳ್ಳಿಯ ತಮ್ಮ ನಿತ್ಯ ಕಾಯಕ ಕೃಷಿಯಲ್ಲಿ ನಿರತರಾಗಿದ್ದರು. ಕೃಷಿಯಲ್ಲಿ ಪ್ರಯೋಗಗಳನ್ನು ಮಾಡುತ್ತಾ ಹೋರಾಟಗಳನ್ನು ಮುಂದುವರೆಸಿದ್ದರು ಏನು ಗೊತ್ತಿಲ್ಲ ಇಂದಿನ ಈ ತಲಿಮಾರಿನ ಯುವಜನಕ್ಕೆ ನಮ್ಮ ಬಾಬಾಗೌಡ ಪಾಟೀಲ್ರು ಹಾಗೂ ಅವರ ಜೊತೆ ಇದ್ದ ರೈತ ಹೋರಾಟಗಾರರ ಬಗ್ಗೆ ಪರಿಚಯ ಇಲ್ಲದೆ ಇರಬಹುದು ಆದರೆ ತಿಳಿದುಕೊಳ್ಳಬೇಕಾಗಿರೋ ಪರಿಸ್ಥಿತಿ ಬಂದಿದೆ. ಇತಿಹಾಸ ತಿಳಿಯದ ದೇಶಕ್ಕೆ ಭವಿಷ್ಯವಿಲ್ಲ ಅಂತಾರೆ ಹಾಗೆ ಕ್ರಾಂತಿಕಾರಿ ರೈತ ನಾಯಕ ಬಾಬಾ ಗೌಡ್ರು ಪಾಟೀಲ್ರು ಅವರ ಇತಿಹಾಸ ಅವರ ಹೋರಾಟವನ್ನು ನಾವು ತಿಳಿಯದೆ ಇದ್ದರೆ ನಿಜವಾಗಿಯೂ ನಾವೆಲ್ಲ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದೇವೆ..

ದೇಶಕ್ಕೆ ಹಸಿರೇ ಮುಖ್ಯ ಆ ಹಸಿರಿಗೆ ಉಸಿರು ನೀಡಿದ ಬಾಬಾಗೌಡರೆ ಮತ್ತೊಮ್ಮೆ ಹುಟ್ಟಿ ಬನ್ನಿ…

ಸಂತೋಷ ಸಂಬಣ್ಣವರ
ಎಂಕೆ ಹುಬ್ಬಳ್ಳಿ