Belagavi News In Kannada | News Belgaum

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಂದ ಕನ್ನಡಿಗರನ್ನು ಕೆರಳಿಸುವ ಹೇಳಿಕೆ…!!!!!!

ಬೆಳಗಾವಿ – ಲಕ್ಷ್ಮೀ ಹೆಬ್ಬಾಳಕರ್ ಅವರು ಈ ರಾಜ್ಯದ ಮಂತ್ರಿಯಾಗಿ ಕನ್ನಡಿಗರು ಯಾವತ್ತಿಗೂ ಸಹಿಸಲಾರದ,ಉಹಿಸಲಾರದ,ಕ್ಷಮಿಸಲಾರದ ಹೇಳಿಕೆ ನೀಡಿದ್ದಾರೆ.ಮಾತಿನ ಭರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಈ ರಾಜ್ಯದ ಕನ್ನಡಿಗರನ್ನು ಕೆರಳಿಸಿದ್ದಾರೆ..

ನಿನ್ನೆ ನಡೆದ ಕಾರ್ಯಕ್ರಮ ಒಂದರಲ್ಲಿ ಈ ಹೇಳಿಕೆ ಕನ್ನಡಿಗರ ಮನಸುಗಳಿಗೆ ನೂವುಂಟು ಮಾಡಿದ ಹಾಗೆ ಆಗಿದೆ

ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು.,ಎಂದುಕಾರದಗಾ ಗ್ರಾಮದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿಕೆ ನೀಡುವ ಮೂಲಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮರಾಠಿ ಭಾಷಿಕರನ್ನು ಓಲೈಸುವದಕ್ಕಾಗಿ ಕನ್ನಡಿಗರ ಹಿತವನ್ನು ಕನ್ನಡಿಗರ ಸ್ವಾಭಿಮಾನವನ್ನು ಲಕ್ಷ್ಮೀ ಹೆಬ್ಬಾಳಕರ್ ಕೆಣಕಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆದ ಕನ್ನಡದ ಕಾರ್ಯಕ್ರಮದಲ್ಲೇ ಕನ್ನಡಿಗರಿಗೆ ಸವಾಲೆಸೆಯುವ ಮಾತುಗಳನ್ನು ಆಡಿರುವ ಲಕ್ಷ್ಮೀ ಹೆಬ್ಬಾಳಕರ್.ಕನ್ನಡ ಭಾಷೆಗೆ ಬಹಳಷ್ಟು ವರ್ಷಗಳ ಇತಿಹಾಸವಿದೆ ಎಂಬುದನ್ನು ಸಾಹಿತಿಗಳು ತೋರ್ಸಿದ್ದಾರೆ.
ನಮ್ಮ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ..
ನಮ್ಮ ಭಾಷೆ, ಕಲೆ, ಸಂಸ್ಕೃತಿಯಲ್ಲಿ ಶ್ರೀಮಂತವಾಗಿದೆ.
ನಾವು ಈ ನಾಡಿನಲ್ಲಿ ಜನ್ಮ ಪಡೆಯಲು ಪುಣ್ಯ ಮಾಡಿರಬೇಕು,ಆದ್ರೆ ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು.ಆವಾಗ ನಾವೆಲ್ಲ ಅನೋನ್ಯವಾಗಿದ್ವಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.