Belagavi News In Kannada | News Belgaum

ಜ. 18 ರಂದು ಮಂತ್ರಾಕ್ಷತೆ ಭವ್ಯ ಯಾತ್ರೆ

ಕೆಂಭಾವಿ :  ಅಯೋಧ್ಯೆಯಲ್ಲಿ ಜ 22 ರಂದು ಜರುಗುವ ಶ್ರೀರಾಮನ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಶ್ರೀರಾಮ ಮಂತ್ರಾಕ್ಷತೆ ವಿತರಣಾ ಸಂಬಂಧ ಪೂರ್ವಭಾವಿ ಸಭೆ ಪಟ್ಟಣದ ಭೋಗೇಶ್ವರ ದೇವಸ್ಥಾನದಲ್ಲಿ  ಭಾನುವಾರ ನಡೆಯಿತು.
ಸಭೆಯಲ್ಲಿ ಮಾತನಾಡಿದ ಮುಖಂಡರುಗಳು, ದೇಶದೆಲ್ಲೆಡೆ ಶ್ರೀರಾಮ ದೇವರ ಆಶಿರ್ವಾದ ಪೂರ್ವಕ ಮಂತ್ರಾಕ್ಷತೆ ಮನೆಮನೆಗೆ ತಲುಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಈ ಕಾರ್ಯ ಭರದಿಂದ ಸಾಗಿದ್ದು ಜ. 18 ರಂದು ಕೆಂಭಾವಿ ಪಟ್ಟಣದಲ್ಲಿ ಮಂತ್ರಾಕ್ಷತೆಯ ಭವ್ಯ ಶೋಭಾ ಯಾತ್ರೆ ನಡೆಯಲಿದೆ.
ಪಟ್ಟಣದ ಸಂಜೀವ ನಗರದಿಂದ ಆರಂಭಗೊಳ್ಳುವ ಶೋಭಾಯಾತ್ರೆ ಹೇಮರೆಡ್ಡಿ ಮಲ್ಲಮ್ಮದೇವಸ್ಥಾನ, ಅಂಬಿಗರ ಚೌಡಯ್ಯ ವೃತ್ತ, ಟಿಪ್ಪು ಸುಲ್ತಾನ ವೃತ್ತ, ಉತ್ತರಾದಿ ಮಠ ಬೀದಿ, ಜೈಹನುಮಾನ ಚೌಕ್, ಹಿರೇಮಠ ಸಂಸ್ಥಾನ, ಹಳೆ ಬಸ್ ನಿಲ್ದಾಣ, ಬಲಭೀಮಸೇನ ದೇವರ ವೃತ್ತ ಮಾರ್ಗವಾಗಿ ಮುಖ್ಯ ಬಜಾರ ಪ್ರದೇಶದ ಕೇದಾರ ಕಟ್ಟೆ ತಲುಪಲಿದೆ. ಈ ಶೋಭಾ ಯಾತ್ರೆಯಲ್ಲಿ ಪಟ್ಟಣದ ಪ್ರತಿಯೊಬ್ಬ ಶ್ರೀರಾಮ ಭಕ್ತರು ಪಾಲ್ಗೊಳ್ಳುವ ಮೂಲಕ ಮಂತ್ರಾಕ್ಷತೆಯ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಸಭೆಯಲ್ಲಿ ಮನವಿ ಮಾಡಲಾಯಿತು. ವಾಮನರಾವ ದೇಶಪಾಂಡೆ, ಸಂಜೀವರಾವ ಕುಲಕರ್ಣಿ,  ಡಾ. ಶಿವಾನಂದ ಆಲಗೂರ, ಶರಣಪ್ಪ ಬಂಡೋಳಿ, ಬಸವರಾಜಯ್ಯ ಹೊಸಮನಿ, ಮಹಿಪಾಲರೆಡ್ಡಿ ಡಿಗ್ಗಾವಿ, ಶಂಕರ ಕರಣಗಿ, ಮಲ್ಲೇಶಪ್ಪ ಕಾಚಾಪೂರ, ಶರಣಪ್ಪ ಯಾಳಗಿ, ಉಮಾಕಾಂತ ಬಂದೆ  ಹಳ್ಳೇರಾವ ಕುಲಕರ್ಣಿ, ಗುರುರಾಜ ಕುಲಕರ್ಣಿ, ಅಮಲಪ್ಪ ಶಹಾಪೂರ,  ಪರಶುರಾಮ ನಾರಾಯಣಕರ್ ಸೇರಿದಂತೆ ಅನೇಕರಿದ್ದರು