Belagavi News In Kannada | News Belgaum

ಆರ್.ಸಿ.ಯು ಸ್ನಾತಕೋತ್ತರ ಪದವಿ ವಿವಿಧ ವಿಭಾಗಗಳಲ್ಲಿ ಬಾಕಿ ಸೀಟುಗಳಿಗೆ ಪ್ರವೇಶಾತಿ: ಅರ್ಜಿ ಆಹ್ವಾನ

ಬೆಳಗಾವಿ: ಜ 08: 2023-24ನೇ ಶೈಕ್ಷಣಿಕ ಸಾಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ನಾತಕೋತ್ತರ ವಿವಿಧ ವಿಭಾಗಗಳಲ್ಲಿ ಬಾಕಿ ಉಳಿದಿರುವ ಸ್ನಾತಕೋತ್ತರ ಕೋರ್ಸುಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಜ.9 -2024 ರಿಂದ 11-01-2024 ರ ವರೆಗೆ ಆನ್ಲೈನ್ (UUCMS) ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
(Through UUCMS portal https://uucms.karnataka.gov.in) ಆದ್ದರಿಂದ ಅರ್ಹ ಅಭ್ಯರ್ಥಿಗಳು ಆಸಕ್ತ ವಿಭಾಗದ ಬಾಕಿ ಉಳಿದಿರುವ ಸೀಟುಗಳ ಕುರಿತು ಸಂಬಂಧಪಟ್ಟ ಸ್ನಾತಕೋತ್ತರ ವಿಭಾಗ ಹಾಗೂ ಮಹಾವಿದ್ಯಾಲಯಗಳಿಂದ ಖಚಿತಪಡಿಸಿಕೊಂಡ ನಂತರವೇ, ಅರ್ಜಿಗಳನ್ನು (UUCMS)ತಂತ್ರಾಂಶದ ಮೂಲಕ ಸಲ್ಲಿಸಲು ತಿಳಿಸಲಾಗಿದೆ.
ಈಗಾಗಲೇ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಯನ್ನು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗಗಳಿಂದ ಹಾಗೂ ಮಹಾವಿದ್ಯಾಲಯಗಳಿಂದ ಪಡೆಯಬಹುದಾಗಿದೆ ಎಂದು ಆರ.ಸಿ.ಯು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.