Belagavi News In Kannada | News Belgaum

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಡಿಯಲ್ಲಿ ಉಚಿತ ಹೊಲಿಗೆ ತರಬೇತಿ

ಬೆಳಗಾವಿ ತಾಲೂಕು ಯೋಜನಾ ವ್ಯಾಪ್ತಿಯ ಹೋನಗ ವಲಯದ ದೇವಗಿರಿ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಡಿಯಲ್ಲಿ ಉಚಿತ ಹೊಲಿಗೆ ತರಬೇತಿ  ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಕಡೋಲಿ ಗ್ರಾಮ ಪಂಚಾಯತ್ ಸದಸ್ಯರಾದ ಗೌಡಪ್ಪ ಶಿವನ ಗೌಡ ಪಾಟೀಲ್ ದೀಪ ಬೆಳಗಿಸಿ ಉದ್ಘಾಟಿಸಿ  ಇಂದಿನ ದಿನದಲ್ಲಿ ಪ್ರತಿಯೊಬ್ಬ ಮಹಿಳೆ ಸ್ವಾವಲಂಬನ ಜೀವನ ನಡೆಸಬೇಕಾದರೆ.

ಸ್ವಉದ್ಯೋಗಗಳನ್ನು ಕೈಗೊಳ್ಳುವುದು ಅತಿ ಅನಿವಾರ್ಯವಾಗಿದೆ , ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು .ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಮಾತೃಶ್ರೀ ಹೇಮಾವತಿ ಅಮ್ಮನವರು ಮಹಿಳೆಯರಿಗೆ ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುವ ಮೂಲಕ ಕೌಟುಂಬಿಕ ಜೀವನವನ್ನು ಉತ್ತಮವಾಗಿ ನಿರ್ವಹಿಸುವಂತೆ ಮಾಡುತ್ತಿರುವುದು ಶ್ಲಾಘನೀಯ ವೆಂದರು.

. ಪ್ರತಿಯೊಬ್ಬ ಮಹಿಳೆಯು ಹೊಸ ಹೊಸ ವಿಚಾರವಂತಿಕೆ ಬೆಳೆಸಿಕೊಂಡಾಗ ಮಾತ್ರ ಸಬಲೀಕರಣ ಬದುಕು ಮಾಡಲು ಸಾಧ್ಯವೆಂದರು ಈ ಸಮಾರೋಪ ಸಮಾರಂಭ ದಲ್ಲಿ ಹೊಲಿಗೆ ತರಬೇತಿ ಪಡೆದ ವರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು ಮತ್ತು ಹೊಲಿಗೆ ತರಬೇತಿ ಯಲ್ಲಿ ತಾವು ಕಲಿತು ಹೋಲಿದಿರುವ ಬಟ್ಟೆ ಗಳನ್ನು ಪ್ರದರ್ಶನ ಮಾಡಲಾಯಿತು..

ಈ ಕಾರ್ಯಕ್ರಮ ದಲ್ಲಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಯ ಸದಸ್ಯರಾದ ಪತ್ರಿಕೆ ವಾರದಿಗಾರರಾದ ವಿನೋದ್ ಜಗಜಂಪಿ, ಪ್ರೌಢಶಾಲಾ ಶಿಕ್ಷಕರು M. s.ಅಲ್ಲನವರ, ಜ್ಞಾನ ವಿಕಾಸ ಕೇಂದ್ರ ಅಧ್ಯಕ್ಷರು ಸುರೇಖಾ  ವಲಯದ ಮೇಲ್ವಿಚಾರಕರು ಮಹಾಬಲಶ್ವರ್, ಜ್ಞಾನ ವಿಕಾಸ್ ಸಮನ್ವಯಧಿಕಾರಿ ಲಲಿತಾ ಸೇವಾಪ್ರತಿನಿಧಿ ಸಂಜಯ್ ಹೊಲಿಗೆ ಶಿಕ್ಷಕಿ ಶೋಭಾ  ಮತ್ತು ಸಂಘ ಸದಸ್ಯರು ಮತ್ತು ಹೊಲಿಗೆ ಕಲಿತ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.