Belagavi News In Kannada | News Belgaum

ಹಾಸ್ಟೆಲ್ ನಲ್ಲಿದ್ದ 9ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ ವಾರ್ಡನ್ ಸಸ್ಪೆಂಡ್

ತುಮಕೂರು: ಹಾಸ್ಟೇಲ್ ನಲ್ಲಿದ್ದು 9 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೋರ್ವರು ಗರ್ಭಿಣಿ ಆಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಬೆಳಕಿಗೆ ಬಂದಿದೆ.

ಹಾಸ್ಟೇಲ್ ವಾರ್ಡನ್ ಬಾಲಕಿಯ ಚಲನವಲನ ಗಮನಿಸದೇ ಬೇಜವಾಬ್ದಾರಿ ಕೆಲಸ್  ವರ್ತನೆ ಹಾಗೂ ಕರ್ತವ್ಯ ಲೋಪ ಆರೋಪದಲ್ಲಿ ಹಾಸ್ಟೇಲ್ ವಾರ್ಡನ್ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಸಿಇಓ ಆದೇಶ ಹೊರಡಿಸಿದ್ದಾರೆ. ನಿವೇದಿತಾ ಅಮಾನತುಗೊಂಡ ವಾರ್ಡನ್ ವಾಗಿದ್ದು .

ಚಿಕ್ಕಬಳ್ಳಾಪುರದ ಬಾಗೇಪಲ್ಲಿ ನಿವಾಸಿಯಾಗಿರುವ ವಿದ್ಯಾರ್ಥಿನಿ, ಮಧುಗಿರಿ ಪಟ್ಟಣದಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೇಲ್ ನಲ್ಲಿದ್ದು ಓದುತ್ತಿದ್ದಳು 9ನೇ ತರಗತಿ ಓದುತ್ತಿದ್ದಳು. ಹೊಟ್ಟೆನೋವೆಂದು ವಿದ್ಯಾರ್ಥಿನಿ ತಾಯಿಗೆ ವಿಷಯವನ್ನು ತಿಳಿಸಿದಾಗ ಜೊತೆಗೆ ಬಾಗೆಪಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾಗ ಈಗ 7 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಇಷ್ಟಕ್ಕೆಲ್ಲ ಕಾರಣ ಯಾರೆಂದು ತಿಳಿಯಲು ಪ್ರಕರಣ ಮುಂದುವರೆದಿದೆ