Belagavi News In Kannada | News Belgaum

ರಾಮತೀರ್ಥ ನಗರದಲ್ಲಿ ವೈಭದಿಂದ ಜರುಗಿದ ಪ್ರಭು ಶ್ರೀರಾಮನ ಕಳಸ ಮೆರವಣಿಗೆ, ಮಂತ್ರಾಕ್ಷತೆ ಕಾರ್ಯ

ಬೆಳಗಾವಿ:”ಕೋಟ್ಯಾಂತರ ಭಾರತೀಯರ ಕನಸು ನನಸಾಗುವ ಕಾಲ ಸನ್ನಿಹವಾಗಿದ್ದು,  ಅಯೋಧ್ಯೆಯಲ್ಲಿ ಜ.೨೨ರಂದು ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ಭವ್ಯ ಮಂದಿರ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ. ಅದಕ್ಕೂ,  ಪೂರ್ವ ಪ್ರತಿ ಮನೆಗೂ ಅಯೋಧ್ಯೆಯ ಮಂತ್ರಾಕ್ಷತೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ”  ಎಂದು  ಸುರೇಶ ಯಾದವ ಪೌಂಡೇಶನ್ ಅಧ್ಯಕ್ಷ ಸುರೇಶ ಯಾದವ ಹೇಳಿದರು.
ಇಲ್ಲಿನ ರಾಮತೀರ್ಥ ನಗರದ ಹಲವು ಬಡವಾಣೆಗಳಲ್ಲಿ  ರಾಮತೀರ್ಥ ರವಾಸಿಗಳ ಸಂಘದಿಂದ  ಗುರುವಾರ  ಹಮ್ಮಿಕೊಂಡಿದ್ದ ವೈಭವದ ಕಳಸ ಮೆರವಣಿಗೆ ಹಾಗೂ ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆ ಅಭಿಯಾನದಲ್ಲಿ ಮಾತನಾಡಿದ ಅವರು,
ಇಲ್ಲಿನ ೧೨ ಮಂದಿರಗಳಿಗೆ ಸಂಚರಿಸಿ ಅಕ್ಷತೆ ತುಂಬಿದ ಕಳಸವನ್ನು ಮೆರವಣಿಗೆ ಮಾಡಲಾಗಿದೆ. ಹಾಗೂ  ಶ್ರೀರಾಮನ ಭಾವಚಿತ್ರ, ಕರಪತ್ರ ಮತ್ತು ಪವಿತ್ರ ಮಂತ್ರಾಕ್ಷತೆ ನೀಡಲಾಗಿದೆ ಎಂದು ತಿಳಿಸಿದರು.
ಹಿಂದೂಗಳ ಆರಾಧ್ಯದೇವ ಪ್ರಭು ಶ್ರೀರಾಮನ ಮಂತ್ರಾಕ್ಷತೆ ದೇಶ್ಯಾದ್ಯಂತ ನಡೆಯುತ್ತಿದ್ದು, ಈಗಾಗಲೇ ಬೆಳಗಾವಿಯಲ್ಲೂ ಅಕ್ಷತೆ ತುಂಬಿದ ಕಳಸವನ್ನು ಮೆರವಣಿಗೆ,  ಮಂತ್ರಾಕ್ಷತೆ ನೀಡಲಾಗಿದೆ.  ಜ.೨೨ರಂದು ಬೆಳಗಾವಿಯ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಎಲ್ಲ ಮನೆಗಳಲ್ಲಿಯೂ ವಿಶೇಷ ಪೂಜೆ ಮತ್ತು ಸಂಜೆ ದೀಪಗಳನ್ನು ಹಚ್ಚಿ ದೀಪಾವಳಿ ಆಚರಿಸಲಾಗುವುದು. ಪ್ರತಿಯೊಬ್ಬರೂ ರಾಮನ ಆಗಮನವನ್ನು ಸಂಭ್ರಮಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಮೇಶ್ ಕಾಜಗಾರ್ , ಮೌನೇಶ್ ಪತಾರ,  ಮಲ್ಹರ್ ಡಿಕ್ಸಿತ್ , ಮಹದೇವ್ ತೊನ್ನೇ , ಅಪ್ಪಯಾ ಕೋಲ್ಕಾರ್ , ಗುರುಪುತ್ರಪ್ಪ ತೊರಗಲ್,  ಬಾಳಪ್ಪ ಹಣಜಿ,   ಸಂತೋಷ್ ಮೇರಾಕಾರ ,  ರಾಜು ಪಾಟೀಲ್ , ರಾಜಶೇಖರ್ ಶಿಂದ್ರೆ ,  ಅಕ್ಷಯ್ ಅಂಬಡಗಟ್ಟಿ,   ಅಭಿಷೇಕ್ ಅಗಸಗಿ ,  ನಿರ್ವಾಣಿ ಬೆಣ್ಣಿ , ಗೋಳಪ್ಪಾ ಹೊಲ್ಯಾಚಿ,  ನಿಂಗಪ್ಪಾ ಕರೆಪಗೋಲ್,  ಗುರಪ್ಪ ಬಣಗಾರ , ಶ್ರೀಶೈಲ್ ಹಿರೇಮಠ,  ಬಸವರಾಜ್ ಕೊಟ್ರಶೆಟ್ಟಿ ,ಶಿವಲಿಂಗ್ ಕಡಬಡಿಗಿ,  ಮಾರುತಿ ಬಾಸಕರ್ , ಈರಣ್ಣಾ ಲಾಲಿ,ಈರಣ್ಣಾ ಹೊಸಮನಿ, ಅಮಿತ್ ಬಿಡೇಕರ್, ಅಮೋಲ್ ಬಿಡೇಕರ್, ಸಾಗರ್ ಕೀನೇಕರ್ ಹಾಗೂ ಇತತರು ಇದ್ದರು