Belagavi News In Kannada | News Belgaum

ಮಹಾನಗರ ಪಾಲಿಕೆ; ಗುತ್ತಿಗೆ ಆಧಾರದ ಮೇಲೆ ಕಾನೂನು ಅಧಿಕಾರಿಯ ನೇಮಕಾತಿ: ಅರ್ಜಿ ಆಹ್ವಾನ

ಬೆಳಗಾವಿ, ಜ.12: ಬೆಳಗಾವಿ ಮಹಾನಗರ ಪಾಲಿಕೆಯ ಸಂಬಂಧಿಸಿದ ಸ್ಥಳೀಯ ನ್ಯಾಯಲಯಗಳಲ್ಲಿ ಮತ್ತು ರಾಜ್ಯ ಉಚ್ಚ ನ್ಯಾಯಲಯದಲ್ಲಿ ದಾಖಲಾಗಿರುವ/ದಾಖಾಲಾಗುವ ಪ್ರಕರಣಗಳಿಗೆ ಹಾಗೂ ಪಾಲಿಕೆಯ ಎಲ್ಲಾ ಬಗೆಯ ರಾಜ್ಯ ಸರ್ಕಾರದ ಸೇವೆಗೆ ಸಂಬಂದಿತ ವ್ಯಾಜ್ಯಗಳಿಗೆ, ಕೆಲವು ಕ್ಲಿಷ್ಟಕರ ಸಮಸ್ಯಗಳಿಗೆ ಕಾನೂನು ನೆರವು ನೀಡುವುದಕ್ಕಾಗಿ ಹಾಗೂ ಪಾಲಿಕೆಯ ಇನ್ನಿತರ ವಿವಿಧ ಶಾಖೆಗಳಲ್ಲಿನ ಎಲ್ಲಾ ಬಗೆಯ ಕಾನೂನಾತ್ಮಕ ಪ್ರಕರಣಗಳನ್ನು ಬಗೆಹರಿಸಲು ತಾಂತ್ರಿಕವಾಗಿ ಕಾನೂನು ಅಭಿಪ್ರಾಯ ಪಡೆಯಲು ಕಾನೂನು ಅಧಿಕಾರಿಯ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ನೇಮಕವಾಗುವ ಕಾನೂನು ಅಧಿಕಾರಿ (ಕರ್ನಾಟಕ ಪೌರನಿಗಮಗಳ ಅಧಿನಿಯಮ 1964 & 1976ರ ಪ್ರಕಾರ ) ಪರಿಣಿತನಾಗಿರಬೇಕು. ಕಾನೂನು ಅಬಿಪ್ರಾಯಕ್ಕೆ ಸಂಬಂಧಿಸಿದಂತೆ ಕಾರ್ಯಗಳನ್ನು ನಿರ್ವಹಿಸಲು ಗುತ್ತಿಗೆ ಆಧಾರದಲ್ಲಿ ಒಬ್ಬ ನುರಿತ ಹಾಗೂ ಅನುಭವÀ ಉಳ್ಳ ಕಾನೂನು ಅಧಿಕಾರಿಯನ್ನು ನೇಮಿಸಿಕೊಳ್ಳಲಾಗುವುದು
ಷರತ್ತುಗಳು/ನಿಯಮಗಳು:
ಇಚ್ಚೆಯುಳ್ಳ ಕಾನೂನು ಅಧಿಕಾರಿಯು ಎಲ್.ಎಲ್.ಎಂ ಪದವಿ ಹೊಂದಿರಬೇಕು, ಕನಿಷ್ಠ 10 ವರ್ಷದ ಅನುಭವ ಹೊಂದಿರಬೇಕು ಹಾಗೂ ನಿವೃತ್ತ ಉಚ್ಚ ನ್ಯಾಯಲಯದ/ಜಿಲ್ಲಾ ನ್ಯಾಯಲಯದ ನ್ಯಾಯಾದೀಶರಾಗಿ ಸೇವೆ ಸಲ್ಲಿಸಿರಬೇಕು. ಮಹಾನಗರ ಪಾಲಿಕೆ ವ್ಯಾಪಿಯಲ್ಲಿ ಬರುವ ಕಾನೂನು ಹಾಗೂ ನ್ಯಾಯಲಯ ಪ್ರಕರಣಗಳ ಬಗ್ಗೆ ಕಂಡಿಕೆವಾರು ಉತ್ತರಗಳನ್ನು ತಯಾರಿಸಿ, ಆಯುಕ್ತರುಗಳಿಂದ ಅನುಮೊದನೆ ಪಡೆದು ಕಾಲಮಿತಿಯೊಳಗೆ ಸಂಬಂದಿತ ನ್ಯಾಯಲಯಕ್ಕೆ ಸಲ್ಲಿಸುವುದು.
ಕಾನೂನು ಅರಿವು ಮೂಡಿಸಲು ಪಾಲಿಕೆ ಮಟ್ಟದಲ್ಲಿ ಜಾಗೃತಿ ಶಿಬಿರ/ಉಪನ್ಯಾಸ/ತರಬೇತಿಗಳನ್ನು ಕಾಲ ಕಾಲಕ್ಕೆ ಆಯೋಜಿಸುವುದು.
ಕಾನೂನು ಸಂಬಂಧ ಪಾಲಿಕೆಯ ಯಾವುದೇ ಪ್ರಕರಣಗಳಾಗಲಿ ಅವುಗಳಿಗೆ ಕಾನೂನಾತ್ಮಕ ಅಭಿಪ್ರಾಯಗಳನ್ನು ನೀಡುವುದು. ಇವುಗಳಿಗೆ ಸಂಬಂಧಿತವಾಗಿ ಖುದ್ದು ಹಾಜರಾಗಿ ಸಕ್ಷಮ ಪ್ರಾಧಿಕರಗಳಿಗೆ ಸೂಕ್ತ ಮಾಹಿತಿಗಳನ್ನು ಸಲ್ಲಿಸುವುದು.
ಕರ್ನಾಟಕ ಪೌರನಿಗಮಗಳ ಅಧಿನಿಯಮಗಳಾದ 1964 & 1976ರ ನಿಯಮಗಳ ಬಗ್ಗೆ ಪರಿಣಿತನಾಗಿರಬೇಕು. ಕರ್ನಾಟಕ ಸರ್ಕಾರಿ ಸೇವಾ ನಿಯಮ ಮತ್ತು ಕರ್ನಾಟಕ ಸೇವಾ ನಿಯಮಗಳ ಬಗ್ಗೆ ಪರಿಣಿತನಾಗಿರಬೇಕು. ಕಾನೂನು ಅಧಿಕಾರಿಯು ದಿನಾಂಕ: 31/01/2024ಕ್ಕೆ 50 ವರ್ಷ ವಯಸ್ಸು ಮೀರಿರಬಾರದು.
ಗುತ್ತಿಗೆ ಆಧಾರದ ಮೇಲೆ ನೇಮಕವಾಗುವ ಕಾನೂನು ಅಧಿಕಾರಿಯು ಪಾಲಿಕೆಯ ನಿಗದಿಪಡಿಸುವ ಗೌರವಧನಕ್ಕೆ ಅರ್ಹರಾಗಿರುತ್ತಾರೆ. ಗುತ್ತಿಗೆ ಆಧಾರದ ಮೇಲೆ ಆಯ್ಕೆಯಾಗುವ ಕಾನೂನು ಅಧಿಕಾರಿಗಳ ಸೇವಾ ಅವಧಿ ಮೂರು ವರ್ಷಗಳಿಗೆ ಮಾತ್ರ ಸಿಮೀತವಾಗಿರುತ್ತದೆ ಹಾಗೂ ನಿಯಮಾನುಸಾರ ಅಂತಿಮವಾಗಿ ಆಯ್ಕೆಯಾದ ಕಾನೂನು ಅಧಿಕಾರಿಯು ಗುತ್ತಿಗೆ ಸೇವೆಯನ್ನು ಮುಂದುವರೆಸುವ ಅಥವಾ ಸ್ಥಗಿತಗೊಳಿಸುವ ಅಂತಿಮ ಅಧಿಕಾರ ನೇಮಕಾತಿ ಪ್ರಾದಿಕಾರಿಗಳು ಕಾಯ್ದಿರಿಸಿಕೊಂಡಿರುತ್ತಾರೆ.
ಕಾನೂನು ಅಧಿಕಾರಿಯು ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಓದಿ/ಬರೆಯಲು ಹಾಗೂ ಅರ್ಥೈಸಿಕೊಳ್ಳಲು ಪರಿಣಿತಿ ಹೊಂದಿರಬೇಕು. ಹೆಚ್ಚಿನ ಸೇವಾ ಅನುಭವ ಹೊಂದಿರುವವರಿಗೆ ಆಧ್ಯತೆ ನೀಡಲಾಗುವುದು.
ಇಚ್ಛೆಯುಳ್ಳ ಕಾನೂನು ಅಧಿಕಾರಿಗಳು ಜನವರಿ 25, 2024 ರೊಳಗಾಗಿ ಪಾಲಿಕೆಯ ಆಡಳಿತ ಶಾಖೆಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.