Belagavi News In Kannada | News Belgaum

ಉತ್ತರ ಕರ್ನಾಟಕದ ಜನರ ಬಹುದಿನಗಳ ನಿರೀಕ್ಷೆ ಹಾಗೂ ಬೇಡಿಕೆ ಕೇಂದ್ರೀಕೃತವಾಗಿರುವಂತಹ ಸರ್ಕಾರಿ ಕಛೇರಿಗಳು ಬೆಳಗಾವಿಗೆ

ಕೇಂದ್ರೀಕೃತವಾಗಿರುವಂತಹ ಹಲವಾರು ಸರ್ಕಾರಿ ಕಛೇರಿ

ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನಸೌಧದ ಸದ್ಭಳಕೆ ದೃಷ್ಠಿಯಿಂದ ಹಾಗೂ ಉತ್ತರ ಕರ್ನಾಟಕದ ಜನರ ಬಹುದಿನಗಳ ನಿರೀಕ್ಷೆ ಹಾಗೂ ಬೇಡಿಕೆ ದೃಷ್ಟಿಯಿಂದ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವಂತಹ ಹಲವಾರು ಸರ್ಕಾರಿ ಕಛೇರಿ ಕಾರ್ಯವು ಸಹ ಸುವರ್ಣ ವಿಧಾನಸೌಧದಿಂದಲೂ ಕಾರ್ಯ ನಿರ್ವಹಿಸಬೇಕೆಂಬುದು ಉತ್ತರ ಕರ್ನಾಟಕ ಜನರ ಭಾವನೆ ಹಾಗೂ ಬಯಕೆಯಾಗಿರುತ್ತದೆ.

ಇದರಿಂದಾಗಿ ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗುತ್ತದೆ.

ಈ ಮೇಲ್ಕಂಡ ಕಾರಣದಿಂದಾಗಿ, ಬೆಂಗಳೂರು ಕೇಂದ್ರದಲ್ಲಿರುವಂತಹ ಕೆಲವು ಸರ್ಕಾರಿ ಕಛೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಗೊಳಿಸುವುದಕ್ಕೆ ಚಾಲನೆ ಕೊಡುವ ಉದ್ದೇಶದಿಂದ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿ ವರದಿಯನ್ನು ಈ ಹಿಂದೆ ಕೊಡಲಾಗಿತ್ತು.

ಅದರ ಅಧ್ಯಕ್ಷ ನಾನೇ ಇದ್ದು ಆದರೆ ಅದರ ಪ್ರಗತಿ ಶೂನ್ಯವೆನ್ನಿಸುವುದು.

ಈ ಹಿನ್ನೆಲೆಯಲ್ಲಿ ಇನ್ನೂ ಮುಂದೆ ಪ್ರಗತಿಯ ದೃಷ್ಠಿಯಿಂದ ವಿಧಾನ ಪರಿಷತ್ತಿನ ಅಡಿಯಲ್ಲಿ ಬರುವ ಎಲ್ಲ ಸಮಿತಿಗಳ ಸಭೆಯನ್ನು ಎರಡು ತಿಂಗಳಿಗೆ ಒಮ್ಮೆ ಕಡ್ಡಾಯವಾಗಿ ಬೆಳಗಾವಿ ಸುವರ್ಣಸೌಧದಲ್ಲಿ ಸಭೆ ನಡೆಸಲು ಈ ಮೂಲಕ ಸಂಬಂಧ ಪಟ್ಟ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳು ಕ್ರಮ ತೆಗೆದುಕೊಳ್ಳಬೇಕು. ಪ್ರತಿ ಎರಡು ತಿಂಗಳಿಗೆ ಒಂದು ಬಾರಿ ಬೆಳಗಾವಿಯಲ್ಲಿ ಕಡ್ಡಾಯವಾಗಿ ನಡೆಸುವ ಮೂಲಕ ಉತ್ತರ ಕರ್ನಾಟಕ ಜನರ ನಿರೀಕ್ಷೆಯನ್ನು ಸಕಾರಗೊಳಿಸುವುದು ಸೂಕ್ತವಾಗಿರುತ್ತದೆ.

ಆದುದರಿಂದ, ಇನ್ನು ಮುಂದೆ ವಿಧಾನ ಪರಿಷತ್ತಿನ ಎಲ್ಲಾ ಸಮಿತಿಗಳು ಪ್ರತಿ ಎರಡು ತಿಂಗಳ ಅವಧಿಯಲ್ಲಿ ಒಂದು ಬಾರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಮಿತಿ ಸಭೆ ನಡೆಸಬೇಕೆಂದು ಅದಕ್ಕಿಂತ ಪೂರ್ವದಲ್ಲಿ ಕನಿಷ್ಠ ಒಂದು ತಿಂಗಳ ಮೊದಲು ಸಂಬಂಧಿಸಿದ ಅಧ್ಯಕ್ಷರುಗಳಿಗೆ, ಕಾರ್ಯದರ್ಶಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ದಿನಾಂಕ ಮತ್ತು ಸಮಯವನ್ನು ತಿಳಿಸುವುದು ಸೂಕ್ತವಾಗಿರುವದರಿಂದ ತಕ್ಷಣ ತಮಗೆ ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.ಎಂದು  ಕರ್ನಾಟಕ ವಿಧಾನ ಪರಿಷತ್ತು ಸಭಾಪತಿಗಳು
ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ