Belagavi News In Kannada | News Belgaum

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ


ಬೆಳಗಾವಿ, ಜ.18 : ಸರಕಾರಿ ಸರಸ್ವತಿ ಬಾಲಕಿಯರ ಪದವಿಪೂರ್ವ ಮಹಾವಿದ್ಯಾಯ ಬೆಳಗಾವಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರೇಂಜರ್ ಘಟಕಗಳ ಆಶ್ರಯದಲ್ಲಿ ಮಂಗಳವಾರ ಜ.16 ರಂದು ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ನಡೆಯಿತು.
ವಡಗಾಂವ ಠಾಣೆ ಪೆÇಲೀಸ್, ಎಸ್.ಐ ನಾಗರಾಜ ಅವರು ಮಾತನಾಡಿ ಹಲವು ರಸ್ತೆ ಸುರಕ್ಷತಾ ನಿಯಮಗಳನ್ನು ತಿಳಿಸಿದರು.

ಅದೇ ರೀತಿಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ವಡಗಾಂವ ಪೆÇಲೀಸ್ ಠಾಣೆಯ ಪಿ.ಎಸ್.ಐ. ಮಣಿಕಂಠ ಅ. ಪೂಜಾರಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ದ್ವಿಚಕ್ರವಾಹನ ಚಾ(ಖ)ಕರಿಗೆ ಹಲ್ಮೆಟ್ ಹಾಗೂ ಕಾರುಗಳ ಚಾಕರಿಗೆ ಸೀಟ್‍ಬೆಲ್ಟ್ ಹಾಕಿಕೊಳ್ಳಬೇಕು. ಸಿಗ್ನಲ್ಗಳ ಬಗ್ಗೆ ಮಾಹಿತಿ, ವಾಹನ ಚಲಾಯಿಸುವಾಗ ಮೊಬೈಲ್ನಲ್ಲಿ ಮಾತನಾಡಬಾರದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎನ್.ಬಿ.ಶಿರಶ್ಯಾಡ, ಸರಕಾರಿ ಸರಸ್ವತಿ ಬಾಲಕಿಯರ ಪದವಿಪೂರ್ವ ಮಹಾವಿದ್ಯಾಯದ ಉಪನ್ಯಾಸಕಿ ಅನುಪಮಾ ಹಾಗೂ ರೇಂಜರ್ ಲೀಡರರಾದ ಜ್ಯೋತಿ.ಆರ್.ಮರೇಗುದ್ದಿ, ಅವರು ನಿರೂಪಿಸಿ, ವಂದಿಸಿದರು.