Belagavi News In Kannada | News Belgaum

ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ: ಅಂತಿಮ ಮತದಾರರ ಪಟ್ಟಿ ಪ್ರಕಟ

ಬೆಳಗಾವಿ,ಜ.22: ಅರ್ಹತಾ ಜ.1 ನ್ನಾಧರಿಸಿ ಭಾವಚಿತ್ರ ಇರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ನವದೆಹಲಿಯ ಭಾರತ ಚುನಾವಣಾ ಆಯೋಗ ನವದೆಹಲಿ ಹಾಗೂ ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗಳು ಇವರು ವೇಳಾ ಪಟ್ಟಿಯನ್ವಯ ಜ. 22ರಂದು ಅಂತಿಮ ಮತದಾರರ ಪಟ್ಟಿಗಳನ್ನು ಪ್ರಸಿದ್ದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದ್ಧಾರೆ.

ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳಲ್ಲಿ ಒಟ್ಟು 4524 ಮತಗಟ್ಟೆಗಳಿದ್ದು, ನಗರ ಪ್ರದೇಶದಲ್ಲಿ 1,324 ಹಾಗೂ ಗ್ರಾಮೀಣ ಪ್ರದೇಶದಲ್ಲಿ-3200 ಮತಗಟ್ಟೆಗಳಿರುತ್ತವೆ. ಕರಡು ಮತದಾರರ ಪಟ್ಟಿಯಲ್ಲಿ 20,05,003-ಪುರಷರು, 19,73,668-ಮಹಿಳೆಯರು, 155-ಇತರರು ಹೀಗೆ ಒಟ್ಟು 39,78,826 ಮತದಾರರು ಇರುತ್ತಾರೆ. ಅಂತಿಮ ಮತದಾರರ ಪಟ್ಟಿಯಲ್ಲಿ 20,25,471-ಪುರಷರು, 20,11,636-ಮಹಿಳೆಯರು, 168-ಇತರರು ಹೀಗೆ ಒಟ್ಟು 40,37,275 ಮತದಾರರು ಇರುತ್ತಾರೆ.

ಕ್ರ.ಸಂ ವಿಧಾನಸಭಾ ಮತಕ್ಷೇತ್ರದ ಸಂಖ್ಯೆ ಮತ್ತು ಹೆಸರು ಪುರುಷ ಮಹಿಳೆಯರು ಇತರರು ಒಟ್ಟು
1 01-ನಿಪ್ಪಾಣಿ 115645 115069 12 230726
2 02-ಚಿಕ್ಕೋಡಿ-ಸದಲಗಾ 114437 114619 10 229066
3 03-ಅಥಣಿ 119303 115449 5 234757
4 04-ಕಾಗವಾಡ 102369 99836 7 202212
5 05-ರಾಯಬಾಗ (ಎಸ್.ಸಿ) 101836 97653 14 199503
6 06-ಕುಡಚಿ (ಎಸ್.ಸಿ) 110677 106132 8 216817
7 07-ಹುಕ್ಕೇರಿ 105091 106244 10 211345
8 08-ಅರಭಾಂವಿ 127376 127220 9 254605
9 09-ಗೋಕಾಕ 126414 130478 19 256911
10 10-ಯಮಕನಮರಡಿ (ಎಸ್.ಟಿ) 102126 103881 9 206016
11 11-ಬೆಳಗಾವಿ ಉತ್ತರ 126800 131606 16 258422
12 12-ಬೆಳಗಾವಿ ದಕ್ಷಿಣ 126468 126204 12 252684
13 13-ಬೆಳಗಾವಿ ಗ್ರಾಮೀಣ 131813 130766 10 262589
14 14-ಖಾನಾಪೂರ 111424 105674 5 217103
15 15-ಕಿತ್ತೂರ 99709 98607 5 198321
16 16-ಬೈಲಹೊಂಗಲ 97909 98630 2 196541
17 17-ಸವದತ್ತಿ ಯಲ್ಲಮ್ಮ 101123 101197 4 202324
18 18-ರಾಮದುರ್ಗ 104951 102371 11 207333
ಒಟ್ಟು 2025471 2011636 168 4037275

Claims and objection ರ ಅವಧಿಯಲ್ಲಿ 63,236 ನಮೂನೆ-6, 18,252 ನಮೂನೆ-7, 18,206 ನಮೂನೆ-8 ಅರ್ಜಿಗಳು ಸ್ವೀಕೃತವಾಗಿರುತ್ತವೆ. ಜಿಲ್ಲೆಯಲ್ಲಿ Net Addition 58,449ಆಗಿರುತ್ತವೆ. ಜಿಲ್ಲೆಯ ಕರಡು ಮತದಾರರ ಪಟ್ಟಿಯಲ್ಲಿ Elector Population Ratio–70.01 ಇರುತ್ತದೆ. ಅದೇ ರೀತಿ Gender Ratio-984 ಇರುತ್ತದೆ. ಅಂತಿಮ ಮತದಾರರ ಪಟ್ಟಿಯಲ್ಲಿ Elector Population Ratio- 71.03 ಇರುತ್ತದೆ. ಅದೇ ರೀತಿ Gender Ratio-993 ಇರುತ್ತದೆ. ಕರಡು ಮತದಾರರ ಪಟ್ಟಿಯಲ್ಲಿ 51,159 ಯುವ ಮತದಾರರು ಇರುತ್ತಾರೆ. ಅಂತಿಮ ಮತದಾರರ ಪಟ್ಟಿಯಲ್ಲಿ 1,02,706 ಯುವ ಮತದಾರರು ಇರುತ್ತಾರೆ.
ನಮೂನೆ 6, 6ಂ, 7, 8 ಗಳನ್ನು ತಮ್ಮ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆ ಮಟ್ಟದ ಅಧಿಕಾರಿಗೆ (BLO),, ಮತದಾರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರ ನೋಂದಣಾಧಿಕಾರಿಯವರಿಗೆ ಸಲ್ಲಿಸಬಹುದಾಗಿದೆ. ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿಗಳು ಮತದಾರ ನೋಂದಣಾಧಿಕಾರಿಗಳಾಗಿದ್ದು, ಸಂಬಂಧಿಸಿದ ತಹಶೀಲ್ದಾರರು ಸಹಾಯಕ ಮತದಾರ ನೋಂದಣಾಧಿಕಾರಿಗಳಾಗಿರುವರು. ಉತ್ತರ-ದಕ್ಷಿಣ ಬೆಳಗಾವಿ ವಿಧಾನಸಭಾ ಮತಕ್ಷೇತ್ರಗಳಿಗೆ ಆಯುಕ್ತರು ಮಹಾನಗರ ಪಾಲಿಕೆ ಅವರು ಮತದಾರ ನೋಂದಣಾಧಿಕಾರಿಯಾಗಿದ್ದು, ಪರಿಷತ್ ಕಾರ್ಯದರ್ಶಿ, ಮಹಾನಗರ ಹಾಗೂ ಕಂದಾಯ ಅಧಿಕಾರಿ ಮಹಾನಗರ ಪಾಲಿಕೆ ಅವರು ಸಹಾಯಕ ಮತದಾರ ನೋಂದಣಾಧಿಕಾರಿ ಆಗಿರುತ್ತಾರೆ.
ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರ್ಪಡೆ, ಕೈಬಿಡಲು/ ಕಡಿಮೆಗೊಳಿಸಲು, ಮತದಾರರ ಪಟ್ಟಿಯಲ್ಲಿ ತಪ್ಪುಗಳಿದ್ದಲ್ಲಿ ತಿದ್ದುಪಡಿಗಾಗಿ, ವಿಶೇಷ ಚೇತನರ ಗುರುತಿಸುವಿಕೆ ಹಾಗೂ ಮತದಾರರ ಚೀಟಿಯ ನಕಲು ಪ್ರತಿಗಾಗಿ, ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಒಳಗೆ ವಿಳಾಸ ಬದಲಾವಣೆಗಳ ಕುರಿತು ಹಾಗೂ ಮತದಾರರ ಪಟ್ಟಿಗಳ ಕುರಿತು ಯಾವುದೇ ಸಮಸ್ಯೆಗಳಿದ್ದಲ್ಲಿ ಮೇಲೆ ತೋರಿಸಿದ ಮತದಾರರ ನೋಂದಣಾಧಿಕಾರಿಗಳ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.
ಅಂತಿಮ ಮತದಾರರ ಪಟ್ಟಿ ಪ್ರಕಟಪಡಿಸಿದ ಬಗ್ಗೆ ಜ.22 ರಂದು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸಭೆ ಜರುಗಿಸಿ ಮಾಹಿತಿಯನ್ನು ನೀಡಲಾಗಿದೆ. ಆ.01 ರ ಅರ್ಹತಾ ದಿನಾಂಕವನ್ನಾಧರಿಸಿ ಅಂತಿಮ ಮತದಾರರ ಪಟ್ಟಿಯ ಒಂದು ಪ್ರತಿ (ಕನ್ನಡ ಭಾಷೆಯಲ್ಲಿ) (ಮರಾಠಿ ಭಾಷೆಯಲ್ಲಿ ನಿಪ್ಪಾಣಿ, ಚಿಕ್ಕೋಡಿ, ಉತ್ತರ-ದಕ್ಷಣಿ ಬೆಳಗಾವಿ, ಗ್ರಾಮೀಣ, ಖಾನಾಪೂರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ)ಯನ್ನು ಹಾಗೂ ಸಾಪ್ಟ್ ಕಾಫಿಯ ಸಿ.ಡಿ ಮಾನ್ಯತೆ ಪಡೆದ ನೋಂದಾಯಿತ ರಾಜಕೀಯ ಪಕ್ಷಗಳ ಜಿಲ್ಲಾ ಅಧ್ಯಕ್ಷರುಗಳಿಗೆ ಉಚಿತವಾಗಿ ನೀಡಲಾಗುವದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.