Belagavi News In Kannada | News Belgaum

ಅಟಲ್ ಭೂ ಜಲ ಯೋಜನೆ ಅಂತರ್ಜಲ ಅಭಿವೃದ್ಧಿಗೆ ಮುಖ್ಯ, ತರಬೇತಿ ಕಾರ್ಯಾಗಾರದಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ ಅಭಿಮತ


ಬೆಳಗಾವಿ,ಜ.22: ವಿಶ್ವ ಬ್ಯಾಂಕ್ ಮತ್ತು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಅಟಲ್ ಭೂ ಜಲ ಯೋಜನೆ ಸುಸ್ಥಿರ ಅಂತರ್ಜಲ ಅಭಿವೃದ್ಧಿಗೆ ಅತಿ ಮುಖ್ಯವಾಗಿದೆ ಎಂದು ಜಿಪಂ ಸಿಇಓ ರಾಹುಲ್ ಶಿಂಧೆ ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ (ಜ.22) ಜಿಲ್ಲಾ ಪಂಚಾಯತ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಅಟಲ್ ಭೂಜಲ ಯೋಜನೆ ಜಿಲ್ಲಾ ಕಾರ್ಯಕ್ರಮ ನಿರ್ವಹಣಾ ಘಟಕದ ಸಹಯೋಗದಲ್ಲಿ ನಡೆದ ಅಥಣಿ ಮತ್ತು ರಾಮದುರ್ಗ ಪಾಲುದಾರಿಕೆ ಇಲಾಖೆಗಳ ಸಭೆ ಹಾಗೂ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮುದಾಯ ಭಾಗವಹಿಸುವಿಕೆ ಹಾಗೂ ಇಲಾಖೆಯ ಸಹಭಾಗಿತ್ವದಲ್ಲಿ ಈ ಯೋಜನೆ ಯಶಸ್ವಿಗೊಳಿಸಬೇಕಿದೆ. ಆದ್ದರಿಂದ ಅನುμÁ್ಠನದ ಇಲಾಖೆಗಳು ಹಾಗೂ ಜಿಲ್ಲಾ ನಿರ್ವಹಣಾ ಘಟಕ ತಾಲೂಕು ಅನುμÁ್ಠನ ಘಟಕ ಸಮುದಾಯ ಭಾಗವಹಿಸುವಿಕೆ ಖಚಿತ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ನಿವೃತ್ತ ವಿಜ್ಞಾನಿ ಪುರಂದರ ಬೆಕಾಲ್, ಅಟಲ್ ಭೂಜಲ್ ಯೋಜನೆಯ ಜಲ ಸಂಪನ್ಮೂಲ ತಜ್ಞ ಅಕ್ಷಯ ಪಾಟೀಲ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹಾಗೂ ತೋಟಗಾರಿಕೆ, ರೇμÉ್ಮ ಇಲಾಖೆ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮತ್ತಿತರರು ಉಪಸ್ಥಿತರಿದ್ದರು.