Belagavi News In Kannada | News Belgaum

ಚಿಕ್ಕೋಡಿಯ ಚುನಾವಣೆ ಕೌಂಟಿಂಗ್ ಕೇಂದ್ರಗಳನ್ನು ಪರಿಶೀಲಿಸಿದ ಜಿ.ಪಂ ಸಿಇಒ ರಾಹುಲ ಶಿಂಧೆ

ಬೆಳಗಾವಿ,ಜ.22 : ಚಿಕ್ಕೋಡಿ ಲೋಕಸಭಾ ಚುನಾವಣೆಯನ್ನು ಅಚ್ಚುಕಟ್ಟಾಗಿ ಹಾಗೂ ಯಾವುದೇ ತೊಂದರೆ ಬರದ ಹಾಗೆ ಕೆಲಸವನ್ನು ಮಾಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ ಶಿಂಧೆ ಸೂಚಿಸಿದರು.
ಚಿಕ್ಕೋಡಿ ತಾಲೂಕಿಗೆ ಭೇಟಿ ನೀಡಿ ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಯುವ ಮತದಾರರ, ಜನಸಂಖ್ಯೆಯ, ಲಿಂಗಾನುಪಾತ ಮಾಹಿತಿಯನ್ನು ಅಧಿಕಾರಿಗಳಿಂದ ಸಂಗ್ರಹಿಸಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು ಹಾಗೂ ಆರ್.ಡಿ ಕಾಲೇಜಿನ ಮಾಸ್ಟರಿಂಗ ಮತ್ತು ಡಿ ಮಾಸ್ಟರಿಂಗ ಕೊಠಡಿಗಳನ್ನು ಮತ್ತು ಕೌಂಟಿಂಗ್ ಕೇಂದ್ರಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗ ಅಧಿಕಾರಿಗಳಾದ ಎಸ್.ಎಸ್.ಸಂಪಗಾಂವಿ, ತಹಶೀಲ್ದಾರರಾದ ಸಿ.ಎಸ್.ಕುಲಕರ್ಣಿ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಎಸ್.ಕಾದ್ರೋಳ್ಳಿ, ಸಹಾಯಕ ನಿರ್ದೇಶಕರು (ಗ್ರಾ.ಉ ಮತ್ತು ಪಂ.ರಾ) ಹಾಗೂ ತಹಶೀಲ್ದಾರ ಮತ್ತು ತಾಲೂಕ ಪಂಚಾಯತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.