Belagavi News In Kannada | News Belgaum

ಕೃಷಿ ನವೋದ್ಯಮ ಕಾರ್ಯಕ್ರಮ: ಕೃಷಿಯಲ್ಲಿ ಆಸಕ್ತ ಹಾಗೂ ಪ್ರಗತಿಪರ ರೈತರಿಗೆ ಸುವರ್ಣ ಅವಕಾಶ

ಬೆಳಗಾವಿ,ಜ.22 : 2023-24ನೇ ಸಾಲಿನಲ್ಲಿ ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದೋಗ್ಯ ಸೃಜನೆಗಾಗಿ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು, ನವೀನ ಪರಿಕಲ್ಪನೆಗಳ ವಾಣಿಜ್ಯಿಕರಣವನ್ನು ಉತ್ತೇಜಿಸುವ ಗುರಿಯೊಂದಿಗೆ ಕೃಷಿ ನವೋದ್ಯಮ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು.
ಆದರಿಂದ ಕೃಷಿ ಪದವಿಧರರು, ವಿಧ್ಯಾವಂತ ಯುವಕರು, ಆಸಕ್ತ ಪ್ರಗತಿಪರ ರೈತರು ಕೃಷಿ ವಲಯದಲ್ಲಿ ನವೋದ್ಯಮ ಆರಂಭಿಸಲು ಸಹಾಯ ನೀಡಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಜನೆ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಯೋಜನೆಯ ಘಟಕಗಳು:
ಕೃಷಿ ಕ್ಷೇತ್ರದಲ್ಲಿ ನೂತನ ಪರಿಕಲ್ಪನೆಯೊಂದಿಗೆ ಆರಂಭಿಸುವ ಹೊಸ ಕೃಷಿ ನವೋದ್ಯಮಿಗಳಿಗೆ ಅನುಮೋದಿತ ಯೋಜನಾ ವರದಿಯ ಶೇ.50% ರಷ್ಟು ಸಹಾಯಧನವನ್ನು ಬ್ಯಾಂಕ್ ಸಾಲದ ಮುಖಾಂತರ ನೀಡಲಾಗುವುದು.
ಕೃಷಿ ವಲಯದಲ್ಲಿ ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆಗಾಗಿ ಹಾಗೂ ಉನ್ನತಿಕರಣಕ್ಕಾಗಿ ಯೋಜನಾ ವರದಿ ಶೇ. 50 ರಷ್ಟು ಸಹಾಯಧನವನ್ನು ಕೃಷಿ ವಲಯದ ನವೋದಮಿಗಳಿಗೆ ಬ್ಯಾಂಕ್ ಸಾಲದ ಮುಖಾಂತರ ನೀಡಲಾಗುವುದು.
ಆಯ್ಕೆಯಾದ ನವೋದ್ಯಮಗಳ ಸಾಮಥ್ರ್ಯಾಭಿವೃದ್ದಿಗೆ ಕೃಷಿ ವಿಶ್ವ ವಿದ್ಯಾಲಯ ICAR, CFTRI, CSIRC-CAMP ಹಾಗೂ ಇತರೆ ಸಂಶೊಧನಾ ಸಂಸ್ಥೆಗಳಾದ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಸ್ಥಾಪಿತವಾಗಿರುವ ಕೃಷಿ ನಾವೀನ್ಯತೆಗಾಗಿ ಶ್ರೇಷ್ಠತೆಯ ಕೇಂದ್ರಗಳ ಮೂಲಕ ತರಬೇತಿಗಳನ್ನು ನೀಡಲಾಗುವುದು.
ಆಸಕ್ತಿಯುಳ್ಳ ಫಲಾನುಭವಿಗಳು ಜ.25ರ ಒಳಗಾಗಿ ಅರ್ಜಿಯನ್ನು ತಮ್ಮ ತಾಲೂಕಿನ ಸಮೀಪದ ರೈತ ಸಂಪರ್ಕ ಕೇಂದ್ರ, ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ವಿಭಾಗಿಯ ಉಪ ಕೃಷಿ ನಿರ್ದೇಶಕರು ಕಛೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಬೆಳಗಾವಿ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

 

ಹೈಟೆಕ್ ಹಾರ್ವೆಸ್ಟರ್ ಹಬ್‍ಗಳಿಗೆ ಕೃಷಿ ಇಲಾಖೆಯಿಂದ ಅರ್ಜಿ ಆಹ್ವಾನ

ಬೆಳಗಾವಿ,ಜ.22 : 2023-24 ನೇ ಸಾಲಿನಲ್ಲಿ ಹೈಟೆಕ್ ಹಾರ್ವೆಸ್ಟರ್ ಹಬ್‍ಗಳ ಅನುಷ್ಠಾನ ಮಾಡಲು ಚಾಲ್ತಿಯಲ್ಲಿರು ನೋಂದಾಯಿತ ಸಂಘ-ಸಂಸ್ಥೆಗಳು(ಈPಔ ಗಳನ್ನೊಳಗೊಂಡಂತೆ), ಯಂತ್ರಧಾರೆ ಕೇಂದ್ರಗಳು, ವೈಯಕ್ತಿಕ ಫಲಾನುಭವಿಗಳಿಗೆ ಸಹಾಯಧನ ನೀಡುವ ಕಾರಣ ಸಾಮಾನ್ಯ ವರ್ಗದ ರೈತರಿಗೆ ಗರಿಷ್ಠ ಶೇ.50 ರಂತೆ ಪ.ಜಾ/ಪ.ಪಂ. ವರ್ಗದ ರೈತರಿಗೆ ಗರಿಷ್ಠ ಶೇ.70 ರಂತೆ ಹಾಗೂ ಸಂಘ-ಸಂಸ್ಥೆಗಳಿಗೆ ಗರಿಷ್ಠ ಶೇ.70 ರಂತೆ ಸಹಾಯಧನ ನೀಡಲಾಗುವುದು
ಬೆಳಗಾವಿ ಜಿಲ್ಲೆಗೆ ಎರಡು Comboಹಾರ್ವೆಸ್ಟರ್ ಹಬ್, ಒಂದು ಕಂಬೈನ್ಡ್ ಹಾರ್ವೆಸ್ಟರ್ ಹಬ್ ಹಾಗೂ ಏಳು ಶುಗರ್‍ಕೇನ್ ಹಾರ್ವೆಸ್ಟರ್ ಹಬ್ ಕೇಂದ್ರ ಕಛೇರಿಯಿಂದ ಕಾರ್ಯಕ್ರಮವಿದ್ದು, ಜಿಲ್ಲಾ ಮಟ್ಟದ ಉಪಕರಣ ಸಮಿತಿ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಬೆಳಗಾವಿ ಅವರ ಅಧ್ಯಕ್ಷತೆಯಲ್ಲಿ ನಿಯಮಾನುಸಾರ ಹೈಟೆಕ್ ಹಾರ್ವೆಸ್ಟರ್ ಹಬ್‍ಗಳನ್ನು ನಿರ್ವಹಿಸಲು ಸಂಸ್ಥೆ/ ವೈಯಕ್ತಿಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿದಾರರು ಇಚ್ಛಿಸುವ ಹಬ್‍ಗೆ ಅರ್ಜಿ ಜೊತೆ, ನೊಂದಾಯಿಸಿದ ಸಂಸ್ಥೆ ಪ್ರಮಾಣ ಪತ್ರ, ಪಹಣಿ, ಜಾತಿಪ್ರಮಾಣ ಪತ್ರ, ಗುರುತಿನಪತ್ರ, ಬ್ಯಾಂಕ್‍ಖಾತೆ ಸಂಖ್ಯೆ, ರೂ.20/-ಗಳ ಛಾಪಾ ಕಾಗದದ ಮೇಲೆ ಹಬ್‍ನ್ನು ಪರಭಾರೆ ಮಾಡುವುದಿಲ್ಲವೆಂದು ಮುಚ್ಚಳಿಕೆ ಪತ್ರ, 2 ವರ್ಷಗಳ ಲೆಕ್ಕ ಪರಿಶೋಧನಾ ಪತ್ರ, ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಕಟಾವಿಗೆ ಮಾಡಿಕೊಂಡ ಲಿಖಿತ ಒಪ್ಪಂದ ಪ್ರಮಾಣ ಪತ್ರ ಹಾಗೂ ಸಹಾಯಧನವು Credit Linked Back ended subsidy ಆಗಿರುವುದರಿಂದ ಸಂಬಂಧಿಸಿದ ಬ್ಯಾಂಕ್‍ನಿಂದ “ತಾತ್ವಿಕ ಸಾಲ ಮಂಜೂರಾತಿ ಪತ್ರ”(In Principle Loan Sanction Letter)ವನ್ನು ಸಂಭಂದಿಸಿದ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಸಲ್ಲಿಸುವುದು.
ಕೃಷಿ ಯಂತ್ರಧಾರೆ ಕೇಂದ್ರಗಳ, ಸಹಕಾರಿ ಸಂಘಗಳ ನಿಬಂಧನೆಯಂತೆ, ಕಂಪನಿ ಕಾಯ್ದೆಯಡಿ ನೋಂದಾಯಿಸಿದ ಸಂಘ-ಸಂಸ್ಥೆಗಳು ಮಾತ್ರ ಅರ್ಹತೆಯನ್ನು ಹೊಂದಿರುತ್ತವೆ. ಫೆ. 05 ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು ಬೆಳಗಾವಿಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಸಿದ್ದಾರೆ.

 

“ಪರೀಕ್ಷಣ ಮತ್ತು ಮೌಲ್ಯ ನಿರ್ಧಾರಣೆ ಹಾಗೂ ಪ್ರಶ್ನಾಂಶ ಬರವಣಿಗೆ ಅಭ್ಯಾಸ” ಕುರಿತು ಕಾರ್ಯಾಗಾರ

ಬೆಳಗಾವಿ,ಜ.22 : ರಾಷ್ಟ್ರೀಯ ಪರೀಕ್ಷಣ ಸೇವೆ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ಹಾಗೂ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಶೈಕ್ಷಣಿಕ ಜಿಲ್ಲೆಯ ಉರ್ದು ಶಿಕ್ಷಕರುಗಳಿಗೆ ಉರ್ದು ಭಾಷೆಯಲ್ಲಿ “ಪರೀಕ್ಷಣ ಮತ್ತು ಮೌಲ್ಯ ನಿರ್ಧಾರಣೆ ಹಾಗೂ ಪ್ರಶ್ನಾಂಶ ಬರವಣಿಗೆ ಅಭ್ಯಾಸ” ಕುರಿತು ನಗರದ ಆಲೂರು ವೆಂಕಟರಾವ ಭಾಷಾ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಜ.22 ರಿಂದ ಜ.24ರ ವರೆಗೆ ಮೂರು ದಿನಗಳ ಮುಖಾ-ಮುಖಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರದ ಸಿ ಟಿ ಇ ಪ್ರಾಚಾರ್ಯರು/ಸಹನಿರ್ದೇಶಕರಾದ ಎಮ್ ಎಮ್ ಸಿಂಧೂರ ಇವರು ವಹಿಸಿ ಭಾಷಾ ಶಿಕ್ಷಕರಿಗೆ ಅಗತ್ಯವಾದ ಈ ತರಬೇತಿಯ ಸದುಪಯೋಗ ಮಾಡಿಕೊಳ್ಳಲು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಆಡಿ. Dr. M.d. Saleem Ahmed Dr. Abdul Halim, Dr. Taiyab Ali Khan, ತರಬೇತಿ ಕಾರ್ಯಕ್ರಮದಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಐವತ್ತು ಜನ ಉರ್ದು ಶಿಕ್ಷಕರು ಹಾಗೂ ತರಬೇತಿ ನೋಡಲ್ ಅಧಿಕಾರಿ ಎಸ್ ಎಸ್ ಹಿರೇಮಠ ಉಪನ್ಯಾಸಕರು ಹಾಜರಿದ್ದರು. ಪ್ರವಾಚಕರಾದ ಬಿ ಎಸ್ ಮಾಯಾಚಾರಿ ನಿರೂಪಣೆ ಮಾಡಿದ್ದರು.

 

ಸಕಾಲದಲ್ಲಿ ಅನುದಾನವನ್ನು ಬಳಿಸಿಕೊಳ್ಳುವಂತೆ ಅಧಿಕಾರಿಗಳಿಗೆ,
ಜಿಪಂ ಸಿಇಓ ರಾಹುಲ್ ಶಿಂಧೆ ಸೂಚನೆ

ಬೆಳಗಾವಿ,ಜ.22  2023-24ನೇ ಸಾಲಿನ ಆರ್ಥಿಕ ವರ್ಷ ಮುಕ್ತಾಯ ಹಂತದಲ್ಲಿದ್ದು, ಈಗಾಗಲೇ ಬಿಡುಗಡೆಯಾದ ಅನುದಾನವನ್ನು ಲ್ಯಾಪ್ಸ ಆಗದಂತೆ ಬಳಕೆ ಮಾಡಲು ಅಧಿಕಾರಿಗಳಿಗೆ ಜಿಪಂ ಸಿಇಓ ರಾಹುಲ್ ಶಿಂಧೆ ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ (ಜ.22) ಪಂಚಾಯತ ರಾಜ್ ಇಂಜನೀಯರಿಂಗ್ ವಿಭಾಗ ಬೆಳಗಾವಿ, ಚಿಕ್ಕೋಡಿ, ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ, ಹಾಗೂ ಕೆ.ಆರ್.ಐ.ಡಿಎಲ್ ಇಲಾಖೆಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2023-24ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನವನ್ನು ಸಕಾಲದಲ್ಲಿ ಬಳಿಸಿಕೊಂಡು ಲ್ಯಾಪ್ಸ ಆಗದಂತೆ ನೋಡಿಕೊಳ್ಳುವುದು, ಒಂದು ವೇಳೆ ಲ್ಯಾಪ್ಸ ಆದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ಟೆಂಡರ್ ಕರೆಯುವಲ್ಲಿ ವಿಳಂಬಕ್ಕೆ ಆಸ್ಪದ ನೀಡುವಂತಿಲ್ಲ. ಸೈಟ್ ತೊಂದರೆಗಳನ್ನು ಆದಷ್ಟು ಬೇಗ ಪರಿಹರಿಸಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಅನುμÁ್ಠನಗೊಳಿಸಿ ಪೂರ್ಣಗೊಳಿಸುವಂತೆ ಎಂದು ಸಭೆಗೆ ತಿಳಿಸಿದರು.
ಕಾರ್ಯಕಾರಿ ಅಭಿಯಂತರರು ಪಂಚಾಯತ್ ರಾಜ್ ಇಂಜನೀಯರಿಂಗ ವಿಭಾಗ ಚಿಕ್ಕೋಡಿ/ಬೆಳಗಾವಿ, ಕಾರ್ಯಕಾರಿ ಅಭಿಯಂತರರು ಪಿ.ಎಮ್.ಜಿ.ಎಸ್.ವಾಯ್. ಕಾರ್ಯಕಾರಿ ಅಭಿಯಂತರರು ಕೆ.ಆರ್.ಐ.ಡಿ.ಎಲ್, ಜಿಲ್ಲೆಯ ಎಲ್ಲ ತಾಲ್ಲೂಕಿನ ಸಹಾಯಕ ಕಾರ್ಯಕಾರಿ ಅಭಿಯಂತರರು ಪಂ.ರಾ.ಇಂ. ವಿಭಾಗ ಬೆಳಗಾವಿ/ಚಿಕ್ಕೋಡಿ ಮತ್ತಿತರರು ಉಪಸ್ಥಿತರಿದ್ದರು.