Belagavi News In Kannada | News Belgaum

ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸವಿರಲಿ : ಸಂಜೀವರಾವ್

ಕೆಂಭಾವಿ: ವಿದ್ಯಾರ್ಥಿಗಳ ಜೀವನದಲ್ಲಿ ಬರುವ ಅವಕಾಶಗಳ ಸದುಪಯೋಗ ಪಡಿಸಿಕೊಳ್ಳಿ
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ನಮ್ಮಿಂದ ಆಗೋದಿಲ್ಲ ಎನ್ನುವ ಖಿನ್ನತೆಯ ಮನೋಭಾವನೆ ಬೇಡ ನಾನು ಭಾಗವಹಿಸುತ್ತೇನೆ ಗೆದ್ದೇ ಗೆಲ್ಲುತ್ತೇನೆ  ಎಂಬ ವಿಶ್ವಾಸವಿರಲಿ ಎಂದು  ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ ತಿಳಿಸಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಮಂಗಳವಾರ ನಡೆದ ರಾಯಚೂರು ವಿಶ್ವವಿದ್ಯಾಲಯದ ಪುರುಷ ಮತ್ತು ಮಹಿಳೆಯರ ಗುಡ್ಡಗಾಡು ಓಟ (ಕ್ರಾಸ್ ಕಂಟ್ರಿ) ಪಂದ್ಯಾವಳಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಸರಕಾರಿ ಕಾಲೇಜುಗಳು ಯಾವದೇ ಖಾಸಗಿ ಕಾಲೇಜುಗಳಿಗಿಂತ ಕಡಿಮೆಯಿಲ್ಲ. ಸರಕಾರ ವಿದ್ಯಾರ್ಥಿಗಳ ಶೈಕ್ಷಣಕ ಅಭಿವೃದ್ದಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ ಅವುಗಳ ಸದುಪಯೋಗ ಪಡಿದುಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ನಾಗರಾಜ ಚಾವಲ್ಕರ್ ಮಾತನಾಡಿ, ರಾಯಚೂರು ವಿವಿಯ ಈ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿಗಳು ವಿವಿ ವತಿಯಿಂದ ನಡೆಯುವ ಅಂತರ ವಿಶ್ವವಿದ್ಯಾಲಯಗಳ ಕ್ರಾಸ್ ಕಂಟ್ರಿ ಪಂದ್ಯಾವಳಿಯಲ್ಲಿ ಭಾಗವಹಸುತ್ತಿದ್ದು, ಇದನ್ನು ಸದುಪಯೋಗ ಪಡೆದುಕೊಳ್ಳಿ ಎಂದು ಶುಭ ಹಾರೈಸಿದರು. ಸ್ಪರ್ಧೆಯಲ್ಲಿ 30 ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ರಾಯಚೂರು ವಿವಿಯ ದೈಹಿಕ ನಿರ್ದೇಶಕ ಮಲ್ಲಿಕಾರ್ಜುನ, ಕ್ರಾಸ್ ಕಂಟ್ರಿ ಆಯ್ಕೆ ಸಮಿತಿ ಸದಸ್ಯ ಧನಂಜಯ, ಮೇಘನಾಥ, ಕೆಂಭಾವಿ ಕಾಲೇಜು ದೈ. ನಿ. ಪ್ರಸಾದ ಭಂಡಾರಿ, ರಮೇಶ, ಮಹಿಬೂಬು ನಾಶಿ ಸೇರಿ ಹಲವರಿದ್ದರು.