Belagavi News In Kannada | News Belgaum

ಕುಡಿಯುವ ನೀರು, ಜಾನುವಾರಗಳಿಗೆ ಮೇವಿನ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಿ: ಪ್ರವೀಣ ಪಾಟೀಲ್

ಕಾಗವಾಡ: ಬರಗಾಲ ಘೋಷಣೆಯಾಗಿರುವುದರಿಂದ ಕುಡಿಯುವ ನೀರು, ಜಾನುವಾರಗಳಿಗೆ ಮೇವಿನ ಕೊರತೆ ಉಂಟಾಗದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಇಒ ಪ್ರವೀಣ ಪಾಟೀಲ್ ಸೂಚಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿ  ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನ ಎಲ್ಲ ಗ್ರಾಮಗಳ ಕುಡಿಯುವ ನೀರಿನ ಟ್ಯಾಂಕ್ ಗಳನ್ನು ತಿಂಗಳಿಗೊಮ್ಮೆ ಶುಚಿಗೊಳಿಸಬೇಕು ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕಡ್ಡಾಯವಾಗಿ  ಒಂದು ನೀರಿನ ಟ್ಯಾಂಕರ್ ಹೊಂದಿರಬೇಕು. ಟ್ಯಾಂಕರ್ ಇಲ್ಲದ ಕಡೆ ಟ್ಯಾಂಕರ್ ಖರೀದಿಸಬೇಕು. ಜೊತೆಗೆ ಜಾನುವಾರಗಳಿಗೆ ಮೇವಿನ ವ್ಯವಸ್ಥೆ ಮಾಡಿಕೊಳ್ಳಬೇಕು  ಎಂದು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಮುರುಗಾಲಿ ಮಾತನಾಡಿ ,  ಕೃಷ್ಣಾ ನದಿಯಲ್ಲಿ ಮಾರ್ಚ್ ಅಂತ್ಯದವರೆ ನೀರು ಲಭ್ಯವಿದೆ. ನದಿ ತೀರದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಮಂಗಸೂಳಿ ಮತ್ತು ಕೆಂಪವಾಡ ಗ್ರಾಮ ಪಂಚಾಯತಗಳ ವ್ಯಾಪ್ತಿ ಮಾತ್ರ ಸಮಸ್ಯೆ ಕಂಡು ಬರುವ ಸಾಧ್ಯತೆ ಇದ್ದು, ಮುಂಜಾಗೃತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಶಾಲೆಗಳಲ್ಲಿ ಕಂಪೌಂಡ ಮತ್ತು ಆಟದ ಮೈದಾನ ಬೇಡಿಕೆ ಇದೆ. ಮನರೇಗಾ ಯೋಜನೆಯಡಿ  ಕಾಮಗಾರಿಗಳ ಅನುಷ್ಠಾನಗೊಳಿಸಲು ತಿಳಿಸಿದರು. ಬಿಇಒ ಅವರು ಮಾತನಾಡಿ, ಕೆಲವೆಡೆ ಗ್ರಂಥಾಲಯ ಕಾಮಗಾರಿ ಪೂರ್ಣಗೊಂಡಿದ್ದು, ಪುಸ್ತಕರಗಳ ಅವಶ್ಯಕೆ ಇದ್ದು, ಸರಬರಾಜು ಮಾಡಲು ತಿಳಿಸಿದರು.

ತಹಶೀಲ್ದಾರ್  ರಾಜೇಶ ಬುರ್ಲಿ ಮಾತನಾಡಿ, ಜುಗೂಳ, ಕೃಷ್ಣಾ ಕಿತ್ತೂರು ಮತ್ತು ಉಗಾರ ಬಿಕೆ ಗ್ರಾಮ ವ್ಯಾಪ್ತಿ ನೆರೆ ಸಂತ್ರಸ್ಥರಿಗೆ ಹಂಚಿಕೆಯಾದ  30 ಮನೆಗಳು ಇನ್ನು ಆರಂಭವಾಗಿಲ್ಲ. ಫಲಾನುಭವಿಗಳಿಗೆ ನೋಟೀಸು ನೀಡಿ ಮನೆ ಕಟ್ಟಿಕೊಳ್ಳಲು ಆಗದಿದ್ದಲ್ಲಿ  ವರದಿ ಸಲ್ಲಿಸುವಂತೆ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಿದರು.

ಕೆಲವು ಕಡೆ ಅಂಗವಾಡಿ ಸ್ವಂತ ಕಟ್ಟಡಗಳ ಸಮಸ್ಯೆಯಿದ್ದು, ಗ್ರಾಮ ಪಂಚಾಯಿತಿಯಿಂದ ಸ್ಥಳಾವಕಾಶ ಒದಗಿಸಿ ಕಟ್ಟಡ  ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಂಜೀವ ಕುಮಾರ ಸದಲಗೆ  ಇಒ ಅವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಯಿಸಿದ ಇಒ, ಸ್ವಂತ ಕಟ್ಟಡ ಇಲ್ಲದ ಅಂಗನವಾಡಿ ಗ್ರಾಮಗಳ ವಾರು ಮಾಹಿತಿ ಸಲ್ಲಿಸಲು ತಿಳಿಸಿದರು. ಜೊತೆಗೆ ನರೇಗಾ ಮತ್ತು 15 ನೇ ಹಣಕಾಸಿನಲ್ಲಿ ಒಗ್ಗೂಡಿಸುವಿಕೆ ಅಡಿಯಲ್ಲಿ ಕಾಮಗಾರಿಗಳ ಅಳವಡಿಸಿಕೊಳ್ಳಲು ತಿಳಿಸಿದರು.

ತಾಲೂಕು ವೈದ್ಯಾಧಿಕಾರಿ ಪುಪ್ಪಲತಾ ಸುನದಕಲ್ಲ  ಮಾತನಾಡಿ, 4 ಪ್ರಾಥಮಿಕ ಒಂದು ಸಮುದಾಯ ಆರೋಗ್ಯ ಕೇಂದ್ರವಿದ್ದು, ಎಲ್ಲೆಡೆ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ, ಪ್ರತಿಗ್ರಾಮಗಳಲ್ಲಿಯೂ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪಂಚಾಯತ್ ರಾಜ್ ಇಲಾಖೆ ಎಇಇ ವೀರಣ್ಣ ವಾಲಿ ಮಾತನಾಡಿ, ಕಾಗವಾಡ ತಾಲೂಕಿನ ವ್ಯಾಪ್ತಿ ಸಿವಿಲ್ ಕಾಮಗಾರಿಗಳು 26 ಆರಂಭವಾಗಿದ್ದು,  3 ಕಾಮಗಾರಿ ಮುಕ್ತವಾಗಿದೆ. 10 ಶೌಚಾಲಯಗಳ ಗುರಿ ಇದ್ದು, ಅಂದಾಜು ಪತ್ರಿಕೆ ಬದಲಾವಣೆಯಾಗಬೇಕಿದೆ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆ ಎಡಿ ನಿಂಗಣ್ಣ ಬಿರಾದಾರ, ಆರ್ ಎಫ್ ಒ, ಎಕೆ ಕುಂಬಾರ, ಸಮಾಜ ಕಲ್ಯಾಣ ಇಲಾಖೆ ಎಡಿ ಬಿ.ಎಸ್. ಯಾದವಾಡ, ಪಶುಸಂಗೋಪಲನಾ ಅಧಿಕಾರಿ ಡಿ.ಜೆ.  ಕಾಂಬಳೆ, ಬಿಇಒ ಮುಂಜೆ, ನರೇಗಾ ಸಹಾಯಕ ನಿರ್ದೇಶಕ ಗೋಪಾಲ ಮಾಳಿ,   ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ, ರಾಕೇಶ ಕಾಂಬಳೆ,  ಶೈಲಶ್ರೀ ಭಜಂತ್ರಿ, ಶ್ರೀದೇವಿ ವಾಲಿ, ಯಶವಂತ ವಂಟಗೂಡೆ, ಮುಂತಾದವರು ಭಾಗಿಯಾಗಿದ್ದರು.//////