Belagavi News In Kannada | News Belgaum

75ನೇ ಗಣರಾಜ್ಯೋತ್ಸವದ ಅಂಗವಾಗಿ ಮಾಜಿ ಶಾಸಕ ಅನಿಲ ಬೆನಕೆ ಅವರಿಂದ ಧ್ವಜಾರೋಹನ

 

ಬೆಳಗಾವಿ : 75ನೇ ಗಣರಾಜ್ಯೋತ್ಸವದ ಅಂಗವಾಗಿ ಮಾಜಿ ಶಾಸಕ ಅನಿಲ ಬೆನಕೆ ಅವರಿಂದ ಧ್ವಜಾರೋಹನ
ದಿನಾಂಕ 26-01-2024 ರಂದು 75ನೇ ಗಣರಾಜ್ಯೋತ್ಸವದ ಅಂಗವಾಗಿ ಮಾಜಿ ಶಾಸಕ ಅನಿಲ ಬೆನಕೆ ಅವರಿಂದ ನಗರದ ಹಲವೆಡೆ ಧ್ವಜಾರೋಹನ ನೇರವೆರಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವು ಬೆಳಗಾವಿಯ ಹನುಮಾನ ನಗರದ ಮಾಜಿ ಸೈನಿಕರು ಹಾಗೂ ಎಕ್ಸ್ ಸರ್ವಿಸಮ್ಯಾನ್ ವೇಲಫೇರ ಅಸೋಸಿಎಶನ ಪದಾಧಿಕಾರಿಗಳಾದ ನಾಯಿಕ ಸುಬೇದಾರ ವಿಲಾಸ ಒಬಾಳೆ, ಸುಬೇದಾರ ಇಂಚಲಿ, ಹವಾಲದಾರ ಜಿ. ಗಡಕರಿ, ನಾಯಿಕ ಯುಸುಬ ಖಾನ, ನೌಕಾಪಡೆ ಸುಬೇದಾರ ಮೇಜರ್ ವಿಜಯ ದೇಸಾಯಿ ಸೇರಿದಂತೆ ಮಾಜಿ ಸೈನಿಕರೊಂದಿಗೆ ಧ್ವಜಾರೋಹನ ನಡೆಸಿ ಸಿಹಿ ಹಂಚಲಾಯಿತು.
ನಂತರ ಬಂಜಾರಾ ಕಾಲೋನಿಯ ಎಕತಾ ಮಹಿಳಾ ಮಂಡಳ, ಭಾರತೀಯ ಜನತಾ ಪಾರ್ಟಿ ಬೆಳಗಾವಿ ಜಿಲ್ಲಾ ಕಾರ್ಯಾಲಯ, ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ ಬೆನಕೆ ಅವರ ಕಾರ್ಯಾಲಯದಲ್ಲಿ ಕಾರ್ಯಕರ್ತರೊಂದಿಗೆ ಧ್ವಜಾರೋಹನ ನೇರವೆರಿಸಿ ಸಿಹಿಹಂಚಿ ಸಂಬ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಅನಿಲ ಬೆನಕೆ ರಾಷ್ಟ್ರದ ಅಭ್ಯುದಯಕ್ಕಾಗಿ ದುಡಿಗ ಎಲ್ಲಾ ಮಹನೀಯರನ್ನು ಸ್ಮರಿಸಿ. ಅನೇಕರ ತ್ಯಾಗ ಬಲಿದಾನಗಳಿಂದ ಪಡೆದುಕೊಂಡ ಸ್ವಾತಂತ್ರ್ಯವನ್ನು ಸಾರ್ಥಕ ಗೊಳಿಸಿ ಕೊಳ್ಳುವುದರ ಜೊತೆಗೆ, ಭಾರತವು ಮಹಾನ ಜಾಗತಿಕ ಶಕ್ತಿಯಾಗಿ ಹೊರಹೋಮ್ಮೂವ ನಿಟ್ಟಿನಲ್ಲಿ ಒಟ್ಟಾಗಿ ದುಡಿಯೋಣ ಎಂದು ತಿಳಿಸಿ ಅಪ್ರತಿಮ ರಾಷ್ಟ್ರಪ್ರೇಮಿ ಶ್ರೀ ಸಂಗೊಳ್ಳಿ ರಾಯಣ್ಣನವರ ಪುಣ್ಣಸ್ಮರಣೆಯಂದು ಅನಂತ ಕೋಟಿ ಪ್ರಣಾಮ ಸಲ್ಲಿಸಿದರು.