Belagavi News In Kannada | News Belgaum

ಗೋಮಾಂಸ ಸಾಗಿಸುತ್ತಿದ್ದ ಲಾರಿ ಪೊಲೀಸ್‌ ವಶ

ಬೆಳಗಾವಿ: ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಲಾರಿಯ ಮೇಲೆ ಪೊಲೀಸರು ದಾಳಿ ನಡೆಸಿ, ಸುಮಾರು 12 ಟನ್ ಗೋಮಾಂಸ ವಶಕ್ಕೆ ಪಡೆದಿದ್ದಾರೆ.

ಬೆಳಗಾವಿಯ ಕೊಂಡಸಕೊಪ್ಪ ಗ್ರಾಮದ ಬಳಿ ಪೊಲೀಸರು ದಾಳಿ ನಡೆಸಿದ್ದು, ಬೆಳಗಾವಿಯಿಂದ ಧಾರವಾಡಕ್ಕೆ ಸಾಗಿಸಲಾಗುತ್ತಿದ್ದ ಗೋಮಾಂಸ ಈಗ ಪೋಲೀಸರ ವಶದಲ್ಲಿದೆ. ಸುಮಾರು 5,60,000 ಸಾವಿರ ಬೆಲೆಯ ಗೋಮಾಂಸ ಇದಾಗಿದೆ. ಮೊಹಮ್ಮದ್ ಗೌಸ್ ನಜೀರ್ ಶೇಖ ಹಾಗೂ ಕರೆಪ್ಪ ಕೋಳಿ ಎಂಬಾತರು ಬಂಧಿತ ಆರೋಪಿಗಳಾಗಿದ್ದಾರೆ.

ಲಾರಿ ಸಮೇತ ಗೋಮಾಂಸ ವಶಕ್ಕೆ ಪಡೆದು ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.//////