Belagavi News In Kannada | News Belgaum

ಮಧ್ಯರಾತ್ರಿ ಬಾಲ ಬಿಚ್ಚೋ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಲು ಪೊಲೀಸ್​​ ಇಲಾಖೆ ಹೊಸ ಅಸ್ತ್ರ

ಬೆಂಗಳೂರು: ಮಧ್ಯರಾತ್ರಿ ಬಾಲ ಬಿಚ್ಚೋ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಲು ಪೊಲೀಸ್​​ ಇಲಾಖೆ ಸಖತ್​ ಪ್ಲಾನ್​ ಮಾಡಿದೆ. ಆ ಮೂಲಕ ರಾತ್ರಿ ಹೊತ್ತು ಒಂಟಿಯಾಗಿ ಪ್ರಯಾಣಿಸುವ ಹೆಣ್ಣುಮಕ್ಕಳಿಗೆ ಗುಡ್​ ನ್ಯೂಸ್ ಕೊಟ್ಟಿದೆ. ರಿಕ್ಷಾದಲ್ಲಿ ಪ್ರಯಾಣಿಸುವ ಹೆಣ್ಣುಮಕ್ಕಳಿಗೆ ಯುಪಿಸ್ ನಂಬರ್ ತಕ್ಷಣ ಹೆಲ್ಪ್​ ಮಾಡಲಿದೆ.

ಏನಿದು ಯುಪಿಎಸ್? ಹೇಗೆ ಕಾರ್ಯನಿರ್ವಹಿಸುತ್ತೆ? ಮೆಜೆಸ್ಟಿಕ್ ಸುತ್ತ ಮುತ್ತಲ ಆಟೋ ಡ್ರೈವರ್ ಗಳಿಗೆ ಯುಪಿಎಸ್ ನಂಬರ್ ಕೊಡಲಾಗಿದೆ. ಸ್ಥಳೀಯ ಠಾಣೆಯಲ್ಲಿ ಆಟೋ ಚಾಲಕರ ಸಂಪೂರ್ಣ ಮಾಹಿತಿ ಪಡೆದುಕೊಂಡು ನಂತರ ಅಂತಹ ಆಟೋ ಚಾಲಕರಿಗೆ ಯುಪಿಎಸ್ ನಂಬರ್ ನೀಡಲಾಗಿದೆ. ಚಾಲಕರು ಆ ಯುಪಿಎಸ್ ನಂಬರನ್ನ ಪ್ರಯಾಣಿಕರಿಗೆ ಕಾಣುವಂತೆ ಹಾಕಬೇಕು. ಆಟೋದ ಮುಂಭಾಗ ಹಾಗೂ ಹಿಂಭಾಗದಲ್ಲಿ ಹಾಕಬೇಕು. ಯುಪಿಎಸ್ ನಂಬರ್ 2-3 ಡಿಜಿಟ್ ಇರೋದರಿಂದ ನೆನೆಪಿಟ್ಟುಕೊಳ್ಳೋದು ಸುಲಭವಾಗಿದೆ.
ಮಹಿಳೆಯರೇ ನೆನಪಿಟ್ಟುಕೊಳ್ಳಿ: ಮಹಿಳೆಯರು ರಾತ್ರಿ ಹೊತ್ತು ಮೆಜೆಸ್ಟಿಕ್ ನಲ್ಲಿ ಇಂತಹ ಯುಪಿಎಸ್ ನಂಬರ್ ಇರೋ ಆಟೋ ಹತ್ತೋದು ಸುರಕ್ಷಿತ. ಏನಾದ್ರೂ ಪ್ರಯಾಣದ ವೇಳೆ ತೊಂದ್ರೆಯಾದ್ರೆ ಪೊಲೀಸರಿಗೆ ಈ ಯುಪಿಎಸ್ ನಂಬರ್ ಹೇಳಿದರೆ ಸಾಕು. ಕ್ಷಣಮಾತ್ರದಲ್ಲಿಯೇ ಆ ಆಟೋ ಚಾಲಕನ ಸಂಪೂರ್ಣ ಜಾತಕ ತೆರೆದುಕೊಳ್ಳಲಿದೆ. ಮಾತ್ರವಲ್ಲದೆ, ಕಿಡಿಗೇಡಿತನ ಪ್ರದರ್ಶನ ಮಾಡಿದ ಆಟೋ ಚಾಲಕರನ್ನ ಪತ್ತೆ ಹಚ್ಚೋದು ಪೊಲೀಸರಿಗೆ ಸುಲಭವಾಗಲಿದೆ.///////