Belagavi News In Kannada | News Belgaum

ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ: ಮಿರ್ಜಿ

ಬೆಳಗಾವಿ: ಬಹಳ ಪರಿಶ್ರಮ ತ್ಯಾಗದಿಂದ ನಮಗೆ ಈ ಸ್ವಾತಂತ್ರಯ ಲಭಿಸಿದೆ. ಅದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ನಾವು ನಮ್ಮ ಹಕ್ಕುಗಳನ್ನು ಅನುಭವಿಸುವುದರ ಜೊತೆಗೆ ದೇಶದ ಪ್ರತಿ ನಮ್ಮ ಕರ್ತವ್ಯಗಳನ್ನು ಮಾಡಬೇಕು” ಎಂದು ರಾಷ್ಟಪ್ರಶಸ್ತಿ ಪುರಸ್ಕೃತ ನಿವೃತ್ತಿ ಮೇಜರ ಜನರಲ್ ಕೆ.ಎನ್.ಮಿರ್ಜಿ ಅವರು ಹೇಳಿದರು. ಅವರು ಇಲ್ಲಿಯ ಭರತೇಶ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಜಿಲ್ಲಾಮಟ್ಟದ ದೇಶಭಕ್ತಿ ಗೀತೆಗಳ ಸ್ಫರ್ಧೆಯ ವಿಜೇತರಿಗೆ ನಿನ್ನೆ ಬಹುಮಾನ ವಿತರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭರತೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಜಿನದತ್ತ ದೇಸಾಯಿ ಅವರು “ನಮ್ಮ ಜನನಿ ಹಾಗೂ ಜನ್ಮಭೂಮಿ ಸ್ವರ್ಗದಷ್ಟೇ ಶ್ರೇಷ್ಟ. ಆದ್ದರಿಂದ ಬಾಲ್ಯದಿಂದಲೇ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಭಾವನೆಯನ್ನು ಬೆಳೆಸಬೇಕು” ಎಂದರು.
ಶ್ರೀ.ಎ.ಎ.ಸನದಿ ಸ್ವಾಗತಿಸಿದರು. ಶ್ರೀಮತಿ ಕಾಂಚನ ಬೋಗಾರ ನಿರೂಪಿಸಿದರು. ಶ್ರೀಮತಿ.ಅರ್ಪಣಾ ಮಾರಣಬಸರಿ ವಂದಿಸಿದರು.
ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಉಪಾದ್ಯಕ್ಷ ಶ್ರೀಕಾಂತ ಖೇಮಲಾಪುರೆ, ನಿರ್ದೆಶಕರಾದ ಅಶೋಕ ದಾನವಾಡೆ, ಹೀರಾಚಂದ ಕಲಮನಿ, ಎಸ್.ಎಸ್.ಅಕ್ಕಿ, ಸುನೀತಾ ದೇಶಪಾಂಡೆ, ಯೋಗಿತಾ ಪಾಟೀಲ, ಜ್ಯೋತಿ ಮಿರಜಕರ ಸೇರಿದಂತೆ ಇತರರು ಇದ್ದರು.///////