Belagavi News In Kannada | News Belgaum

ಮೃತದೇಹ ಪತ್ತೆ

ಬೆಳಗಾವಿ : ಜ.21 ರಂದು ರೈಲ್ವೆ ಸ್ಟೇಷನ ಹತ್ತಿರ ಇರುವ ಗೋವಾ ಬಸ್ ನಿಲ್ದಾಣದ ಹತ್ತಿರ ಅನಾರೋಗ್ಯದಿಂದ ಸಿಕ್ಕಿದ್ದು, ಅಂದಿನಿಂದ ಜ.28 ರವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಿಸದೆ ಜ.28 ರಂದು ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯ 40-45 ವರ್ಷ ವಯಸ್ಸು ಇರುತ್ತದೆ. ಶವವು ವಾರಸುದಾರರು ಯಾರೂ ಇಲ್ಲದೇ ಇರುವುದರಿಂದ ಮೃತನ ಶವವನ್ನು ಜ. 29 ರಿಂದ 31 ರವರೆಗೆ ಮೂರು ದಿನಗಳ ಮಟ್ಟಿಗೆ ಜಿಲ್ಲಾ ಆಸ್ಪತ್ರೆ ಶವಾಗಾರದ ಶೀತಾಗಾರದಲ್ಲಿ ಇರಿಸಲಾಗಿದೆ.
ಮೃತನ ಚಹರೆ:
ಎತ್ತರ 5 ಪೂಟ 2 ಇಂಚ. ಉದ್ದ ಮುಖ, ಅಗಲ ಮೂಗು, ಗೋಧಿ ಮೈಬಣ್ಣ. 1 ಇಂಚ ಕರಿ ಗಡ್ಡ ಇರುತ್ತವೆ. ನೀಲಿ ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಟ್ರ್ಯಾಕ್‍ಸೂಟ್ ಪ್ಯಾಂಟ್ ಧರಿಸಿರುತ್ತಾನೆ.
ಸದರಿ ಮೃತನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಜಿಲ್ಲೆಯ ಕ್ಯಾಂಪ್ ಪೊಲೀಸ್ ಠಾಣೆ ಸಂಖ್ಯೆ 0831-2405234/0831-2405255 ಪೊಲೀಸ್ ಕಂಟ್ರೋಲ್ ರೂಂ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////