Belagavi News In Kannada | News Belgaum

ಬಿಜೆಪಿ ಸೇರ್ಪಡೆ ಆಗುವಂತೆ ಸವದಿಗೆ ಆಹ್ವಾನ ಕೊಟ್ಟಿದ್ದೇವೆ: ಅಣ್ಣಾಸಾಹೇಬ ಜೊಲ್ಲೆ..

ಬೆಳಗಾವಿ: ಲಕ್ಷ್ಮಣ ಸವದಿಯವರನ್ನು ಕರೆದುಕೊಂಡು ಬರುವ ಜವಾಬ್ದಾರಿ ಎಲ್ಲರ ಹೆಗಲಿಗಿದೆ. ನಾನಿರಬಹುದು, ಈರಣ್ಣಾ ಕಡಾಡಿ, ಮಹಾಂತೇಶ್ ದೊಡ್ಡಗೌಡರ, ರಮೇಶ್ ಕತ್ತಿ  ಸೇರಿ ಜಿಲ್ಲೆಯ ಎಲ್ಲ ನಾಯಕರ ಮೇಲಿದ್ದು ಸವದಿ ಬಿಜೆಪಿ ಬಂದರೆ ಅನುಕೂಲ ಆಗುತ್ತದೆ ಎಂದ ಸಂಸದ ಅಣ್ಣಾಸಾಹೇಬ ಹೇಳಿದರು..

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿಯನ್ನ ಕರೆದುಕೊಂಡು ಬರುವ ಜವಾಬ್ದಾರಿ ಎಲ್ಲರ ಹೆಗಲಿಗಿದೆ. ಈ ಬಗ್ಗೆ ಸವದಿ ಅವರು ಒಪ್ಪಿಗೆ ಕೊಡಬೇಕು. ಕೇಂದ್ರದರ ಮುಖಂಡರ ಜೊತೆಗೆ ಚರ್ಚೆ ಆಗಬೇಕು. ಸವದಿಯವರು ಬರಲಿ ಅನ್ನೋದು ನಮ್ಮ ಆಶಯ ಬಂದರೆ ಪಕ್ಷಕ್ಕೆ, ಬೆಳಗಾವಿ ಜಿಲ್ಲೆಗೆ ಒಳ್ಳೆಯದಾಗುತ್ತೆ. ನಮ್ಮ ಪಕ್ಷದಿಂದ ಹೊರ ಹೋದವರಿಗೆ ನಾವು ಆಹ್ವಾನ ಕೊಟ್ಟಿದ್ದೇವೆ. ಸವದಿಯರಿಗೆ ನಾವು ಕೂಡ ಆಹ್ವಾನ ಕೊಟ್ಟಿದ್ದೇವೆ. ನಮ್ಮ ರಾಜ್ಯಾಧ್ಯಕ್ಷರು, ಎಲ್ಲರು ಕೂಡ ಪ್ರಯತ್ನ ಮಾಡುತ್ತಿದ್ದಾರೆ ಎಂದರು..

ಅದೇ ರೀತಿ ಎಷ್ಟು ಜನ ಬಿಜೆಪಿಗೆ ಬರ್ತಾರೆ ಅಂತಾ ಹೇಳಲು ಆಗಲ್ಲ. ಬಿಟ್ಟು ಹೋದವರು ಎಲ್ಲರೂ ಬರಬಹುದು. ಯಾಕೆಂದರೆ ಬಿಜೆಪಿಯಲ್ಲಿದ್ದವರು ಹೊರಗೆ ಇರುವುದೇ ಕಷ್ಟ ಹೀಗಾಗಿ ನಮ್ಮ ಪಕ್ಷಕ್ಕೆ ಬರ್ತಾರೆ. ಚುನಾವಣೆ ಮೊದಲು ಸವದಿಯವರು ಪಕ್ಷಕ್ಕೆ ಬಂದರೆ ಒಳ್ಳೆಯದಾಗುತ್ತೆ. ಸವದಿಯವರು ಪಕ್ಷಕ್ಕೆ ಬರಲು ಒಲವು ತೋರಿಸಬಹುದು ಅನಿಸುತ್ತೆ. ಅವರು ಬರುವವರೆಗೂ ಪಾಸಿಟಿವ್ ಇದ್ದಾರೆ ಅಂತಾನೇ ಹೇಳ್ತಾ ಹೋಗೊದು ಎಂದರು..