Belagavi News In Kannada | News Belgaum

ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ

ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ
ಬೆಳಗಾವಿ,ಜ.30 : ಹಲವು ಶತಮಾನಗಳಿಂದ ಮೂಡನಂಬಿಕೆಯ ನೆರಳಿನಲ್ಲಿ ಹರಡುತ್ತಿರುವ ಕುಷ್ಠರೋಗವನ್ನು ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರವನ್ನು ಜನಸಾಮಾನ್ಯರಿಗೆ ರೋಗಗಳ ಅರಿವು ಮೂಡಿಸಿದಾಗ ಜನರು ಜಾಗೃತಿಗೊಳ್ಳುತ್ತಾರೆ. ರೋಗಗಳ ನಿಯಂತ್ರಣ ಮತ್ತು ನಿರ್ಮೂಲನೆಗೆ ಎಲ್ಲರೂ ಸೇರಿ ಶ್ರಮಿಸೋಣ ಎಂದು ಜಿಲ್ಲೆಯ ಯು.ಎಸ್.ಎಮ್. ಕೆ.ಎಲ್.ಇ ಅಂತರಾಷ್ಟ್ರೀಯ ವೈದ್ಯಕೀಯ ಕಾರ್ಯಕ್ರಮ ನಿರ್ದೇಶಕರಾದ ಡಾ.ಹೆಚ್.ಬಿ.ರಾಜಶೇಖಕರ ಎಂದರು..

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಕಚೇರಿ ವತಿಯಿಂದ ಮಂಗಳವಾರ (ಜ.30) ರಂದು ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸ್ಪರ್ಶ ಕುಷ್ಟರೋಗ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾರಂಭದ ಹಂತದಲ್ಲಿ ರೋಗವನ್ನು ಪತ್ತೆ ಮಾಡಿ, ತ್ವರಿತ ಚಿಕಿತ್ಸೆ ನೀಡಿದಾಗ ಮಾತ್ರ ಕುಷ್ಠರೋಗ ಹಾಗೂ ಇತರೆ ಖಾಯಿಲೆಗಳನ್ನು ಗು ಣಪಡಿಸಬಹುದಾಗಿದೆ..

ಆರೋಗ್ಯ ಇಲಾಖೆ ಕೈಗೊಂಡಿರುವ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿ ನಾವು ಸದಾ ಸಹಕಾರ ನೀಡಿದ್ದೇವೆ. ಮೈಲಿಬೆನೆ, ಪೋಲಿಯೋ ರೋಗಗಳನ್ನು ಆರೋಗ್ಯ ಇಲಾಖೆ ಮತ್ತು ಸಂಘ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಅವಿರತ ಶ್ರಮದ ಸಹಯೋಗದಲ್ಲಿ ನಿರ್ಮೂಲನೆಯಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಮಹೇಶ ಕೋಣ ಅವರು ಮಾತನಾಡಿ, ಮಾಹತ್ಮಾ ಗಾಂಧೀಜಿ ಹುತಾತ್ಮರಾದ ದಿನದ ಅಂಗವಾಗಿ ಜ.30 ರಿಂದ ಫೆ. 13 ರವರೆಗೆ ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಸ್ಪರ್ಶ ಜ್ಞಾನವಿಲ್ಲದ ತಿಳಿ ಬಿಳಿ ತಾರ್ಮ ವರ್ಣದ ಮಚ್ಛೆಗಳು ಶರೀರದ ಯಾವುದೇ ಭಾಗದಲ್ಲಿ ಕಂಡುಬಂದಿದ್ದರೂ, ಅವು

ಸಂಶಯಾಸ್ಪದವಾಗಿ ಕುಷ್ಠರೋಗವಾಗಿರಬಹುದು. ಆದ್ದರಿಂದ ಆಶಾ ಆರೋಗ್ಯ ಇಲಾಖೆ ಅಧಿಕಾರಿಗಳು ಅಥವಾ ಸಿಬ್ಬಂದಿಗಳನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಲು ಸಾರ್ವಜನಿಕರಿಗೆ ತಿಳಿಸಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ.ಗೀತಾ ಕಾಂಬಳೆ ಇವರು ಮಾತನಾಡಿ, ಜಿಲ್ಲೆಯಲ್ಲಿ ಕುಷ್ಠರೋಗದ ಅಂಕಿ-ಅಂಶಗಳ ಕುರಿತು ತಿಳಿಸಿದರು.

“ಕಳಂಕವನ್ನು ಕೊನೆಗೊಳಿಸಿ ಘನತೆಯನ್ನು ಎತ್ತಿಹಿಡಿರಿ” ಎಂಬ ಈ ವರ್ಷದ ಘೋಷವಾಕ್ಯದ ಕುರಿತು ಮಾತನಾಡಿ,
ಅದರಂತೆ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಹೊಸ ಕುಷ್ಠರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸಂಘ ಸಂಸ್ಥೆಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ನೆನಪಿನ ಕಾಣ ಕೆ ಹಾಗೂ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು..

ಈ ವೇಳೆ ತಾಲೂಕ ಆರೋಗ್ಯ ಅಧಿಕಾರಿ ಡಾ. ಸಂಜಯ ಡುಮ್ಮಗೋಳ, ಯಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಮೇಶ ದಂಡಗಿ, ಕೆ.ಎಲ್.ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ನಿಯೋಜಿತ ನಿರ್ದೇಶಕ ಡಾ. ಆರ್.ಜಿ.ನೆಲವಿಗಿ,ಹಿಂಡಲಗಾ ಕುಷ್ಠರೋಗ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸುರೇಶ ವರ್ಗಿಸ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾಜಿ ಮಳಗನ್ನವರ, ಜಾನಕಿ ಸೇವಾ ಸಂಸ್ಥೆ ಅಧಿಕಾರಿ ಡಾ. ಉಮೇಶ ಆಚಾರ್ಯ ಸೇರಿದಂತೆ ಹಲವರಿದ್ದರು..

 

ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಕಚೇರಿಯ ಸಹಾಯಕ ಭರತ ಹೆಚ್.ಬಿ ನಿರೂಪಿಸಿ ಸ್ವಾಗತಿಸಿದ್ದರು, ಆರೋಗ್ಯ ನಿರೀಕ್ಷಣಾಧಿಕಾರಿ ಅರುಣ ಮನೋಳಿ ವಂದಿಸಿದರು.