Belagavi News In Kannada | News Belgaum

ಸ್ವಚ್ಛತಾ ಯಂತ್ರಕ್ಕೆ ಯುವ ನಾಯಕ ರಾಹುಲ್‌ ಜಾರಕಿಹೊಳಿ ಚಾಲನೆ

ಬೆಳಗಾವಿ:  ನಗರದ  ಸಾರ್ವಜನಿಕ ಸ್ಥಳಗಳಲ್ಲಿ  ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ  ಸತೀಶ ಜಾರಕಿಹೊಳಿ ಫೌಂಡೇಶನ್‌ ವತಿಯಿಂದ ನೀಡಿರುವ ಸ್ವಚ್ಛತಾ (ಯಂತ್ರದ) ಮಷಿನ್‌ ಗೆ ಯುವ ನಾಯಕ ಜಾರಕಿಹೊಳಿ ಅವರು  ಚಾಲನೆ ನೀಡಿದರು.

ಈ ವೇಳೆ ಯುವ ನಾಯಕ ರಾಹುಲ ಜಾರಕಿಹೊಳಿ ಅವರು ಮಾತನಾಡಿ,  ಆರೋಗ್ಯಕರ ಹಾಗೂ ಸ್ವಚ್ಛ ನಗರವನ್ನಾಗಿ ರೂಪಿಸುವ ಉದ್ದೇಶದಿಂದ  ಸ್ವಚ್ಛತಾ (ಯಂತ್ರದ) ಮಷಿನ್‌ ಇಂದಿನಿಂದಲೇ ಕಾರ್ಯನಿರ್ವಸಲಿದೆ.   ತಂದೆಯವರಾದ ಸಚಿವ ಸತೀಶ ಜಾರಕಿಹೊಳಿಯವರ  ಮಾರ್ಗದರ್ಶನದಂತೆ ಬೆಳಗಾವಿ ಶ್ರೀಗರದಲ್ಲಿರುವ  ಶ್ರೀ ಜಗಜ್ಯೋತಿ ಬಸವೇಶ್ವರ ಅನುಭವ ಮಂಟಪದಲ್ಲಿ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ನಗರವನ್ನು ಸ್ವಚ್ಛತೆಯಿಂದ  ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.  ಪರಿಸರವನ್ನು ಸುಸಜ್ಜಿತವಾಗಿ ನೋಡುಕೊಳ್ಳಬೇಕಿದೆ.  ನಗರ ವ್ಯಾಪ್ತಿಯಲ್ಲಿ ಹುಲ್ಲು ಬೆಳೆದಿರುವ ಪ್ರದೇಶದಲ್ಲಿ  ಸ್ವಚ್ಛತೆ ಕಾಪಾಡುವುದು ದೃಷ್ಟಿಕೋನದಿಂದ ನಾವು ಪ್ರಯತ್ನ ಮಾಡಲಾಗುತ್ತಿದೆ.  ಹೀಗಾಗಿ ಸ್ವಚ್ಛತಾ (ಯಂತ್ರದ) ಮಷಿನ್‌ ದಿಂದ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದು ಹೇಳಿದರು.

 

ಜನಬೀಡಿ ಪ್ರದೇಶದಲ್ಲಿ ಹುಲ್ಲು ಬೆಳೆದು  ವಾಹನ ಸವಾರರು, ಪಾದಚಾರಿಗಳಿಗೆ ಕಿರಿಕಿರಿಯಾಗುತ್ತಿದೆ. ಹೀಗಾಗಿ ನಗರದ ಸ್ವಚ್ಚತೆ ಮುಂದಾಗಿದ್ದೆವೆ. ಜನರ ಆರೋಗ್ಯ ಸಂರಕ್ಷಿಸುವ ಜತೆಗೆ ರಸ್ತೆಗಳ ಸ್ವಚ್ಛತೆ ಕಾಪಾಡಲು ಯಂತ್ರಗಳನ್ನು ಬಳಸಲಾಗುತ್ತಿದೆ,’ಎಂದರು.

 

ಪುರಸಭೆ ಸದಸ್ಯ ಡಾ.ದಿನೇಶ ನಾಶಿಪುಡಿ  ಮಾತನಾಡಿ,  ಶ್ರೀ  ಬಸವೇಶ್ವರ ಅನುಭವ ಮಂಟಪದ ವ್ಯಾಪ್ತಿಯಲ್ಲಿ ಹುಲ್ಲು ಬೆಳದು ಅಸ್ವಚ್ಛತೆ ನಿರ್ಮಾಣವಾಗಿದೆ. ಹೀಗಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸತೀಶ ಜಾರಕಿಹೊಳಿ ಫೌಂಡೇಶನ್‌  ದಿಂದ ಉಚಿತವಾಗಿ ಸ್ಚಚ್ಛತಾ  ಮಿಷನ್‌  ನೀಡಿದ್ದಾರೆ.  ಅವರ ಸಹಕಾರದಿಂದ ನಗರವನ್ನು ನಾವು ಸ್ವಚ್ಛತೆಯಿಂದ ಕಾಪಾಕೊಳ್ಳಲು ಅನುಕೂಲವಾಗಿದೆ. ಅವರ ಸಮಾಜ ಸೇವೆಗೆ ಧನ್ಯವಾದಗಳು ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ  ಕಾಪಾಡುವ ಹಿತದೃಷ್ಟಿಯಿಂದ ರಾಜ್ಯದಲ್ಲಿ ಮೊದಲ  ಬೆಳಗಾವಿಯಲ್ಲಿ ಸ್ಚಚ್ಛತಾ  ಮಿಷನ್‌ ಕಾರ್ಯನಿರ್ವಸಲಿದೆ.

ಈ ವೇಳೆ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್, ಗಿರೀಶ್ ನಾಯ್ಕ್, ಸುದ್ನವ್ ನಾಶಿಪುಡಿ, ವಿಜಯ್ ತಳವಾರ, ತಪನ ಪಾಟೀಲ, ವಿಜಯ ವಂಟಮೂರಿ, ನಾಗರಿಕರು ಉಪಸ್ಥಿತರಿದ್ದರು.//////