Belagavi News In Kannada | News Belgaum

ಪರಿಶುದ್ಧ ಪರಿಸರದಿಂದ ಪ್ರಾಣಿ ಸಂಕುಳ ಉಳಿಯಲು ಸಾಧ್ಯ: ಅರಣ್ಯ ಸಂರಕ್ಷಕ ಸಂಗಮೇಶ ಪ್ರಭಾಕರ

ಬೆಳಗಾವಿ: ಪರಿಸರವನ್ನು ರಕ್ಷಿಸುವುದರಿಂದ ಪ್ರಾಣಿಗಳ ಸಂಕುಳ ಉಳಿಯಲು ಸಾಧ್ಯ . ಆದ್ದರಿಂದ,  ಪರಿಸರವನ್ನು ಉಳಿಸಿ-ಬೆಳೆಸಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಕರಾದ  ಸಂಗಮೇಶ ಪ್ರಭಾಕರ ಅವರು  ಹೇಳಿದರು.

ಇಲ್ಲಿನ ಪ್ರತಿಷ್ಠಿತ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ  ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ನಾತಕೋತ್ತರ  ವಿಭಾಗದ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ಪ್ರಯೋಗಾಲಯಗಳನ್ನು ಉದ್ಘಾಟಿಸಿ ಮಾತನಾಡಿದರು.

‘ಈ  ಮಹಾವಿದ್ಯಾಲಯದ ಆವರಣ ಬಹಳ ಸ್ವಚ್ಛವಾಗಿ ಹಾಗೂ  ಸುಸಜ್ಜಿತವಾಗಿ ಕಂಡು ಬಹಳಷ್ಟು ಹೆಮ್ಮೆಯಾಗಿದೆ. ಮಕ್ಕಳು  ಪರಿಸರ ಕಾಳಜಿ ಹೊಂದಿರುವುದು ಸಂಸತದ ಸಂಗತಿ. ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಮನೆ ಮುಂದೆ ಬೇಸಿಗೆ ಕಾಲದಲ್ಲಿ ಹಕ್ಕಿಗಳ ಸಂಕುಳಕ್ಕೆ ನೀರು ಇಡುವುದರಿಂದ ಸಾವಿರಾರು ಹಕ್ಕಿಗಳು   ಆಗಮಿಸಿ ನಿತ್ಯವೂ  ನೀರು ಸೇವಿಸುತ್ತವೆ ಎಂದು  ತಮ್ಮ ಕರ್ತವ್ಯ ಪ್ರಜ್ಞೆಯನ್ನು ಸ್ಮರಿಸಿಕೊಂಡು ವಿದ್ಯಾರ್ಥಿಗಳ ಜೊತೆಗೆ ತಮ್ಮ ವಿಚಾರವನ್ನುಹಂಚಿಕೊಂಡರು.

ಯಾವುದೇ ಚಿಕ್ಕ-ಚಿಕ್ಕ ಪಕ್ಷಿಗಳಿದ್ದರೂ ಅವುಗಳನ್ನು ಸಂರಕ್ಷಿಸಬೇಕು. ಯಾವುದೇ ಕಾರಣಕ್ಕೆ ಅವುಗಳ ಉಪಯೋಗವಿಲ್ಲವೆಂದು ತಿಳಿಯಬಾರದು. ಭೂಮಿ ಮೇಲೆ ಬದುಕುವ ಸಣ್ಣ-ಸಣ್ಣ ಜೀವಿಗಳು ಬಹಳ ಉಪಯೋಗಕ್ಕೆ ಬರುತ್ತವೆ ಎಂದರು.  ವಿದ್ಯಾರ್ಥಿಗಳು ತಮ್ಮ ಜನ್ಮ ದಿನದಂದು ಕೇಕ್‌ ಕಟ್ಟು ಮಾಡುವುದರ ಬದಲು ಪ್ರತಿಯೊಬ್ಬರು ಒಂದೊಂದು ಸಸಿಗಳನ್ನು ನೆಡಬೇಕೆಂದು ವಿದ್ಯಾರ್ಥಿಗಳಿಗೆ  ತಿಳಿಸಿದರು. ಆ ಸಸಿಗಳು ತಮ್ಮ ಪಾಡಿಗೆ ತಾವು ಬೆಳೆದು ಹೆಮ್ಮರವಾಗುತ್ತವೆ. ಯಾವಾಗಾದರೂ ಒಮ್ಮೆ ಹೋಗಿ ನೋಡಿದಾಗ ನಿಮಗೇ ಸಂತೋಷ ಪಾರವೇ ಇಲ್ಲ ಎಂದು ಹೇಳಿದರು.

ಸ್ನಾತಕೋತ್ತರ ಪದವಿ ನಂತರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಗಮನ ಜೀವವದಲ್ಲಿ ಇಟ್ಟಕೊಂಡಿರುವ ಗುರಿಯನ್ನು ತಲುಪಬೇಕು. ಸಮಾಜದಲ್ಲಿ ವ್ಯಕ್ತಿಯಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು.  ಪ್ಲಾಸ್ಟಿಕ ಬ್ಯಾಗ್‌ಗಳನ್ನು ಬಳಕೆಯಿಂದ ಪರಿಸರಕ್ಕೆ ಅಪಾಯಕಾರಿ, ಹೀಗಾಗಿ ಯುವಕರು ಇಂದಿನಿಂದಲೇ  ಪ್ಲಾಸ್ಟಿಕ ಬ್ಯಾಗ್‌ಗಳನ್ನು ನಿರಾಕರಿಸಿ ಪರಿಸರವನ್ನು ಸಂರಕ್ಷಿಸಬೇಕು ಎಂದು ಹೇಳಿದರು.

ಕುಲಪತಿಗಳಾದ ಪ್ರೊ. ವಿಜಯಎಫ್ ನಾಗಣ್ಣವರ ಅವರು ಮಾತನಾಡಿ, ‘ಈ ಎರಡು ಲ್ಯಾಬ್‌ಗಳನ್ನು ಸಿದ್ಧಗೊಳಿಸಿದರಿಂದ ನಮಗೆ ಬಹಳ ಸಂತೋಷವಾಯಿತು. ಕಾಲೇಜ ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ. ಶೀಘ್ರವೇ  ಈ ಕಾರ್ಯವನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಈ ಮಹಾವಿದ್ಯಾಲಯದ ಆವರಣ ಹೊಸದಾಗಿರಬಹುದು, ಆದರೆ, ಇದು ಬೆಳಗಾವಿಯಲ್ಲಿಯೇ ಬಹಳ ಉತ್ತಮ ಗುಣಮಟ್ಟದ ದೊಡ್ಡ (ಕ್ಯಾಂಪಸ್) ಆವರಣವಾಗಿದೆ.  ನ್ಯಾಕ್ ದಿಂದಕೂಡ ‘ಎ” ಶ್ರೇಣಿಯನ್ನು ಪಡೆದುಕೊಂಡಿದೆ ಎಂದರು. ಕಾಲೇಜನಲ್ಲಿ  ಎಲ್ಲಾ ಅನುಕೂಲತೆಗಳು ಕಲ್ಪಿಸಲಾಗಿದೆ.  ವಿದ್ಯಾರ್ಥಿಗಳು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕುಲಸಚಿವರಾದ   ರಾಜಶ್ರೀ ಜೈನಾಪೂರ. ಕೆ.ಎ.ಎಸ್. ಅವರು ಮಾತನಾಡುತ್ತ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದೇ ನಾವು ಬಹಳ ಬೇಗ ಬೇಗನೆ ಪ್ರಯೋಗಾಲಯಗಳನ್ನು ಸಿದ್ಧಗೊಳಿಸಿದೆವು. ಜೆ.ಎಸ್.ಎಸ್. ಕಾಲೇಜಿನಕ್ಯಾಂಪಸ್‌ನಲ್ಲಿಓದುತ್ತಿದ್ದ ನಮ್ಮ ವಿದ್ಯಾರ್ಥಿಗಳು ನಮ್ಮಕ್ಯಾಂಪಸ್‌ನಲ್ಲಿಯೇಓದಬೇಕೆಂಬುದು ನಮ್ಮಆಸೆಯಾಗಿತ್ತು. ಆದ್ದರಿಂದಜೆ.ಎಸ್.ಎಸ್. ಕಾಲೇಜಿನಿಂದ ವಿದ್ಯಾರ್ಥಿಗಳನ್ನು ಈ ಕಡೆಗೆತೀವ್ರವಾಗಿ ಸ್ಥಳಾಂತರಿಸಿದೆವು ಎಂದರು.ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದುಎಲ್ ಶೇಫ್‌ನಲ್ಲಿ (ವಿನ್ಯಾಸ) ಮತ್ತೊಂದುಕಟ್ಟಡವನ್ನು ಮುಂದಿನ ವಾರದಲ್ಲಿಯೇ ಪ್ರಾರಂಭಿಸಲಾಗುವುದೆಂದು ಭರವಸೆ ನೀಡಿದರು. ಇದರಎಲ್ಲಾ ಅವಕಾಶಗಳನ್ನು ವಿದ್ಯಾರ್ಥಿಗಳು ಪಡೆಯಬೇಕೆಂದು ನುಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶಂಕರ ಎಸ್ ತೇರದಾಳ ಅವರು ಮಾತನಾಡಿ, ಅತ್ಯಂತ ಕಡಿಮೆ ಅವಧಿಯಲ್ಲಿ ಈ ಎರಡು ಪ್ರಯೋಗಾಲಯಗಳನ್ನು ಸಿದ್ಧಪಡಿಸಿಕೊಟ್ಟ ಕುಲಪತಿಗಳು ಹಾಗೂ ಕುಲಸಚಿವರಿಗೆ ಧನ್ಯವಾದಗಳನ್ನು ತಿಳಿಸಿದರು. ಇಡೀ ಬೆಳಗಾವಿಯಲ್ಲಿಯೇ ನಮ್ಮ ಘಟಕ ಮಹಾವಿದ್ಯಾಲಯವು ದೊಡ್ಡದಾಗಿದೆ. ಇಲ್ಲಿ೨೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ ೧೩೦೦ ವಿದ್ಯಾರ್ಥಿನಿಯರು ಇರುವುದು ಗಮನಿಸಬೇಕು ಎಂದರು.  “ಎಲ್ಲಿ ನಾರಿಯರನ್ನುಗೌರವಿಸಲಾಗುತ್ತದೆಯೋ ಅಲ್ಲಿ ದೇವತೆಗಳು ವಾಸವಾಗುತ್ತಾರೆ” ಎಂಬ ಉಕ್ತಿಯನ್ನುಉದಾಹರಿಸುತ್ತಾ ಹೆಣ್ಣು ಮಕ್ಕಳಿಗೆ ಆಧ್ಯತೆ ನೀಡಿದ್ದನ್ನು ಹೆಮ್ಮೆಯಿಂದ ಹೇಳಿದರು.

ಪ್ರಾಣಿಶಾಸ್ತ್ರ ವಿಭಾಗದ ಸಂಯೋಜಕರಾದ ಡಾ. ವಿದ್ಯಾಸಾಗರ ಸಿ.ಸಿ ಅವರು ಅತಿಥಿಗಳನ್ನು ಪರಿಚಯಿಸಿದರು. ಸಸ್ಯಶಾಸ್ತ್ರ ವಿಭಾಗದ ಸಂಯೋಜಕ ಡಾ. ಎಂ.ಬಿ. ಶ್ರೀಧರ , ವೇದಾ ಪಾಟೀಲ ಸ್ವಾಗತಿಸಿದರು. ಅನಮ ಖಾನಾಪುರೆ, ಮಲ್ಲೇಶ ಭಂಡಿ ನಿರೂಪಿಸಿದರು.   ಶಿವಕುಮಾರ ವಂದಿಸಿದರು.  ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು  ಇತರರು ಇದ್ದರು//////