Belagavi News In Kannada | News Belgaum

ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡದ ರಾಜ್ಯ ಪ್ರಚಾರ ಕಾರ್ಯದರ್ಶಿಯಾಗಿ ಅರುಣ್ ನೇಸರಗಿ ಆಯ್ಕೆ

ಬೆಳಗಾವಿ: ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡ ರಾಜ್ಯ ಯುವ ಘಟಕದ (ರಿ) ರಾಜ್ಯ ಪ್ರಚಾರ ಕಾರ್ಯದರ್ಶಿಯಾಗಿ ಅರುಣ ನೇಸರಗಿ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಅರುಣ ನೇಸರಗಿ ಅವರು ಎಂ.ಎ ಪತ್ರಿಕೋದ್ಯಮದ ಪದವಿ ಪಡೆದಿದ್ದು, ಕರ್ನಾಟಕ ಟೈಮ್ಸ್, ಉದಯಕಾಲ, ಜನ ಜೀವಾಳ, ಸಮರ್ಥನಾಡು ಪತ್ರಿಕೆಗಳಲ್ಲಿ ವರದಿಗಾರ, ಉಪ ಸಂಪಾದಕರಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಬೆಳಗಾವಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರನ್ನು ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡ ರಾಜ್ಯ ಯುವ ಘಟಕದ (ರಿ) ರಾಜ್ಯ ಪ್ರಚಾರ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡ ರಾಜ್ಯ ಯುವ ಘಟಕದ (ರಿ) ರಾಜ್ಯಾಧ್ಯಕ್ಷ ಮಹೇಶ್ ಶಿಗಿಹಳ್ಳಿ ಅವರು ತಿಳಿಸಿದ್ದಾರೆ.//////