Belagavi News In Kannada | News Belgaum

ದಲಿತ ಸಮುದಾಯದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ: ಎಸ್‌ಪಿ ಗುಳೇದ

ಬೆಳಗಾವಿ: ಯಾವುದೇ ಕಾರಣಕ್ಕೂ ದಲಿತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಪೊಲೀಸ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಹೇಳಿದರು.
ಬೆಳಗಾವಿಯ ಪೊಲೀಸ ವರಿಷ್ಠಾಧಿಕಾರಿ ಕಾರ್ಯಾಲಯದಲ್ಲಿ ಜರುಗಿದ ದಲಿತ ಕುಂದು ಕೊರತೆ ಸಭೆಯಲ್ಲಿ‌ ಅವರು ಸಂವಿಧಾನ ಓದಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕಾರಣಕ್ಕೂ ದಲಿತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ದಲಿತರಿಗೆ ಅನ್ಯಾಯವಾದಾಗ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು ಮುಲಾಜಿಲ್ಲದೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಗುವುದು ದಲಿತರಿಗೆ ಸೂಕ್ತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಸ್ಥಳೀಯವಾಗಿ ಯಾವುದೇ ರಾಷ್ಟ್ರ ಪುರಷರ ಹಾಗು ಸ್ವಾತಂತ್ರ ಹೊರಟಗಾರರ ಪುತ್ಥಳಿ ಸ್ಥಾಪನೆ ಮಾಡಬೇಕಾದರೆ ಅನುಮತಿ ಪಡೆದು ಸ್ಥಾಪನೆ ಮಾಡುವಂತೆ ಸಲಹೆ ನೀಡಿದರು.
ಜಿಲ್ಲಾ ದಲಿತ ಮುಖಂಡರು ಸಭೆಯಲ್ಲಿ ಮಾತನಾಡಿ, ದಲಿತ ಯುವಕರು ಹಾಗು ವಿದ್ಯಾರ್ಥಿಗಳು ಉದ್ಯೋಗದ ಅನುಕೂಲಕ್ಕಾಗಿ ಮತ್ತು ಶಿಕ್ಷಣಕ್ಕಾಗಿ ಸಾಲ ಪಡೆಯಲು ಬ್ಯಾಂಕಗಳಿಗೆ ಹೋದರೆ ಬ್ಯಾಂಕಿನ ಸಿಬ್ಬಂದಿಗಳು ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ ಇದರಿಂದ ನಮ್ಮ ಸಮುದಾಯದ ಯುವಕ ಯುವತಿಯರಿಗೆ ಸಮಸ್ಯೆ ಆಗುತ್ತಿದೆ ಹಾಗಾಗಿ ನಮಗೆ ನ್ಯಾಯ ದೊರಕಿಸಿ ಎಂದು ಕಳಕಳಿಯಿಂದ ಕೇಳಿಕೊಂಡರು.
ಮತ್ತೋರ್ವ ಮುಖಂಡ ಮಾತನಾಡಿ ನಗರಗಳಲ್ಲಿ ಹಾಗು ಗ್ರಾಮಗಳಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ ಅವರ ಪುತ್ಥಳಿ ನಿರ್ಮಾಣಮಾಡಲು ನಮಗೆ ಅನುಮತಿ ಸಿಗುತ್ತಿಲ್ಲ ಅಧಿಕಾರಿಗಳು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಭೆಯಲ್ಲಿ ಸಿಆರಸಿ ಎಸಪಿ ರವೀಂದ್ರಗಡಾದಿ ,ಎಎಸಪಿ ಬಸರಗಿ & ವೇಣುಗೋಪಾಲ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಬಾಬಲಿ, ಡಿಎಸ್ಪಿ,ಸಿಪಿಐ, ಜಿಲ್ಲಾ ದಲಿತ ಮುಖಂಡರು ಇದ್ದರು./////