Belagavi News In Kannada | News Belgaum

ಬಿಜೆಪಿ ಗ್ರಾಮ ಚಲೋ ಅಭಿಯಾನದ ಮಹತ್ವದ ಸಭೆ

ಬೆಳಗಾವಿ : ಭಾರತೀಯ ಜನತಾ ಪಾರ್ಟಿ ಕಳೆದ 10ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನ ಮನೆ ಮನೆಗೆ ಮುಟ್ಟಿಸುವ ಮೂಲಕ ಪ್ರತಿಯೊಬ್ಬರ ಮನ ಮನಕ್ಕೆ ಮುಟ್ಟಿಸುವ ಗ್ರಾಮ ಚಲೋ ಅಭಿಯಾನವನ್ನು ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಎಲ್ಲ ಹಳ್ಳಿಗಳಲ್ಲಿ ಯಶಸ್ವಿಗೋಳಿಸಬೇಕೆಂದು ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ‌ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.


ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ರವಿವಾರ ನಡೆದ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬ ಕಾರ್ಯಕರ್ತರಿಗೆ ನಿಗದಿ ಪಡಿಸಿದ ಹಳ್ಳಿಗೆ ಕಡ್ಡಾಯವಾಗಿ ತೆರಳ ಗ್ರಾಮ ಚಲೋ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಕಡು ಬಡವರಿಗೆ ನೀಡುವ ಗರಿಬ್ ಕಲ್ಯಾಣ ಯೊಜನೆ, ನಾರಿ ಶಕ್ತಿ ಯೊಜನೆ‌, ಮನೆ ಮನೆಗೆ ನೀರು ಯೊಜನೆ ಬಗ್ಗೆ ತಿಳಿಸಬೇಕೆಮದರು..

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ನಾಯಕರ ತಪ್ಪಿನಿಂದ‌ ವಿಧಾನಸಭೆಯಲ್ಲಿ ಅಧಿಕಾರ ಕಳೆದುಕೊಂಡಿದ್ದೆವೆ ಹೊರತು ಕಾರ್ಯಕರ್ತರಿಂದಲ್ಲ. ಪ್ರಪಂಚದ ನಾಯಕರಾಗಿ ಹೊರಹೊಮ್ಮಿರುವ ನರೇಂದ್ರ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿಮಾಡಲು ಕಾರ್ಯಕರ್ತರು.

ಪರಿಶ್ರಮವಹಿಸಬೆಕಾಗಿದೆ. ಭಾರತ ಇಂದು ಜಗತ್ತಿನಲ್ಲಿ 5ನೇ ದೊಡ್ಡ ಆರ್ಥಿಕ ಸ್ಥಾನ ಹೊಂದಿದೆ. ಜಮ್ಮು ಕಾಶ್ಮೀದಲ್ಲಿ 370ನೆ ವಿ‌ಧಿ ರದ್ದತಿ, ಶ್ರೀರಾಮ ಮಂದಿರ ಸ್ಥಾಪನೆ, ಕಾಶಿ ಹರಿದ್ವಾರ, ಉಜ್ಜೈನಿ, ಹೀಗೆ ಹತ್ತುಹಲವಾರು ದೇವಾಲಯ ಅಭಿವೃದ್ಧಿ ಪಡಿಸುವದರೊಂದಿಗೆ ದೇಶದ ಪ್ರವಾಸೋದ್ಯಮ ಅತ್ಯಂತ ಬೆಳವಣಿಗೆ ಕಂಡಿವೆ. ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣಗಳು ಬಂದರುಗಳು ನಿರ್ಮಾಣಮಾಡುವದರೊಂದಿಗೆ ಜನಸಾಮನ್ಯರ ಅನಕೂಲಕರ ಉಜ್ವಲಾ ಯೋಜನೆ, ಸುಕನ್ಯಾ ಯೋಜನೆ ಕಿಸಾನ ಸಮ್ಮಾನ ಯೋಜನೆ ಅನುಷ್ಠಾನ ತರುವದರೊಂದಿಗೆ ಜನಸಾಮನ್ಯರ ಸೇವೆಗೆ ಸದಾ ಸಿದ್ದವಿರುವ ಪ್ರಧಾನಿ ಮೋದಿಜಿ ಸಾಧನೆಗಳನ್ನು ಜನಕ್ಕೆ ಮತ್ತೊಮ್ಮೆ ತಿಳಿಸಬೇಕೆಂದರು..

ಮಾಜಿ ಶಾಸಕ ಜಗದೀಶ ಮೆಟಗುಡ್ ಮಾತನಾಡಿ, ಅಯೋಧ್ಯೆಯ ರಾಮಮಂದಿರ ದರ್ಶನಕ್ಕೆ ತೆರಳುವ ಕಾರ್ಯಕರ್ತರಿಗೆ ಬರುವ ದಿನಗಳಲ್ಲಿ ಆನ್ ಲಯನ್ ಅರ್ಜಿ ಪ್ರಾರಂಭವಾಗಲಿದ್ದು ಅದಕ್ಕೆ ಎಲ್ಲ‌ ಗ್ರಾಮದ ಹಿರಿಯರು ಪಾಲ್ಗೊಳಬೇಕೆಂದರ.
ಪ್ರಾಸ್ತಾವಿಕವಾಗಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಮಾತನಾಡಿ, ಬರುವ ಲೊಕಸಭಾ ಚುನಾವಣೆ ಅತ್ಯಂತ ಪ್ರಮುಖವಾಗಿದ್ದು ಕೇಂದ್ರ ಸರ್ಕಾರದ ನೂರಾರು ಸಾಧನೆಗಳ ಕರಪತ್ರವನ್ನು ಮನೆ ಮನೆಗೆ ಹಂಚಬೇಕೆಂದರು..

ವೇದಿಕೆಯ ಮೇಲೆ ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ, ಗ್ರಾಮ ಚಲೋ‌ ಅಭಿಯಾನದ ಜಿಲ್ಲಾ ಸಂಚಾಲಕ ಗುರು ಮೆಟಗುಡ್, ಜಿಲ್ಲಾ ಮಾಧ್ಯಮ ‌ಸಂಚಾಲಕ‌‌ ಎಫ್. ಎಸ್.ಸಿದ್ದನಗೌಡರ, ನಾಗಪ್ಪ‌ ಸಂಗೊಳ್ಳಿ, ಶಂಕರ ಚೌಡಣ್ಣವರ, ಇಂಚಲ ಗ್ರಾಪಂ ಅಧ್ಯಕ್ಷ ಶಂಕರ ಬಾಗೆವಡಿ, ಇದ್ದರು.
ಕಾರ್ಯಕ್ರಮದಲ್ಲಿ ನೂತನವಾಗಿ ಹುಬ್ಬಳ್ಳಿ ರೈಲ್ವೇ ಮಂಡಳಿಗೆ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಶಂಕರಯ್ಯ ಮಲ್ಲಯನವರಮಠ, ಮುರಳಿದರ ಮಾಳೋದೆ, ಬಾಬು ತೇಗೂರ ನಿವೃತ್ತ ಸೈನಿಕ ನಾಗೇಶ ದೇಸಾಯಿ ಅರ್ಬನ್ ಬ್ಯಾಂಕ್ ಸಿಬ್ಬಂದಿ ಬಸವರಾಜ ಬಡಿಗೇರ ಅವರನ್ನು ಸತ್ಕರಿಸಲಾಯಿತು..


ಕಾರ್ಯಕ್ರಮದಲ್ಲಿ ಅಶೋಕ ಖನಗಾಂವಿ, ಲಕ್ಕಪ್ಪ ಕಾರ್ಗಿ, ಸಂಜಯ ನಾಯಕರ, ಸುರೇಶ ಮ್ಯಾಕಲ್,ಸಚಿನ ಕಡಿ, ಗೌಡಪ್ಪ ಹೊಸಮನಿ, ಶಿವನಗೌಡ ಪಾಟಿಲ, ಪ್ರಕಾಶ ಕಾರಿಮನಿ, ಆನಂದ ಕರಿಮುದಕನ್ನವರ,
ನೂರಾರು ಕಾರ್ಯಕರ್ತರು ಇದ್ದರು.
ಮಾಜಿ ತಾಪಂ‌ ಸದಸ್ಯ ಜಗದೀಶ ಬೂದಿಹಾಳ ಸ್ವಾಗತಿಸಿದರು, ಸಂತೋಷ ಹಡಪದ ನಿರುಪಿಸಿದರು. ಸುರೇಶ ಮ್ಯಾಕಲ್‌ ವಂದಿಸಿದರು..