Belagavi News In Kannada | News Belgaum

ಸಂವಿಧಾನದ ಮೌಲ್ಯ ಮತ್ತು ಆಶಯಗಳನ್ನು ಸಾರ್ವಜನಿಕರಲ್ಲಿ ಅರಿವು

ಸಂವಿಧಾನದ ಮೌಲ್ಯ ಮತ್ತು ಆಶಯಗಳನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸ್ಥಬ್ದಚಿತ್ರಗಳನ್ನೊಳಗೊಂಡ ವಿಶೇಷ ರಥಗಳೆರೆಡು ಏಕ ಕಾಲಕ್ಕೆ ಎರಡು ಮಾರ್ಗದಲ್ಲಿ ಸಂಚರಿಸುವದರ ಮೂಲಕ ಸಂವಿಧಾನ ಜಾಗೃತಿ ಜಾಥ ಹಮಿಕೊಳ್ಳಲಾಗಿದೆ.
ಗಣರಾಜ್ಯೋತ್ಸವದ ದಿನದಂದು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಸತೀಶ ಜಾರಕಿಹೊಳಿ ರವರು ಸ್ಥಬ್ದಚಿತ್ರದ ಮೆರವಣಿಗೆಗೆ ಚಾಲನೆ ನೀಡಿದ್ದಾರೆ.
ಮೊದಲ ಮಾರ್ಗದ ರಥ ಬೆಳಗಾವಿ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಅಥಣಿ, ರಾಯಬಾಗ ತಾಲೂಕುಗಳಲ್ಲಿ ಸಂಚರಿಸಲಿದೆ.
ಎರಡನೇ ಮಾರ್ಗದ ರಥ ಬೆಳಗಾವಿ, ಗೋಕಾಕ, ಮೂಡಲಗಿ, ರಾಮದುರ್ಗ, ಸವದತ್ತಿ, ಬೈಲಹೊಂಗಲ, ಚನ್ನಮ್ಮನ ಕಿತ್ತೂರ, ಖಾನಾಪೂರ ತಾಲೂಕು ಮಾರ್ಗಗಳಲ್ಲಿ ಸಂಚರಿಸಲಿದೆ.
ದಿನಾಂಕ: 05/02/2024 ರಂದು ಮೊದಲ ಮಾರ್ಗದ ರಥವು ಹುಕ್ಕೇರಿ ತಾಲೂಕಿನ ನಿಡಸೋಸಿ, ಅಂಕಲಗಿ, ಸೊಲ್ಲಾಪೂರ, ಹರಗಾಪೂರ, ಬೋರಗಲ್, ಕೇಸ್ತಿ, ಬಾಡ, ಕೊನಕೇರಿ, ಬಾಲೂರ, ಮತ್ತಿವಾಡೆ ಮತ್ತು ಹಿಟ್ಟಣಿ ಗ್ರಾಮ ಪಂಚಾಯತಿ ಮೂಲಕ ಸಂಚರಿಸಿ ದಿನಾಂಕ: 06/02/2024 ರಂದು ಕಣಗಲಾ, ಯರನಾಳ, ಶೇಂಡೂರ, ಶಿರಗುಪ್ಪಿ, ನಿಪ್ಪಾಣಿ, ಕೊಡಣಿ, ಯಮಗರ್ಣಿ ಮತ್ತು ಲಖನಾಪೂರ ಗ್ರಾಮ ಪಂಚಾಯತಿಗಳಿಗೆ ತೆರಳಲಿದೆ.
ಅದೇ ರೀತಿಯಾಗಿ ಎರಡನೇ ಮಾರ್ಗದ ರಥವು ದಿನಾಂಕ: 05/02/2024 ರಂದು ರಾಮದುರ್ಗ ತಾಲೂಕಿನ ಹೊಸಕೇರಿ, ಇಡಗಲ್, ಗೊನ್ನಾಗರ, ಸುರೇಬಾನ, ಮನಿಹಾಳ, ಅವರಾದಿ, ಸಾಂಗಲ, ಕಿತ್ತೂರ, ಮುಲ್ಲೂರ ಮತ್ತು ಹಳೆ ತೋರಗಲ್ ಗ್ರಾಮ ಪಂಚಾಯತಿಗಳ ಮೂಲಕ ಸಂಚರಿಸಿ ದಿನಾಂಕ: 06/02/2024 ರಂದು ಕೆ.ಜುನೇಪೇಠ, ಅರಟಗಲ್, ಬಂದರಹಳ್ಳಿ, ಗೋರಬಾಳ, ಶಿರಸಂಗಿ, ಹೂಲಿಕಟ್ಟಿ, ಹೂಲಿ, ಕಾಗದಾಳ, ಚುಲ್ಕಿ ಮತ್ತು ಉಗರಗೋಳ ಗ್ರಾಮ ಪಂಚಾಯತಿಗಳಿಗೆ ತೆರಳಲಿದೆ.
ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು, ಸ್ವ-ಸಹಾಯ ಸಂಘಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಭಾಗವಹಿಸಿ ಸಂವಿಧಾನ ಜಾಗೃತಿ ರಥವನ್ನು ಯಶಸ್ವಿಗೊಳಿಸಿ, ಬನ್ನಿ
“ಓದೋಣ ಬನ್ನಿ ನಮ್ಮ ಸಂವಿಧಾನ”

ಜಂಟಿ ನಿರ್ದೇಶಕರು