Belagavi News In Kannada | News Belgaum

ಕಾಂಗ್ರೆಸ್ ಧರಣಿಯಲ್ಲಿ ಸವದಿಯನ್ನ ಪಕ್ಕ ಕೂರಿಸಿಕೊಂಡ ಸಿಎಂ.!

ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಧರಣಿಯಲ್ಲಿ ಸಿಎಂ ಸಿದ್ದರಾಮಯ್ಯ, ಲಕ್ಷ್ಮಣ ಸವದಿಯನ್ನು ಪಕ್ಕ ಕೂರಿಸಿಕೊಂಡಿರುವುದು ಎಲ್ಲರ ಗಮನ ಸೆಳೆದಿದೆ.

ಹೌದು…ಸವದಿ ಅವರು ಸಿದ್ದರಾಮಯ್ಯ ಪಕ್ಕದಲ್ಲೇ ಕುಳಿತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಬಿಡಿ, ಇದು ಕಾಂಗ್ರೆಸ್ ನಾಯಕರ ಪ್ರತಿಭಟನೆ ಯಾರು ಎಲ್ಲಿ ಕುಳಿತರೂ ಅವರು ಕಾಂಗ್ರೆಸ್ ನಾಯಕರೇ. ಆದರೆ, ಜಗದೀಶ್ ಶೆಟ್ಟರ್ ಎಪಿಸೋಡ್ ಬಳಿಕ ಎಲ್ಲರ ದೃಷ್ಟಿ ಸವದಿ ಮೇಲಿದೆ. ಆಫ್ ಕೋರ್ಸ್ ನಿನ್ನೆ ದೆಹಲಿಯಲ್ಲೇ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರೋದಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದರು. ಬಿಜೆಪಿ ನಾಯಕರು ಗಾಳ ಹಾಕುತ್ತಿರುವ ಕಾರಣಕ್ಕೆ ಸವದಿಯನ್ನು ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿ ತಮ್ಮ ಹತ್ತಿರದಲ್ಲೇ ಕೂರಿಸಿಕೊಂಡಿದ್ದಾರೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬಂದಿವೆ.