Belagavi News In Kannada | News Belgaum

ತಾಲೂಕಾ ದಂಡಾಧಿಕಾರಿಗಳ ವಿರುದ್ಧ ಅಹೋರಾತ್ರಿ ಧರಣಿ ಸತ್ಯಾಗ್ರಹ

ಬೈಲಹೊಂಗಲ: ಸಾರ್ವಜನಿಕರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ತಹಶೀಲ್ದಾರ ಸಚ್ಚಿದಾನಂದ ಕುಚನೂರ ಅವರನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ವಿವಿಧ ದಲಿತ ಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳಿಂದ ತಹಶೀಲ್ದಾರ ಕಚೇರಿಯ ಮುಂಭಾಗ  ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು..

 

ಇದಕ್ಕೂ ಮೊದಲು ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಮೂಲಕ ತಹಶೀಲ್ದಾರ ಕಚೇರಿಗೆ ತಲುಪಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು. ತಹಶೀಲ್ದಾರ ವಿರುದ್ಧ ಘೋಷಣೆಗಳು ಕೂಗಿ ಅಕ್ರೋಶ ಹೊರ ಹಾಕಿದ ಪ್ರತಿಭಟನಾಕಾರರು ತಮಟೆ ಭಾರಿಸುವ ಮೂಲಕ ಪ್ರತಿಭಟನೆ ಮಾಡಿದರು. ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪೂರ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಮನವೋಲಿಸಲು ಪ್ರಯತ್ನಿಸಿದರು..

ಈ ವೇಳೆ ದಲಿತ ಸಂಘಟನೆಯ ರಾಜ್ಯಾಧ್ಯಕ್ಷ ಸುರೇಶ ರಾಯಪ್ಪಗೋಳ, ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಮಾತನಾಡಿ,.

ತಾಲೂಕಾ ದಂಡಾಧಿಕಾರಿಗಳು ಸಾರ್ವಜನಿಕರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದು, ವಿನಾಕಾರಣ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಎಲ್ಲರಿಗೂ ಏಕ ವಚನದಲ್ಲಿ ಮಾತನಾಡಿ ಅಧಿಕಾರದ ಧರ್ಪ ತೋರಿಸುತ್ತಿರುವುದು ಸರಿಯಾದ ಕ್ರಮವಲ್ಲ. ತಹಶೀಲ್ದಾರ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಇದಕ್ಕೆ ತಹಶೀಲ್ದಾರರೇ ಸಹಕಾರ ನೀಡುತ್ತಿದ್ದಾರೆ..

ಸಾರ್ವಜನಿಕ ಸಮಸ್ಯೆಗಳನ್ನು ಹೇಳಿಕೊಂಡರೆ ಉಡಾಫೆ ಉತ್ತರ ನೀಡುತ್ತಿದ್ದಾರೆಂದು ಆರೋಪಿಸಿದ ಅವರು ಕೂಡಲೇ ತಹಶೀಲ್ದಾರರ ಮೇಲೆ ಕ್ರಮ ಜರುಗಿಸಿ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು..

ಮುಖಂಡರಾದ ರುದ್ರಪ್ಪ ಮುಂದಿನಮನಿ, ರುದ್ರಪ್ಪ ನಿಂಗಣ್ಣವರ, ಸಂಜೀವ ಮುರಗೋಡ ಮಾತನಾಡಿ, ತಹಶೀಲ್ದಾರ ಕಚೇರಿಯಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರನ್ನು ತಮ್ಮ ಕಚೇರಿಯಲ್ಲಿ ನಿಷೇಧಿಸಿದ್ದು ಯಾವ ಕಾರಣಕ್ಕೆಂದು ಪ್ರಶ್ನಿಸಿದರು. ಎಸ್‌ಸಿ, ಎಸ್‌ಟಿ ಸಮಾಜದ ಕುಂದು ಕೊರತೆ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮ ಕರೆಯಬೇಕೆಂದು ಸರಕಾರದ ಆದೇಶವಿದ್ದು ಆದರೆ ಬೈಲಹೊಂಗಲದ ತಹಶೀಲ್ದಾರರು ಐದು ತಿಂಗಳಾದರೂ ಸಭೆ ಕರೆದಿಲ್ಲ..

ತಹಶೀಲ್ದಾರ ಕಚೇರಿಯ ಅಧಿಕಾರಿ, ಸಿಬ್ಬಂದಿಗಳು ಸರಿಯಾಗಿ ಸಾರ್ವಜನಿಕರಿಗೆ ಸ್ಪಂದನೆ ನೀಡದೆ, ಕೆಲಸ ಮಾಡಿಕೊಡಲು ಅಲೆದಾಡಿಸುತ್ತಿದ್ದಾರೆ. ಈ ಕುರಿತು ತಹಶೀಲ್ದಾರರಿಗೆ ಮೌಖಿಕವಾಗಿ ಹಲವಾರು ಬಾರಿ ತಿಳಿಸಿದರೂ ಕೂಡಾ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಲಂಚ ಕೊಟ್ಟರೆ ಮಾತ್ರ ಕೆಲಸ ಮಾಡಿ ಕೊಡಲಾಗುತ್ತೆ, ದುಡ್ಡ ಕೊಡದಿದ್ದರೆ ಅರ್ಜಿಗಳೇ ಮಾಯವಾಗುತ್ತೇವೆ ಎಂದು ಗಂಭೀರ ಆರೋಪ ಮಾಡಿದರು. ಅಧಿಕಾರಿಗಳು, ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿದೆ ಬೇಜಬ್ದಾರಿತನ ತೋರುತ್ತಿದ್ದಾರೆ. ಕೂಡಲೇ ತಹಶೀಲ್ದಾರ ಕಚೇರಿಯ ಎಲ್ಲ ಲೋಪದೋಷಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು..

ಈ ಸಂದರ್ಭದಲ್ಲಿ ಮುಖಂಡರಾದ ಶಿವಯೋಗಿ ಹುಲ್ಲೇಣ್ಣವರ, ನಾಗಪ್ಪ ಬೈಲಪ್ಪಗೋಳ, ಚಂದ್ರಿಕಾ ಕಳಂಕರ, ನಾಗಪ್ಪ ಭರಮಣ್ಣವರ, ಸುರೇಶ ಮಲಕಿನಕೊಪ್ಪ, ಮನೋಜ ಕೇಳಗೇರಿ, ರಾಯಪ್ಪ ಕೆಂಚಪ್ಪನವರ, ಶ್ರೀನಿವಾಸ ಭರಮಣ್ಣವರ, ಫಕ್ಕೀರಪ್ಪ ಹೊಸಮನಿ, ಪ್ರಭು ಭಜಂತ್ರಿ, ಅಮೃತ ಮಾಳಗಿ, ಸುನೀಲ ಹಲಗಿ, ಸುರೇಶ ಲೆಂಕನಟ್ಟಿ, ಪ್ರಕಾಶ ಮಾದಿಗರ, ಪುಂಡಲೀಕ ಭಜಂತ್ರಿ, ಗೌರೀಶ ಬೆಟಸೂರ, ಫಕ್ಕೀರಪ್ಪ ಅಮ್ಮವಗೋಳ, ಕಲ್ಲಪ್ಪ ಮಾದರ, ಕರೆಪ್ಪ ಮಾದರ, ವಿಠ್ಠಲ ಅಂದಾನಿ, ಅನೀಲ ಬೋಳಣ್ಣವರ, ಆನಂದ ಯರಗಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು..