Belagavi News In Kannada | News Belgaum

ಶಾಸಕರು ತಾವು ಕೈಗೊಂಡ ಕಾಮಗಾರಿಗಳು ಅಭಿವೃದ್ಧಿ ಎಷ್ಟು? ಮಾಧ್ಯಮ ಮುಖಾಂತರ ಉತ್ತರಿಸಿ ಬಿಜೆಪಿ ಕಾರ್ಯಕರ್ತರು ಅಶಿಪ್ ಸೆಟ್ ಅವರಿಗೆ ಮನವಿ

ಬೆಳಗಾವಿ : ಇಂದು ಭಾರತೀಯ ಜನತಾ ಪಾರ್ಟಿ ಬೆಳಗಾವಿ ಮಹಾನಗರ ಉತ್ತರ ಮಂಡಲ ವತಿಯಿಂದ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಅಸೀಫ್ ಸೇಟ್ ಅವರು ಕ್ಷೇತ್ರದ ಪ್ರಸ್ತುತ ಸಾಲಿನಲ್ಲಿ ತಂದಿರುವ ಅನುದಾನ ಸರ್ಕಾರದಿಂದ ಈ ಅವಧಿಯಲ್ಲಿ ಬಿಡುಗಡೆ ಮಾಡಿರುವ ಅನುದಾನ ಎಷ್ಟು ಹಾಗೂ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ವಿವರ ಮತದಾರರಿಗೆ ಹಾಗೂ ಮಾಧ್ಯಮದವರಿಗೆ ಲಿಖಿತ ರೂಪದಲ್ಲಿ ಕೊಡಬೇಕೆಂದು ಮಂಡಲ ವತಿಯಿಂದ ಮನವಿ ಸಲ್ಲಿಸಿ ಬಿಜೆಪಿ ಕಾರ್ಯಕರ್ತರು ಹೇಳಿದರು.

 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಗೀತಾ ಸುತಾರ, ಪ್ರಧಾನ ಕಾರ್ಯದರ್ಶಿಗಳಾದ ಈರಯ್ಯಾ ಖೋತ, ಉತ್ತರ ಮಂಡಲ ಅಧ್ಯಕ್ಷರಾದ ವಿಜಯ ಕೊಡಗಾನೂರ, ಪ್ರಮುಖರಾದ ಡಾ| ರವಿ ಪಾಟೀಲ್, . ದಾದಾಗೌಡ ಬಿರಾದಾರ, . ಮಹಾಂತೇಶ ವಕ್ಕುಂದ, . ಶೀಲ್ಪಾ ಕೆಕರೆ . ಸವಿತಾ ಗುಡ್ಡಾಕಾಯು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ಥೋರಾಟ, ವಿನೋದ ಲಂಗೋಟಿ, ಮಾಧ್ಯಮ ಸಂಚಾಲಕರಾದ ಶರದ ಪಾಟೀಲ್, ಸಾಮಾಜಿಕ ಜಾಲತಾಣ ಸಂಚಾಲಕರಾದ ಶ್ರೀ. ಕೇದಾರನಾಥ ಜೋರಾಪುರ, ಮಹಾನಗರ ಮತ್ತು ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು.