Belagavi News In Kannada | News Belgaum

ಘಟಪ್ರಭಾ ನದಿಗೆ ಕೂಡಲೇ ನೀರು ಹರಿಸಲು ಮಾಜಿ ಡಿಸಿಎಂ ಕಾರಜೋಳ ಆಗ್ರಹ

ಮುಧೋಳ : ಈ ಬಾರಿ ಮಳೆಗಾಲ ಕೈಕೊಟ್ಟಿದ್ದು, ಕುಡಿಯುವ ನೀರಿಗೆ ತುಂಬಾ ತೊಂದರೆಯುಂಟಾಗಿದೆ. ಹಿಡಕಲ್ ಜಲಾಶಯದಲ್ಲಿ 34 ಟಿಎಂಸಿ ನೀರು ಸಂಗ್ರಹವಿದ್ದು, ಜನೇವರಿಯಲ್ಲಿ ಬಿಡಬೇಕಾಗಿದ್ದ 2 ಟಿಎಂಸಿ ನೀರನ್ನು ಇದುವರೆಗೂ ಬಿಟ್ಟಿಲ್ಲ. ಇದರಿಂದ ಜನ-ಜಾನುವಾರುಗಳಿಗೆ, ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ಉಂಟಾಗಿದೆ. ಆದ್ದರಿಂದ ಈ ಕೂಡಲೇ ಘಟಪ್ರಭಾ ನದಿಗೆ 2 ಟಿಎಂಸಿ ನೀರು ಬಿಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.