Belagavi News In Kannada | News Belgaum

“ಓದೋಣ ಬನ್ನಿ ನಮ್ಮ ಸಂವಿಧಾನ

ಸಂವಿಧಾನದ” ಮೌಲ್ಯ ಮತ್ತು ಆಶಯಗಳನ್ನು ಸಾರ್ವಜನಿಕರಲ್ಲಿಅರಿವು ಮೂಡಿಸುವಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಸಮಾಜಕಲ್ಯಾಣ ಇಲಾಖೆ ಬೆಳಗಾವಿ ಇವರ ಸಂಯುಕ್ತಆಶ್ರಯದಲ್ಲಿಜಿಲ್ಲೆಯಎಲ್ಲಗ್ರಾಮ ಪಂಚಾಯತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸ್ಥಬ್ದಚಿತ್ರಗಳನ್ನೊಳಗೊಂಡ ವಿಶೇಷ ರಥಗಳೆರೆಡು ಏಕ ಕಾಲಕ್ಕೆ ಎರಡು ಮಾರ್ಗದಲ್ಲಿ ಸಂಚರಿಸುವದರ ಮೂಲಕ ಸಂವಿಧಾನಜಾಗೃತಿಜಾಥ ಹಮ್ಮಿಕೊಳ್ಳಲಾಗಿದ್ದು ಸದರಿಕಾರ್ಯಕ್ರಮವನ್ನುಗಣರಾಜ್ಯೋತ್ಸವದ ದಿನದಂದುಜಿಲ್ಲಾಕ್ರೀಡಾಂಗಣದಲ್ಲಿಜಿಲ್ಲಾಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಸತೀಶ ಜಾರಕಿಹೊಳಿ ರವರಿಂದ ಚಾಲನೆಗೊಂಡ ಸ್ಥಬ್ದಚಿತ್ರದ ಮೆರವಣಿಗೆಯುಜಿಲ್ಲಾದ್ಯಾಂತಎರಡು ಮಾರ್ಗಗಳ ಮೂಲಕ “ಮೊದಲನೆ ಮಾರ್ಗದರಥವು ಬೆಳಗಾವಿ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಅಥಣಿ, ರಾಯಬಾಗ ತಾಲೂಕುಗಳಲ್ಲಿ ಹಾಗೂ ಎರಡನೇ ಮಾರ್ಗದರಥವು ಗೋಕಾಕ, ಮೂಡಲಗಿ, ರಾಮದುರ್ಗ, ಸವದತ್ತಿ, ಬೈಲಹೊಂಗಲ, ಚನ್ನಮ್ಮನಕಿತ್ತೂರ, ಖಾನಾಪೂರ ತಾಲೂಕುಗಳಿಗೆ ಸ್ಥಬ್ದ ಚಿತ್ರಗಳ ಮೆರವಣಿಗೆಯು ಸಂಚರಿಸುತ್ತಿದೆ.

ಸಂವಿಧಾನದ ಮೂಲ ಆಶಯಗಳಾದ ಸರ್ವಧರ್ಮಗಳ ಸಮಭಾವ, ಸಮಸ್ತ ನಾಗರೀಕರಿಗೆ ಸಾಮಾಜಿಕ, ಆರ್ಥಿಕ ಮತ್ತುರಾಜಕೀಯ ನ್ಯಾಯಕುರಿತು, ವಿಚಾರ, ಅಭಿವ್ಯಕ್ತಿ, ವಿಶ್ವಾಸ ಮತ್ತುಧರ್ಮಶೃದ್ಧೆಯ ಸ್ವಾತಂತ್ರ್ಯತೆಯಅರಿವು, ಸ್ಥಾನಮಾನ ಹಾಗೂ ಅವಕಾಶಗಳ ಸಮಾನತೆಯನ್ನುದೊರಕಿಸಲು, ರಾಷ್ಟ್ರದಏಕತೆ ಮತ್ತುಅಖಂಡತೆಯನ್ನು ಬಲಗೊಳಿಸಲು, ಎಲ್ಲರಲ್ಲೂ ಭಾತೃತ್ವ ಭಾವನೆಯನ್ನು ವೃದ್ಧಿಗೊಳಿಸಲು ಈ ಎಲ್ಲಾ ಆಶಯಗಳನ್ನು ಪ್ರತಿಮನೆ-ಮನೆಗಳಿಗೂ, ಮನ-ಮನಗಳಿಗೂ ತಲುಪಿಸುವದು ಈ ಕಾರ್ಯಕ್ರಮದ ಮೂಲ ಧ್ಯೇಯವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿಒಟ್ಟು 500 ಗ್ರಾಮ ಪಂಚಾಯತಿಗಳು ಹಾಗೂ 38 ನಗರ ಮತ್ತು ಸ್ಥಳೀಯ ಸಂಸ್ಥೆಗಳಿದ್ದು ಪ್ರಸ್ತುತ ದಿನಾಂಕ: 10/02/2023 ರ ವರೆಗೆಒಟ್ಟು 289 ಗ್ರಾಮ ಪಂಚಾಯತಿ ಮತ್ತು 22 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಬ್ದ ಚಿತ್ರದ ಮೆರವಣಿಗೆಯು ಯಶಸ್ವಿಯಾಗಿ ಸಂಚರಿಸಿದೆ.

ಸಂವಿಧಾನಜಾಗೃತಿಜಾಥದಲ್ಲಿಅಧಿಕ ಸಂಖ್ಯೆಯಲ್ಲಿಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಗ್ರಾಮದ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು,ಸ್ವ-ಸಹಾಯ ಸಂಘಗಳು, ಮತ್ತು ಸಾರ್ವಜನಿಕರು ಭಾಗವಹಿಸಿ “ಸಂವಿಧಾನಜಾಗೃತಿಜಾಥ” ವನ್ನು ಯಶಸ್ವಿಗೊಳಿಸಲು ಕೋರಿದೆ.