Belagavi News In Kannada | News Belgaum

ಸಾಧಕ ಎನ್‍ಸಿಸಿ ಕೆಡೆಟ್‍ಗಳಿಗೆ ಡಾ.ಪ್ರಭಾಕರಕೋರೆಯವರಿಂದಅಭಿನಂದನೆ

ಬೆಳಗಾವಿ 13 :ಇತ್ತೀಚಿಗೆ ನವದೆಹಲಿಯಲ್ಲಿಜರುಗಿದಗಣರಾಜ್ಯೋತ್ಸವ ಪರೇಡ್‍ದಲ್ಲಿ ಪಾಲ್ಗೊಂಡಿದ್ದಕೆಎಲ್‍ಇರಾಜಾ ಲಖಮಗೌಡ ವಿಜ್ಞಾನ ಸಂಸ್ಥೆಯ ಎನ್‍ಸಿಸಿ ಆರ್ಮಿವಿಂಗ್‍ಕೆಡೆಟ್ ಶಶಿ ಬಿ. ಕೆಂಚವ್ವಗೋಳ, ಏರ್‍ವಿಂಗ್‍ಕೆಡೆಟ್ ಸೃಷ್ಟಿ ಕಮತೆ, ಕೆಡೆಟ್‍ಗೌತಮ್ ಕೊಳೇಕರ್, ಡೆಹರಾಡೂನ್ ಐಎಂಎ ಕ್ಯಾಂಪ್‍ದಲ್ಲಿ ಪಾಲ್ಗೊಂಡಿದ್ದ ಲಿಂಗರಾಜಕಾಲೇಜಿನ ಸಿನಿಯರ್‍ಕೆಡೆಟ್ ಸಮೇದಕರೆಣ್ಣವರ ಹಾಗೂ ಪ್ರಸ್ತಕ ಸಾಲಿನ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದಅತ್ಯುತ್ತಮ ಎನ್‍ಸಿಸಿ ಘಟಕ ಪ್ರಶಸ್ತಿ ಪಡೆದುಕೊಂಡ ಲಿಂಗರಾಜಕಾಲೇಜಿನಎನ್‍ಸಿಸಿ ಕೆಡೆಟ್‍ಗಳಿಗೆ ಕೆಎಲ್‍ಇ ಸಂಸ್ಥೆಯಕಾರ್ಯಾಧ್ಯಕ್ಷರಾದಡಾ.ಪ್ರಭಾಕರಕೋರೆಯವರುಸತ್ಕರಿಸಿ ಅಭಿನಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿಆರ್‍ಎಲ್‍ಎಸ್‍ಕಾಲೇಜಿನ ಪ್ರಾಚಾರ್ಯಡಾ.ಜ್ಯೋತಿ ಕವಳೇಕರ, ಲಿಂಗರಾಜಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಎನ್‍ಸಿಸಿ ಅಧಿಕಾರಿಗಳಾದ ಕ್ಯಾಫ್ಟನ್‍ಡಾ.ಮಹೇಶ ಗುರನಗೌಡರ, ಲೆಫ್ಟನೆಂಟ್ ಡಾ.ಶಿವಾನಂದ ಬುಲಬುಲೆ, ಪ್ರೊ.ಎಚ್.ಎನ್.ಬನ್ನೂರ ಉಪಸ್ಥಿತರಿದ್ದರು.