Belagavi News In Kannada | News Belgaum

ಡಾ. ಶಂಬಾ ಜೋಶಿ :ಮೂಲ ಸಂಸ್ಕøತಿಯಚಿಂತಕರು

ಕನ್ನಡ ಸಂಶೋಧನಾ ಲೋಕಕ್ಕೆ ಬಹುಶಿಸ್ತೀಯ ಅಧ್ಯಯನ ಮಾದರಿಯನ್ನು ನೀಡಿದಡಾ.ಶಂಬಾ ಅವರುಬೆಳಗಾವಿ ಜಿಲ್ಲೆಯತವರಿನವರು.ಕನ್ನಡ ಸಂಸ್ಕøತಿ, ಭಾರತೀಯ ಸಂಸ್ಕøತಿ ಹಾಗೂ ಜಾಗತೀಕ ಸಂಸ್ಕøತಿಗಳನ್ನು ಹಲವು ಜ್ಞಾನಶಿಸ್ತುಗಳನ್ನು ಆಧರಿಸಿ ಸಂಶೋಧನೆಗಿಳಿದವರು.ಕನ್ನಡ ಸಂಶೋಧನಾ ಲೋಕಕ್ಕೆ ಬಹುಶಿಸ್ತೀಯ ಮಾದರಿಯಅಧ್ಯಯನಕ್ರಮಕ್ಕೆ ಮೇಲ್ಪಂಕ್ತಿಯನ್ನು ಹಾಕಿದವರಾಗಿದ್ದಾರೆ.ಅವರಕುರಿತು ಅಧ್ಯಯನಗಳು ಇನ್ನೂ ಕಟ್ಟಿಕೊಳ್ಳಬೇಕಾಗಿದೆ.ಮುಂಬರುವ ದಿನಗಳಲ್ಲಿ ಅವರ ಅಧ್ಯಯನಗಳ ಪ್ರಸ್ತುತತೆ ಅನಿವಾರ್ಯವೆನ್ನುವಷ್ಟು ಪ್ರಸ್ತುತವಾಗುತ್ತಿವೆಎಂದುನಾಡಿನ ಹಿರಿಯ ಸಂಸ್ಕøತಿಚಿಂತಕರಾದಪ್ರೊ.ಬಸವರಾಜ ಕಲ್ಗುಡಿಯವರು  ಅಭಿಪ್ರಾಯಪಟ್ಟರು..

ಅವರುರಾಣಿಚನ್ನಮ್ಮ ವಿಶ್ವವಿದ್ಯಾಲಯದಶಾಸ್ತ್ರೀಯ ಕನ್ನಡ ಭಾಷಾಅಧ್ಯಯನ ಸಂಸ್ಥೆ ಹಂಪಿಯಕನ್ನಡ ವಿಶ್ವವಿದ್ಯಾಲಯವು ದಿನಾಂಕ : 15-02-2024ರಂದು ಹಮ್ಮಿಕೊಂಡಿದ್ದಒಂದು ದಿನದರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಸಮಾರಂಭವನ್ನು ಉದ್ಘಾಟಿಸಿದ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಡಿ. ವಿ. ಪರಮಶಿವಮೂರ್ತಿಅವರು ಮಾನವಿಕ ವಿಜ್ಞಾನಗಳ ಸಂಶೋಧನೆಗೆ ಮೂಲಗಾಮಿ ಚಿಂತನೆಯ ಪರಿಕಲ್ಪನೆಯನ್ನು ಬೆಳಗಾವಿ ಜಿಲ್ಲೆಯವರಾದಡಾ.ಶಂಬಾ ಅವರೇ ಮೊದಲು ನಾಡಿಗೆ ನೀಡಿದರು.ಅಂದಿನಿಂದ ಬಹುಶಿಸ್ತೀಯ ಹಾಗೂ ಅಂತರ್‍ಶಿಸ್ತೀಯ ಮಾನವಿಕ ಅಧ್ಯಯನಗಳು ಹೊಸದಾಗಿ ಕಟ್ಟಿಕೊಳ್ಳತೊಡಗಿದವು.ಆ ಕಾರಣಕ್ಕಾಗಿಬೆಳಗಾವಿ ಜಿಲ್ಲೆಯಸಂಶೋಧನಾ ಪರಂಪರೆಯನ್ನುಅಭಿನಂದಿಸಬೇಕಾಗಿದೆಎಂದರು..

ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಸ್. ಎಂ. ಗಂಗಾಧರಯ್ಯಅವರುನಾಡಿನ ಶ್ರೇಷ್ಠ ಸಂಸ್ಕøತಿಚಿಂತಕನಕುರಿತುಹೊಸದಾಗಿ ಅಧ್ಯಯನಗಳು ಕಟ್ಟಿಕೊಳ್ಳಬೇಕಾಗಿದೆ.ಡಾ. ಶಂಬಾ ಅವರು ಬೆಳಗಾವಿ ಜಿಲ್ಲೆಯತವರಿನವರಾದರೂ ಬೆಳಗಾವಿ ಜಿಲ್ಲೆಯಜನತೆಗೆಡಾ.ಶಂಬಾ ಅವರ ವಿಚಾರಧಾರೆಗಳು ತಲುಪುವಲ್ಲಿಸಫಲವಾಗಿಲ್ಲಎಂದು ಹಾಗೂ ಈಗ ಆ ಕಾರ್ಯವನ್ನುಕನ್ನಡಅಧ್ಯಯನ ಸಂಸ್ಥೆಯುಕೈಗೆತ್ತಿಕೊಂಡಿದೆಎಂದರು..

ವಿಚಾರ ಸಂಕಿರಣದಲ್ಲಿಡಾ. ಶಂಬಾ : ಸ್ಥಳನಾಮಗಳ ಪರಿಕಲ್ಪನೆಯ ಅಧ್ಯಯನಗಳು ಹಾಗೂ ಕರ್ನಾಟಕ ಸಂಸ್ಕøತಿಯ ಪೂರ್ವ ಪೀಠಿಕೆ ಮತ್ತುಕನ್ನಡತ್ವದ ಪ್ರಾಚೀನ ಶೋಧಗಳು ಎನ್ನುವ ಪ್ರಬಂಧಗಳು ಮಂಡನೆಯಾದವು. ಡಾ. ಎಸ್. ಎಸ್. ಅಂಗಡಿ, ಡಾ. ಜಿ. ವಿ. ರಾಜಣ್ಣಡಾ. ಕೆ.ರಾಮರೆಡ್ಡಿ, ಡಾ. ವಿ. ಎಸ್. ಮಾಳಿ, ಡಾ.ವಾಯ್.ಎಂ.ಯಾಕೊಳ್ಳಿ, ಶ್ರೀ.ದೀಪಕ ಕೃಷ್ಣ ಆಲೂರುಅಧ್ಯಯನ ಪೀಠದ ಸಂಚಾಲಕರಾದ ಪ್ರೊ. ವಿರೂಪಾಕ್ಷಿ ಪೂಜಾರಹಳ್ಳಿ, ಡಾ. ಶೋಭಾ ನಾಯಕ ಈ ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದರು..

ಡಾ. ಚಲುವರಾಜುಅವರು ಸಮಾರೋಪ ಸಮಾರಂಭದಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಪ್ರೊ.ಗುಂಡಣ್ಣ ಕಲಬುರ್ಗಿಅವರು ಉಪಸ್ಥಿತರಿದ್ದರು.ವಿವಿಧ ಗೋಷ್ಠಿಗಳನ್ನು ಡಾ.ಗಜಾನನ ನಾಯ್ಕ, ಡಾ.ಮಹೇಶ ಗಾಜಪ್ಪನವರ, ಡಾ. ಪಿ. ನಾಗರಾಜ, ಡಾ. ಹನುಮಂತಪ್ಪ ಸಂಜೀವಣ್ಣನವರ ನಡೆಸಿಕೊಟ್ಟರು. ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಅಧ್ಯಾಪಕರುಗಳು, ಸ್ನಾತಕೋತ್ತರ ವಿಭಾಗಗಗಳ ಅಧ್ಯಾಪಕರುಗಳು, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.