Belagavi News In Kannada | News Belgaum

ಸೆಬಿಗೆ ಡಿಆರ್‌ಎಚ್‌ಪಿ ಸಲ್ಲಿಸಿದ ನಾರ್ದರ್ನ್ ಆರ್ಕ್ ಕ್ಯಾಪಿಟಲ್

Hubballi : ವಿವಿಧ ಹಣಕಾಸು ಸೇವೆಗಳ ಪ್ಲಾಟ್ ಫಾರ್ಮ್ ಆದ ನಾರ್ದರ್ನ್ ಆರ್ಕ್
ಕ್ಯಾಪಿಟಲ್ ಲಿಮಿಟೆಡ್, ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ನ್ನು ಮಾರುಕಟ್ಟೆ
ನಿಯಂತ್ರಕ ಸೆಕ್ಯುರಿಟಿ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ಗೆ ಸಲ್ಲಿಸಿದೆ.

ರೂ.10 ಮುಖಬೆಲೆಯ ಈಕ್ವಿಟಿ ಷೇರಿನ ವಿತರಣೆಯ ಮೂಲಕ ಇನಿಷಿಯಲ್ ಪಬ್ಲಿಕ್ ಆಫರಿಂಗ್
ಮೂಲಕ ಹಣ ಸಂಗ್ರಹಿಸಲು ಕಂಪನಿ ಯೋಜಿಸಿದೆ. ಇದು ರೂ. 500 ಕೋಟಿ ವರೆಗಿನ ಒಟ್ಟು
ಮೊತ್ತದ ತಾಜಾ ಸಂಚಿಕೆ ಒಳಗೊಂಡಿರುತ್ತದೆ ಮತ್ತು 21,052,629 ಈಕ್ವಿಟಿ
ಷೇರುಗಳವರೆಗಿನ ಒಟ್ಟು ಮಾರಾಟದ ಆಫರ್ ಲಭ್ಯವಿದೆ.

ನಾರ್ದರ್ನ್ ಆರ್ಕ್ ವೈವಿಧ್ಯಮಯ ಹಣಕಾಸು ಸೇವೆಗಳ ವೇದಿಕೆಯಾಗಿದ್ದು, ಪ್ರಾಥಮಿಕವಾಗಿ
ಇದನ್ನು ಭಾರತದಲ್ಲಿ ಹಿಂದುಳಿದ ವರ್ಗದ ಕುಟುಂಬಗಳು ಮತ್ತು ವ್ಯವಹಾರಗಳ ಚಿಲ್ಲರೆ ಸಾಲದ
ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ನಾರ್ದರ್ನ್ ಆರ್ಕ್
ಭಾರತದಲ್ಲಿ ಕೇಂದ್ರೀಕೃತ ವಲಯಗಳಲ್ಲಿ ಸಾಲ ಒದಗಿಸುವಲ್ಲಿ ಪರಿಣತಿ ಸಾಧಿಸಿದೆ, ಆ
ವಲಯಗಳೆಂದರೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಹಣಕಾಸು, ಮೈಕ್ರೋಫೈನಾನ್ಸ್ ,
ಕನ್ಸ್ಯೂಮರ್ ಫೈನಾನ್ಸ್, ವಾಹನಕ್ಕೆ ಹಣಕಾಸು, ಕೈಗೆಟುಕುವ ಹೌಸಿಂಗ್ ಫೈನಾನ್ಸ್ ಮತ್ತು
ಕೃಷಿಗೆ ಹಣಕಾಸು. ನಾರ್ದರ್ನ್ ಆರ್ಕ್ ಎಂಎಸ್ಎಂಐ, ಎಂಎಫ್ಐ ಮತ್ತು ಗ್ರಾಹಕ ಹಣಕಾಸು
ವಲಯಗಳಲ್ಲಿ ಕ್ರಮವಾಗಿ 13 ವರ್ಷಗಳು, 14 ವರ್ಷಗಳು ಮತ್ತು ಎಂಟು ವರ್ಷಗಳಿಂದ
ಕಾರ್ಯನಿರ್ವಹಿಸುತ್ತಿದೆ.

21,052,629 ಈಕ್ವಿಟಿ ಷೇರುಗಳವರೆಗೆ ಒಟ್ಟು ಮಾರಾಟದ ಆಫರ್, ಲೀಪ್‌ಫ್ರಾಗ್
ಫೈನಾನ್ಷಿಯಲ್ ಇನ್‌ಕ್ಲೂಷನ್ ಇಂಡಿಯಾ (II) ಲಿಮಿಟೆಡ್‌ನಿಂದ 4,922,949ವರೆಗಿನ
ಒಟ್ಟುಗೂಡಿಸಿದ ಈಕ್ವಿಟಿ ಷೇರುಗಳನ್ನು; ಆಕ್ಷನ್ ಆಫ್ರಿಕಾ-ಏಷ್ಯಾ ಇನ್ವೆಸ್ಟ್ ಮೆಂಟ್
ಕಂಪನಿಯ ಒಟ್ಟು 1,265,476 ವರೆಗಿನ ಈಕ್ವಿಟಿ ಷೇರುಗಳು, ಆಗಸ್ಟಾ ಇನ್ವೆಸ್ಟ್
ಮೆಂಟ್ಸ್ II ಲಿಮಿಟೆಡ್ನ ಒಟ್ಟು 4,254,744 ಈಕ್ವಿಟಿ ಷೇರುಗಳು; ಏಯ್ಟ್ ರೋಡ್ಸ್
ಇನ್ವೆಸ್ಟ್‌ಮೆಂಟ್ಸ್ ಮಾರಿಷಸ್ II ಲಿಮಿಟೆಡ್ ಮೂಲಕ 2,237,030ವರೆಗಿನ
ಒಟ್ಟುಗೂಡಿಸಿದ ಈಕ್ವಿಟಿ ಷೇರುಗಳು; ದ್ವಾರಾ ಟ್ರಸ್ಟ್‌ನಿಂದ 1,631,949ವರೆಗಿನ
ಒಟ್ಟುಗೂಡಿಸಿದ ಈಕ್ವಿಟಿ ಷೇರುಗಳು; 360 ವನ್ ಸ್ಪೆಷಲ್ ಅಪಾರ್ಚುನಿಟೀಸ್ ಫಂಡ್ ನಿಂದ
5,000,000ವರೆಗಿನ ಒಟ್ಟುಗೂಡಿಸಿದ ಈಕ್ವಿಟಿ ಷೇರುಗಳು; 360 ವನ್ ಸ್ಪೆಷಲ್
ಒಪ್ಪೋರ್ಚುನಿಟಿಸ್ ಫಂಡ್ ಸೀರೀಸ್-2ನಿಂದ 107,696ವರೆಗೆ ಒಟ್ಟುಗೂಡಿಸಿದ ಈಕ್ವಿಟಿ
ಷೇರುಗಳು; 360 ವನ್ ಸ್ಪೆಷಲ್ ಒಪ್ಪೋರ್ಚುನಿಟಿಸ್ ಫಂಡ್ ಸೀರೀಸ್-3 ರಿಂದ 47,373
ವರೆಗಿನ ಒಟ್ಟುಗೂಡಿಸಿದ ಈಕ್ವಿಟಿ ಷೇರುಗಳು; 360 ವನ್ ಸ್ಪೆಷಲ್ ಅಪಾರ್ಚುನಿಟೀಸ್
ಫಂಡ್ ಸೀರೀಸ್-4ನಿಂದ 162,817 ವರೆಗಿನ ಒಟ್ಟುಗೂಡಿಸುವ ಈಕ್ವಿಟಿ ಷೇರುಗಳು; 360 ವನ್
ಸ್ಪೆಷಲ್ ಒಪ್ಪೋರ್ಚುನಿಟಿಸ್ ಫಂಡ್ ಸೀರೀಸ್- 5 ರಿಂದ 133,595ವರೆಗೆ ಒಟ್ಟುಗೂಡಿಸುವ
ಈಕ್ವಿಟಿ ಷೇರುಗಳು; 360 ವನ್ ಸ್ಪೆಷಲ್ ಒಪ್ಪೋರ್ಚುನಿಟಿಸ್ ಫಂಡ್ ಸೀರೀಸ್- 6ರಿಂದ
5,481ವರೆಗೆ ಒಟ್ಟುಗೂಡಿಸುವ ಈಕ್ವಿಟಿ ಷೇರುಗಳು;360 ವನ್ ಸ್ಪೆಷಲ್ ಅಪಾರ್ಚುನಿಟೀಸ್
ಫಂಡ್ ಸೀರೀಸ್- 6ರಿಂದ 132,299ವರೆಗೆ ಒಟ್ಟುಗೂಡಿಸುವ ಈಕ್ವಿಟಿ ಷೇರುಗಳು; ಸುಮಿಟೊಮೊ
ಮಿಟ್ಸುಯಿ ಬ್ಯಾಂಕಿಂಗ್‌ನಿಂದ 1,151,220 ವರೆಗೆ ಒಟ್ಟುಗೂಡಿಸುವ ಈಕ್ವಿಟಿ
ಷೇರುಗಳನ್ನು ಒಳಗೊಂಡಿದೆ.

ನಾರ್ದರ್ನ್ ಆರ್ಕ್ ಕ್ಯಾಪಿಟಲ್ ಲಿಮಿಟೆಡ್, ಮುಂದಿನ ಸಾಲ ನೀಡುವುದಕ್ಕಾಗಿನ ಭವಿಷ್ಯದ
ಬಂಡವಾಳದ ಅವಶ್ಯಕತೆಗಳನ್ನು ಪೂರೈಸಲು ನಿವ್ವಳ ಆದಾಯವನ್ನು ಬಳಸಿಕೊಳ್ಳಲು
ಪ್ರಸ್ತಾಪಿಸುತ್ತದೆ.

ಐಸಿಐಸಿಐ ಸೆಕ್ಯುರಿಟೀಸ್ ಲಿಮಿಟೆಡ್, ಆಕ್ಸಿಸ್ ಕ್ಯಾಪಿಟಲ್ ಲಿಮಿಟೆಡ್ ಮತ್ತು
ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈ ಇಶ್ಯೂವಿನ ಬುಕ್
ರನ್ನಿಂಗ್ ಲೀಡ್ ಮ್ಯಾನೇಜರ್‌ಗಳು.