Belagavi News In Kannada | News Belgaum

ನೆರವು ಸಂಸ್ಥೆಯ ಸಿಬ್ಬಂದಿಗಳಿಗೆ 3 ದಿನಗಳ ಯೋಜನಾ ಪರಿಚಯ ತರಬೇತಿ

ಬೆಳಗಾವಿ,ಫೆ.15 : ನಿರಂತರ ನೀರು ಸರಬರಾಜು ಯೋಜನೆಯ ಕಲಬುರಗಿ, ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ನಗರದ ನೆರವು ಸಂಸ್ಥೆಯ ಸಿಬ್ಬಂದಿಗಳಿಗೆ ಫೆ. 8 ರಿಂದ ಫೆ.10 ರವರೆಗೆ 3 ದಿನಗಳ ಯೋಜನಾ ಪರಿಚಯ ತರಬೇತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು..

ನಂತರ 3 ದಿನಗಳ ಕಾಲ, ನಿರಂತರ ನೀರು ಸರಬರಾಜು ಯೋಜನೆಯ ಪರಿಚಯ, ವಿವಿಧ ಭಾಗೀದಾರರು, ಅವರ ಪಾತ್ರ, 3 ನಗರಗಳಲ್ಲಿ ಅನುಷ್ಠಾನವಾದ ನಿರಂತರ ನೀರು ಪ್ರಾತ್ಯಕ್ಷಿಕ ವಲಯ, ನಳ ಸಂಪರ್ಕ ನೀತಿ, ಸಾಮಾಜಿಕ ಮಧ್ಯಸ್ಥಿಕೆಯ ಚಟುವಟಿಕೆಗಳ ವಿವರ, ನೆರವು ಸಂಸ್ಥೆಗಳ ಪಾತ್ರ, ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳು, ವರದಿ ನೀಡಬೇಕಾದ ನಮೂನೆಗಳು, ನೀರಿನ ಸದ್ಬಳಕೆ, ಮೀಟರಗಳ ಸುರಕ್ಷತೆ, ಪರಿಸರ, ಆರೋಗ್ಯ, ಮತ್ತು ಸುರಕ್ಷತಾ ಕ್ರಮಗಳು, ನೀರಿನ ಗುಣಮಟ್ಟ ಪರೀಕ್ಷೆ, ಯೋಜನೆಯಲ್ಲಿ ನಿರ್ಮಿಸಲಾಗುತ್ತಿರುವ ನೀರು ಸರಬರಾಜು ಆಸ್ತಿಗಳು, ನೀರಿನ ಮಹತ್ವ, ಆದ್ಯತಾ ವಲಯಗಳಲ್ಲಿ ನೆರವು

 

ಸಂಸ್ಥೆಯವರು ಕಾರ್ಯನಿರ್ವಹಿಸುವಾಗ ಗ್ರಾಹಕರ ಮ್ಯಾಪಿಂಗ ಮಾಡುವಾಗ ಬಳಸಬಹುದಾದ ಕೋಬೋ ಟೂಲ್ ಬಳಕೆಯ ಕ್ರಮ, ಅದರ ಮಹತ್ವ, ವರದಿ ತಯಾರಿಸುವ ವಿಧಾನ, ಕೈಗೊಳ್ಳಬೇಕಾದ ಸಮಾಲೋಚನಾ ಸಭೆಗಳು, ವಿಶೇಷ ಅಭಿಯಾನಗಳು, ಗ್ರಾಹಕ ಸೇವಾ ಕೇಂದ್ರ (ಸಿಎಸ್‍ಸಿ) ಸಮುದಾಯ ಸಂಪರ್ಕ ಕೇಂದ್ರ (ಸಿಎಲ್‍ಸಿ)ಹಾಗೂ ಕೇಂದ್ರೀಕೃತ ಗ್ರಾಹಕ ಕೇಂದ್ರ (ಸಿಸಿಸಿ) ಗಳ ಕಾರ್ಯವೈಖರಿ ಮುಂತಾದ ವಿಷಯಗಳ ಬಗ್ಗೆ ತರಬೇತಿ ನೀಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯ ಯೋಜನಾ ಅನುಷ್ಠಾನ ಘಟಕದ ಅಧೀಕ್ಷಕ ಅಭಿಯಂತರರಾದ ಅಶೋಕ ಬುರಕುಲೆರವರು, ಸ್ಮೆಕ್ ಕನ್ಸಲ್ಟೆನ್ಸಿಯ ತಂಡದ ನಾಯಕರಾದ ರಾಮಚಂದ್ರಯ್ಯ, ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರರಾದ ಸಿದ್ದಗೊಂಡ, ಕೆಯುಐಡಿಎಫ್‍ಸಿ ಕೇಂದ್ರ ಕಛೇರಿಯ ಸಾಮಾಜಿಕ ಅಭಿವೃದ್ಧಿ ವ್ಯವಸ್ಥಾಪಕರಾದ ಎಂ. ಆಂಜನಪ್ಪ ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಯೋಜನಾ ಅನುಷ್ಠಾನ ಘಟಕದ ನಾಗಯ್ಯ ಹಿರೇಮಠ, ಭಗವಾನದಾಸ್, ಬಿ.ಎಚ್.ಲಕ್ಕಣ್ಣವರ, ಪ್ರಕಾಶ ಸಿ ಕೋಷ್ಠಿ, ಸೌಮ್ಯ ಎನ್.ಪಿ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು..

ಈ ತರಬೇತಿಯಲ್ಲಿ ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ನಗರದ ನೆರವು ಸಂಸ್ಥೆಯ 75 ಜನ ಸಿಬ್ಬಂದಿಗಳು, ನಗರಗಳ ಯೋಜನಾ ಅನುಷ್ಠಾನ ಘಟಕದ ಅಧಿಕಾರಿಗಳು, ನೆರವು ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು. ಪ್ರಕಾಶ ಸಿ ಕೋಷ್ಠಿ ನಿರೂಪಿಸಿದರು. ನಾಗಯ್ಯ ಹಿರೇಮಠ ವಂದಿಸಿದರು.